Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ವಿಭಿನ್ನವಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡು ನಟಿಯರು, ಯಾರ್ ಯಾರು ಗೊತ್ತೇ ?? ದೊಡ್ಡ ದೊಡ್ಡ ನಟಿಯರು ಲಿಸ್ಟ್ನಲ್ಲಿ !!

0

ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ನಟ ನಟಿಯರು ತಮ್ಮ ಜೀವನದಲ್ಲಿ ಆಗುವ ಯಾವುದೇ ಒಂದು ಖುಷಿಯ ಘಟನೆಯನ್ನು ಕೂಡ ತಮ್ಮ ಅಭಿಮಾನಿಗಳೊಂದಿಗೆ ತುಂಬಾ ಗ್ರ್ಯಾಂಡ್ ಆಗಿ ತೋರಿಸಿ ಹಂಚಿಕೊಳ್ಳುತ್ತಾರೆ. ನಿಶ್ಚಿತಾರ್ಥ ಮದುವೆ ಸೀಮಂತ ಮಕ್ಕಳ ಜನನ ನಾಮಕರಣ ಹೀಗೆ ಸಾಕಷ್ಟು ಖುಷಿಯ ವಿಚಾರವನ್ನು ವಿಭಿನ್ನವಾಗಿ ಹೇಳಿಕೊಳ್ಳುತ್ತಾರೆ. ಇನ್ನೂ ಇದರಂತೆಯೇ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇರುವ ನಟಿಯರು ತಾವು ಗರ್ಭಿಣಿಯಾಗಿದ್ದ ಸಮಯದಲ್ಲಿ ಹೇಗೆ ವಿಭಿನ್ನವಾಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ ಎಂದು ಇಲ್ಲಿ ನೋಡೋಣ ಬನ್ನಿ..

ಗೋಲ್ಡನ್ ಕ್ವೀನ್ ಅಮೂಲ್ಯ ಅವರು ರಾಜಕೀಯ ವ್ಯಕ್ತಿ ಆಗಿರುವ ಜಗದೀಶ್ ಆರ್ ಚಂದ್ರ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರು ಮಾರ್ಚ್ 1 ಅಂದರೆ ಇದೇ ವರ್ಷ ಶಿವರಾತ್ರಿ ಹಬ್ಬದ ದಿನದಂದು ಅವಳಿ ಜವಳಿ ಗಂಡು ಮಕ್ಕಳಿಗೆ ಜನನ ನೀಡಿದ್ದಾರೆ. ಇಲ್ಲಿ ನೀವು ಅಮೂಲ್ಯ ಅವರು ತಮ್ಮ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ಕೆಲ ಫೋಟೋಗಳು ನಿಮಗಾಗಿ.

ಸ್ಯಾಂಡಲ್ ವುಡ್ ತಾರೆ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರಿಗೆ ಹೆಣ್ಣು ಮಗು ಮತ್ತು ಗಂಡು ಮಗು ಇದೆ. ಇಲ್ಲಿ ನೀವು ರಾಧಿಕಾ ಪಂಡಿತ್ ಅವರ ಸೀಮಂತದ ಕೆಲ ಫೋಟೋಗಳನ್ನು ನೋಡಬಹುದು.

ಮಯೂರಿ ಕ್ಯಾತರಿ ಅವರು ಕಿರುತೆರೆಯಲ್ಲಿ ನಟಿಸಿದ ಮೇಲೆ ಬೆಳ್ಳಿ ತೆರೆಗೆ ಬಂದರು. ಇವರು ಅರುಣ್ ರಾಜು ಎಂಬುವವರನ್ನು ಮದುವೆ ಮಾಡಿಕೊಂಡಿದ್ದು ಇವರಿಗೆ ಈಗ ಒಬ್ಬ ಗಂಡು ಮಗು ಇದೆ. ಮಯೂರಿ ಕ್ಯಾತರಿ ಅವರ ಬೇಬಿ ಬಂಪ್ ಫೋಟೋ ಗಳನ್ನು ಇಲ್ಲಿ ನೋಡಬಹುದು.

