Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ವಿಷ್ಣು ಸರ್ ಅವರ ಈ ಒಂದು ಸಿನಿಮಾವನ್ನು ಯಾರೇ ನೋಡದೇ ಹೋದರೂ ಅವರ ಬದುಕೇ ವ್ಯರ್ಥ..!!

0

ಎಲ್ಲರಿಗೂ ಮಹಾಭಾರತದಲ್ಲಿ ಯಾವ ಪಾತ್ರವು ಇಷ್ಟವಾಗುತ್ತದೆ ಎಂದು ಕೇಳಿದರೆ ಬಹುತೇಕ ಜನರು ಕರ್ಣನ ಪಾತ್ರ ಎಂದು ಹೇಳುತ್ತಾರೆ. ಇದರ ಜೊತೆಗೆ ವಿಷ್ಣು ಸರ್ ಅವರ ಸಿನಿಮಾಗಳಲ್ಲಿ 10 ಸಿನಿಮಾಗಳನ್ನು ಪಟ್ಟಿಮಾಡಿ ಹೇಳಿ ಎಂದರೆ ಎಲ್ಲರೂ ಕೂಡ ಸಾಕಷ್ಟು ವಿಧವಾದ ವಿಷ್ಣು ಸರ್ ಸಿನಿಮಾಗಳ ಹೆಸರನ್ನು ಹೇಳುತ್ತಾರೆ. ಆದರೆ ಅದರಲ್ಲಿ ಬಹುತೇಕ ಜನರು ಕರ್ಣ ಸಿನಿಮಾ ಎಂದು ಹೇಳುತ್ತಾರೆ.

ಏಕೆಂದರೆ ಈ ಸಿನಿಮಾ ಈಗ ಮಾತ್ರವಲ್ಲ ಭೂತ ವರ್ತಮಾನ ಮತ್ತು ಭವಿಷ್ಯ ಕಾಲಗಳಿಗೆ ಅನುಗುಣವಾಗುತ್ತದೆ. ಏಕೆಂದರೆ ಈ ಸಿನಿಮಾದ ಕಥೆ ಆ ರೀತಿ ಇದೆ. ಇನ್ನು ಈ ಸಿನಿಮಾದಲ್ಲಿ ವಿಷ್ಣು ಸರ್ ಅವರು ಮಾಡಿದ ಕರ್ಣನ ಪಾತ್ರವು ಅಜರಾಮರ ಎಂದು ಹೇಳಬಹುದು. ಆಗಿನ ಕಾಲದ ಕರ್ಣನನ್ನು ಈ ಸಿನಿಮಾದ ಮೂಲಕ ವಿಷ್ಣು ಸರ್ ಅವರಲ್ಲಿ ನಾವು ನೋಡಬಹುದು.

ಇನ್ನು ಈ ಸಿನಿಮಾ 1986 ರಂದು ಬಿಡುಗಡೆಯಾಗಿದ್ದು ಎಚ್ ಆರ್ ಭಾರ್ಗವ ಅವರು ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಬಿ ಅನುರಾಧ ಸಿಂಗ್, ಆರ್ ದುಷ್ಯಂತ್ ಸಿಂಗ್, ಆರ್ ಅಮೃತಾ ಸಿಂಗ್ ಅವರು ನಿರ್ಮಾಣ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ಎಂ ರಂಗರಾವ್ ಅವರು ಸಂಗೀತ ನಿರ್ದೇಶನವನ್ನು ಬಹಳ ಸೊಗಸಾಗಿ ನೀಡಿದ್ದಾರೆ. ಇನ್ನೂ ಮುಖ್ಯವಾಗಿ ಹೇಳಬೇಕು ಎಂದರೆ ಈ ಸಿನಿಮಾದ ನಾಯಕನಂತೆ ಸುಮಿತ್ರಾ ಅವರು ಕೂಡ ತಮ್ಮ ಪಾತ್ರವನ್ನು ಬಹಳ ಸೊಗಸಾಗಿ ಮಾಡಿದ್ದಾರೆ.

