ಕರಾಟೆ ಕಿಂಗ್ ಶಂಕರ್ ನಾಗ್ ಅವರ ಸಿನಿಮಾಗಳು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇವರು ಕೇವಲ ಕಡಿಮೆ ವರ್ಷದಲ್ಲಿ ಬದುಕಿದರು ಕೂಡ ಹೆಚ್ಚು ಸಾಧನೆಯನ್ನು ಮಾಡಿದ ಹೀರೋ ಎಂದು ಹೇಳಬಹುದು. ಇನ್ನು ಇವರ ಸಿನಿಮಾಗಳಲ್ಲಿ ನಟಿಸಿದ ನಟಿಯರು ಕೂಡ ಒಂದು ಒಳ್ಳೆಯ ಜನಪ್ರಿಯತೆಯನ್ನು ಸಾಧಿಸಿದ್ದಾರೆ ಎಂದರೆ ಆ ಮಾತು ತಪ್ಪಾಗಲಾರದು.
ಇನ್ನು ನಟ ಶಂಕರ್ ನಾಗ್ ಅವರ ಹೊಸ ಜೀವನ ಸಿನಿಮಾ ಅಂತು ಸೂಪರ್ ಡೂಪರ್ ಹಿಟ್ ಎಂದು ಹೇಳಬಹುದು. ಇದರಲ್ಲಿ ಶಂಕರ್ ನಾಗ್ ಅವರು ನಾಯಕ ನಟರಾಗಿ ಅಭಿನಯಿಸಿದ್ದಾರೆ ಹಾಗೆ ದೀಪಿಕಾ ಚಿಖಾಲಿಯಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಇನ್ನು ದೀಪಿಕಾ ಅವರು ಬಾಲಿವುಡ್ ನಲ್ಲಿ ಒಂದು ಒಳ್ಳೆಯ ಗುರುತನ್ನು ಸಾಧಿಸಿಕೊಂಡಿದ್ದಾರೆ ಎಂದು ಹೇಳಬಹುದು.
ಇವರು ಏಪ್ರಿಲ್ 29 1965 ರಂದು ಬಾಂಬೆನಲ್ಲಿ ಜನಿಸಿದ್ದಾರೆ. ಇವರ ಪೂರ್ತಿ ಹೆಸರು ದೀಪಿಕ ಚಿಖಾಲಿಯಾ ಟೋಪಿವಾಲ ಎಂದು. ಇನ್ನು ದೀಪಿಕಾ ಅವರು ಮೊದಲು 1983 ರಲ್ಲಿ ಹಿಂದಿಯಲ್ಲಿ ಸನ್ ಮೇರಿ ಲೈಲಾ ಚಿತ್ರದ ಮೂಲಕ ತಮ್ಮ ಸಿನಿಮಾ ಕರಿಯರನ್ನು ಶುರು ಮಾಡಿಕೊಂಡರು. ಇವರು ಹಿಂದಿ ಅಲ್ಲದೆ ಮಲಯಾಳಂ ಭೋಜಪುರಿ ಕನ್ನಡ ತೆಲುಗು ಬೆಂಗಾಲಿ ಗುಜರಾತಿ ಭಾಷೆಗಳ ಚಿತ್ರಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ.
ಅದರಲ್ಲೂ ನಮ್ಮ ಸ್ಯಾಂಡಲ್ವುಡ್ ಗೆ 1989 ರಲ್ಲಿ ಬಿಡುಗಡೆಯಾದ ಇಂದ್ರಜಿತ್ ಎನ್ನುವ ಚಿತ್ರದ ಮೂಲಕ ನಾಯಕಿಯಾಗಿ ನಟಿಸಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. ತದನಂತರ ಹೊಸ ಜೀವನ, ಕಾಲಚಕ್ರ, ಮೇಯರ್ ಪ್ರಭಾಕರ್ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ದೀಪಿಕಾ ಅವರು ಕನ್ನಡದಲ್ಲಿ ಕೇವಲ 4 ಚಿತ್ರಗಳಲ್ಲಿ ಅಭಿನಯ ಮಾಡಿದರೂ ಕೂಡ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ದೋಚಿಕೊಂಡರು.
ಹಾಗೆಯೇ ದೀಪಿಕಾ ಅವರು ಹೇಮಂತ್ ಟೋಪಿವಾಲ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಜೋಹಿ ಟೋಪಿವಾಲ ಮತ್ತು ನಿಧಿ ಟೋಪಿವಾಲ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಟಿ ದೀಪಿಕಾ ಅವರು ಮೊದಲು ನೋಡುವುದಕ್ಕೆ ಮತ್ತು ಈಗ ನೋಡುವುದಕ್ಕೆ ತುಂಬಾನೇ ಬದಲಾಗಿದ್ದಾರೆ. ಈಗ ಇವರು ಹೇಗಿದ್ದಾರೆ ಎನ್ನುವ ಕೆಲ ಫೋಟೋಗಳನ್ನು ನೋಡಬಹುದು…..