ಖ್ಯಾತ ನಟಿ ನಮಿತಾ ಅವರು ವೀರೇಂದ್ರ ಚೌಧರಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರಿಗೂ ಕೂಡ ಅವಳಿಜವಳಿ ಗಂಡು ಮಕ್ಕಳ ಜನನವಾಗಿದೆ. ಇಲ್ಲಿ ನೀವು ನಮಿತಾ ಅವರ ಬೇಬಿ ಬಂಪ್ ಫೋಟೋಗಳನ್ನು ನೋಡಬಹುದು.

ದಿಶಾ ಮದನ್ ಅವರು ಶಶಾಂಕ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗುವಿದೆ. ಇಲ್ಲಿ ನೀವು ದಿಶಾ ಮದನ್ ಅವರು ಮಾಡಿಸಿರುವ ಬೇಬಿ ಬಂಪ್ ಫೋಟೋ ಶೂಟ್ ಫೋಟೋಗಳನ್ನು ನೋಡಬಹುದು.

ಖ್ಯಾತ ನಟಿ ಪ್ರಣಿತಾ ಸುಭಾಷ್ ಅವರು ನಿತಿನ್ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ. ಇವರಿಗೆ ಒಂದು ಹೆಣ್ಣು ಮಗುವಿದೆ. ಇಲ್ಲಿ ನೀವು ಪ್ರಣಿತಾ ಸುಭಾಷ್ ಅವರ ಬೇಬಿ ಬಂಪ್ ಫೋಟೋಗಳನ್ನು ನೋಡಬಹುದು.

ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಬ್ಬ ಗಂಡು ಮಗ ಇದ್ದಾನೆ. ಇಲ್ಲಿ ನೀವು ಮೇಘನಾ ರಾಜ್ ಅವರ ಸೀಮಂತದ ಕೆಲ ಫೋಟೋಗಳನ್ನು ನೋಡಬಹುದು.

ಶ್ವೇತ ಶ್ರೀವಾತ್ಸವ್ ಅವರು ಅಮಿತ್ ಅವರನ್ನು ವಿವಾಹ ಮಾಡಿಕೊಂಡಿದ್ದು ಇವರಿಗೆ ಒಬ್ಬಳು ಮಗಳು ಇದ್ದಾಳೆ. ಇಲ್ಲಿ ನೀವು ಶ್ವೇತ ಶ್ರೀವಾತ್ಸವ್ ಅವರ ಬೇಬಿ ಬಂಪ್ ಫೋಟೋಗಳನ್ನು ನೋಡಬಹುದು.

ಸಂಜನಾ ಗಲ್ರಾಣಿ ಅವರು ಡಾಕ್ಟರ್ ಆಗಿರುವ ಅಜೀಜ್ ಪಾಷಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರು ಗಂಡು ಮಗುವಿಗೆ ಜನ್ಮ ನೀಡಿದ್ದು ಇಲ್ಲಿ ನೀವು ಸಂಜನಾ ಗಲ್ರಾಣಿ ಅವರ ಬೇಬಿ ಬಂಪ್ ಫೋಟೋಗಳನ್ನು ನೋಡಬಹುದು.

ಅನು ಪ್ರಭಾಕರ್ ಅವರು ರಘು ಮುಖರ್ಜಿ ಅವರನ್ನು ವಿವಾಹ ಮಾಡಿಕೊಂಡಿದ್ದು ಇವರಿಗೆ ಒಬ್ಬಳು ಮಗಳು ಇದ್ದಾಳೆ. ಇಲ್ಲಿ ನೀವು ಅನು ಪ್ರಭಾಕರ್ ಅವರ ಬೇಬಿ ಬಂಪ್ ಫೋಟೋಗಳನ್ನು ನೋಡಬಹುದು……

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply