ಒಂದಾನೊಂದು ಕಾಲದಲ್ಲಿ ಇವರು ತುಂಬಾನೆ ಜನಪ್ರಿಯ ನಟಿ ಎಂದು ಹೇಳಬಹುದು. ಅವರು ಬೇರೆ ಯಾರೂ ಅಲ್ಲ ದೇವಯಾನಿ. ದೇವಯಾನಿ ಅವರು ಜೂನ್ 22 1974 ರಂದು ಮುಂಬೈನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಜಯದೇವ ಮತ್ತು ತಾಯಿಯ ಹೆಸರು ಲಕ್ಷ್ಮಿ ಎಂದು. ಇವರು ತಮಿಳು ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ದೇವಯಾನಿ ಅವರು ಕೆಲ ಬೆಂಗಾಲಿ ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ. ಇವರು 1993 ರಲ್ಲಿ ಶಾಟ್ ಪಂಚೋಮಿ ಎನ್ನುವ ಬೆಂಗಾಲಿ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ ಇವರು 1999 ರಲ್ಲಿ ಪ್ರೇಮೋತ್ಸವ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಇದಾದ ಮೇಲೆ 2021 ರಲ್ಲಿ ಮದಗಜ ಚಿತ್ರದಲ್ಲಿ ನಟಿಸಿದ್ದಾರೆ.
ಇವರು ಕನ್ನಡದಲ್ಲಿ ಕೇವಲ 2 ಚಿತ್ರದಲ್ಲಿ ನಟಿಸಿದರೂ ಕೂಡ ಕನ್ನಡದಲ್ಲಿ ತುಂಬ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇನ್ನೂ ಇವರು ಕೆಲ ತಮಿಳು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ ಮತ್ತು ಕೆಲ ಮಲಯಾಳಂ ಮತ್ತು ತಮಿಳು ಶೂಗಳಿಗೆ ಜಡ್ಜ್ ಕೂಡ ಮಾಡಿದ್ದಾರೆ. ಇನ್ನೂ ದೇವಯಾನಿ ಅವರು ನಿರ್ದೇಶಕರಾದ ರಾಜಕುಮಾರನ್ ಅವರನ್ನು ಪ್ರೀತಿಸಿ ಮನೆಯವರನ್ನು ಎದುರಿಸಿ ವಿವಾಹ ಮಾಡಿಕೊಂಡಿದ್ದಾರೆ.
ಪ್ರೀತಿ ವಿವಾಹ ಮಾಡಿಕೊಂಡಿದ್ದರಿಂದ ಇಬ್ಬರ ಕುಟುಂಬದವರು ಕೂಡ ಇವರನ್ನು ದೂರ ಇಟ್ಟರು. ದೇವಯಾನಿ ಅವರಿಗೆ ಇನಿಯ ಮತ್ತು ಪ್ರಿಯಾಂಕ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳು ಹುಟ್ಟಿದ ಮೇಲೆ ಇವರಿಗೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ಕಡಿಮೆಯಾದವು. ಇದರ ಜೊತೆಗೆ ಇವರ ಪತಿಗೆ ಕೂಡ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದರು.
ತನ್ನ ಪತಿಯನ್ನು ಯಾವುದೇ ಕಾರಣಕ್ಕೂ ದೂಷಿಸದೆ ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನು ದೇವಯಾನಿ ಅವರು ಹೊತ್ತುಕೊಂಡರು. ಹೌದು ದೇವಯಾನಿ ಅವರು ಪ್ರಸ್ತುತ ಪ್ರೈವೇಟ್ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೌದು ಇವರು ಚರ್ಚ್ ಪಾರ್ಕ್ ಸ್ಕೂಲ್ ನಲ್ಲಿ ಕಾಂಟ್ರ್ಯಾಕ್ಟ್ ಮೇಲೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಬರುತ್ತಿರುವ ಸಂಬಳದಲ್ಲಿ ನಾನು ತುಂಬಾ ಖುಷಿಯಾಗಿದ್ದೇನೆ ಮತ್ತು ಮಕ್ಕಳನ್ನು ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. 100 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಈ ನಟಿ ಈಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದು ಅವರು ಎಷ್ಟು ಸಿಂಪಲ್ ಮತ್ತು ಕುಟುಂಬಕ್ಕಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂದು ತೋರಿಸುತ್ತದೆ. ಮತ್ತೊಬ್ಬರಾಗಿದ್ದರೆ ಈ ರೀತಿಯಾಗಿ ಮಾಡುವುದು ತುಂಬಾನೇ ಕಷ್ಟ ಆಗುತ್ತಿತ್ತು…..