 

ಈ ಚಿತ್ರದಲ್ಲಿ ಸುಮಿತ್ರಾ ಅವರು ವಿಷ್ಣು ಅವರಿಗೆ ಅತ್ತಿಗೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಸುಮಿತ್ರಾ ಅವರು ವಿಷ್ಣುವರ್ಧನ್ ಅವರ ಅತ್ತಿಗೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎಲ್ಲರೂ ಕೂಡ ಕಡ್ಡಾಯವಾಗಿ ನೋಡಲೇಬೇಕು. ಇದರಲ್ಲಿ ವಿಷ್ಣು ಅವರು ಬಹಳ ಚನ್ನಾಗಿ ಓದಿದ್ದು ನಿರುದ್ಯೋಗಿಯಾಗಿರುತ್ತಾರೆ. ಇವರಿಗೆ ಫುಟ್ಬಾಲ್ ಎಂದರೆ ತುಂಬಾ ಇಷ್ಟ ಅದರಲ್ಲೂ ಗೋಲ್ ಕೀಪರ್ ಆಗಿ ಆಟ ಆಡುತ್ತಾರೆ.

ಆದರೆ ವಿಷ್ಣುವರ್ಧನ್ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದ ಅಶ್ವತ್ಥ್ ಅವರಿಗೆ ಮಗ ಓದುವುದಿಲ್ಲ ಅದರಲ್ಲೂ ಈ ರೀತಿ ಆಟವಾಡಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ ಎನ್ನುವ ಅಭಿಪ್ರಾಯದಲ್ಲಿ ಇದ್ದರು. ಮನೆಯಲ್ಲಿ ವಿಷ್ಣು ಅವರು ತಮ್ಮ ಅತ್ತಿಗೆ ಪ್ರೀತಿಯ ತಂಗಿ ಪ್ರೀತಿಸಿದ ಹುಡುಗಿ ಮತ್ತು ಅವರ ತಂದೆಯಗೋಸ್ಕರ ಬದುಕುತ್ತಿದ್ದರು. ಆದರೆ ವಿಷ್ಣು ಅವರ ಇಬ್ಬರು ಅಣ್ಣಂದಿರು ಮಾತ್ರ ಅವರನ್ನು ಲೆಕ್ಕ ಮಾಡುತ್ತಿರಲಿಲ್ಲ.

ಒಂದು ದಿನ ವಿಷ್ಣು ಅವರ ತಂಗಿಯ ಮದುವೆ ಫಿಕ್ಸ್ ಆಗುತ್ತದೆ. ಮದುವೆಯನ್ನು ಮಾಡಲು ಅಶ್ವತ್ಥ್ ಅವರು ಮನೆಯನ್ನು ಮಾರಬೇಕು ಎನ್ನುವ ಸ್ಥಿತಿಗೆ ಬರುತ್ತಾರೆ. ಆಗ ಮನೆ ಬರುವುದಾದರೆ ನನಗೆ ಮದುವೆ ಬೇಡ ಎಂದು ವಿಷ್ಣು ಅವರ ತಂಗಿ ಹೇಳುತ್ತಾರೆ. ಮದುವೆ ಮಾಡಲು ಹಣವನ್ನು ಕೇಳಿದಾಗ ವಿಷ್ಣು ಅವರ ಇಬ್ಬರು ಸಹೋದರರು ಕೂಡ ತಪ್ಪಿಸಿಕೊಳ್ಳುತ್ತಾರೆ.

ಆದರೆ ವಿಷ್ಣು ಅವರು ಮಾತ್ರ ತನ್ನ ತಂಗಿ ಮದುವೆ ಆಗಬೇಕು ಮನೆಯನ್ನು ಮಾರಬಾರದು ಮತ್ತು ವಿಷ್ಣು ಅವರ ಜೀವನವು ಕಟ್ಟಿಕೊಳ್ಳಬೇಕು ಎಂದು ಒಂದು ಯೋಚನೆಯನ್ನು ಮಾಡುತ್ತಾರೆ.

ಅದು ಏನೆಂದರೆ ಕರ್ಣ ಮಹಾಭಾರತದಲ್ಲಿ ವಜ್ರದ ಕುಂಡಲಿಗಳನ್ನು ನೀಡಿದರೆ ಈ ಸಿನಿಮಾದಲ್ಲಿ ವಿಷ್ಣು ಅವರು ತಂಗಿಯ ಮದುವೆಗೋಸ್ಕರ ತನ್ನ ದೇಹದಲ್ಲಿರುವ ಒಂದು ಭಾಗವನ್ನು ಅಂದರೆ ಮೂತ್ರಪಿಂಡವನ್ನು ದಾನ ಮಾಡುತ್ತಾರೆ. ಇದರಿಂದ ವಿಷ್ಣು ಅವರು ಕರ್ಣನಿಗೆ ಸಾಕ್ಷಿಯಾಗಿ ನೆನಪಿಸುತ್ತಾರೆ……

Leave A Reply