ವಿದೇಶದಲ್ಲಿ ಓದುತ್ತಿದ್ದ ಮಗಳು ಧೃತಿ ಖರ್ಚಿಗೆ ಅಪ್ಪು ನೀಡುತ್ತಿದ್ದ ಹಣವನ್ನು ಯಾವ ಕಾರ್ಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದರು ಗೊತ್ತಾ ?? ಅಪ್ಪನಿಗೆ ತಕ್ಕ ಮಗಳು ಕಣ್ರೀ !!
ಅಪ್ಪು ಅವರ ದೊಡ್ಡ ಮಗಳು ಧೃತಿ ಅಮೇರಿಕಾದಲ್ಲಿ ಶಿಕ್ಷಣದ ವ್ಯಾಸಂಗವನ್ನು ಮಾಡುತ್ತಿದ್ದರು. ಅಪ್ಪನ ಸಾವಿನ ವಿಚಾರ ತಿಳಿಯುತ್ತಿದ್ದ ಹಾಗೆಯೇ ಧೃತಿ ಅಲ್ಲಿಂದ ತಕ್ಷಣವೇ ಬಂದರು. ಉನ್ನತ ಶಿಕ್ಷಣಕ್ಕಾಗಿ ಧೃತಿ ಅಮೇರಿಕಾಗೆ ಹೋಗಿದ್ದರು. ಯಾವ ಮಗಳಿಗೂ ಕೂಡ ಅಪ್ಪನನ್ನು ಇಂತಹ ಸ್ಥಿತಿಯಲ್ಲಿ ನೋಡುವುದಕ್ಕೆ ಬರಬಾರದು. ಧೃತಿ ತನ್ನ ಅಪ್ಪನ ಅಂತ್ಯಕ್ರಿಯೆಯನ್ನು ಮುಗಿಸಿಕೊಂಡು ಮತ್ತೆ ತಿರುಗಿ ಅಮೇರಿಕಾಗೆ ಹೋದರು.
ಅಪ್ಪು ಅವರು ಬದುಕಿದ್ದ ಸಮಯದಲ್ಲಿ ತನ್ನ ದೊಡ್ಡ ಮಗಳನ್ನು ಉನ್ನತ ಶಿಕ್ಷಣಕ್ಕಾಗಿ ಪರದೇಶದಲ್ಲಿ ಶಿಕ್ಷಣದ ವ್ಯಾಸಾಂಗವನ್ನು ಕೊಡಿಸುತ್ತಿದ್ದರು. ತನ್ನ ಮಗಳಿಗೆ ನೀಡುತ್ತಿದ್ದ ಹಣವನ್ನು ಧೃತಿ ಅಂಧರಿಗೆ ಸಹಾಯ ಮಾಡುತ್ತಿದ್ದಾರೆ. ಇದರ ಜೊತೆಗೆ ತಾನು ನೆಲೆಸಿದ ಹಾಸ್ಟೆಲ್ ಪಕ್ಕ ಇರುವ ಸಾಕಷ್ಟು ಬಡವರಿಗೆ ಊಟ ಬಟ್ಟೆಗಳನ್ನು ನೀಡುತ್ತಿದ್ದಾರೆ.
ಏನೇ ಆಗಲಿ ಪುನೀತ್ ಅವರು ಇಲ್ಲದೇ ಇದ್ದರೂ ಕೂಡ ಅವರ ಹಾದಿಯಲ್ಲೇ ತಮ್ಮ ಮಗಳು ಇದ್ದು ಪುನೀತ್ ಅವರು ಇನ್ನೂ ಬದುಕಿದ್ದಾರೆ ಎಂದು ರುಜು ಮಾಡಿದ್ದಾರೆ.
ಇನ್ನೂ ಪುನೀತ್ ಅವರ ವ್ಯಕ್ತಿತ್ವ ಹೇಗಿದೆ ಎನ್ನುವುದಕ್ಕೆ ಅವರ ಮರಣದ ದಿನ ಮತ್ತು ಅಂತ್ಯಕ್ರಿಯೆ ದಿನ ಬಂದಿದ್ದ ಅಭಿಮಾನಿಗಳ ಸಂಖ್ಯೆ ಸಾಕ್ಷಿಯಾಗಿದೆ. ಪುನೀತ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರು ಮರಣ ಹೊಂದಿ 2 ವಾರಗಳು ಆದರೂ ಕೂಡ ಇವರ ಸಮಾಧಿಯನ್ನು ನೋಡಲು ಸಾಕಷ್ಟು ಅಭಿಮಾನಿಗಳು ಮೂಲೆ ಮೂಲೆಗಳಿಂದ ಬರುತ್ತಿದ್ದಾರೆ.
ಇವರು ಮಾಡಿರುವ ಸಾಕಷ್ಟು ಸಮಾಜ ಸೇವೆಗಳು ಈಗ ಒಂದೊಂದಾಗಿಯೇ ಹೊರ ಬೀಳುತ್ತಿದೆ. ಪುನೀತ್ ಅವರ ಬಳಿ ಯಾರೇ ಏನೇ ಸಹಾಯ ಕೇಳಿದರು ಹಿಂದೆ ಮುಂದೆ ನೋಡದೆ ಮಾಡುತ್ತಿದ್ದರಂತೆ. ಆದರೆ ಇವರು ಸಹಾಯ ಮಾಡುತ್ತಿದ್ದನ್ನು ಎಲ್ಲೂ ಕೂಡ ಪ್ರಚಾರ ಮಾಡುತ್ತಿರಲಿಲ್ಲ. ಒಂದು ವೇಳೆ ಯಾರಾದರೂ ಪ್ರಚಾರ ಮಾಡಿದರೆ ಅವರಿಗೆ ಸರಿಯಾಗಿ ಬುದ್ಧಿ ಹೇಳುತ್ತಿದ್ದರಂತೆ.
ಪುನೀತ್ ಅವರು ಸಹಾಯ ಮಾಡಿದ ವ್ಯಕ್ತಿಗಳಿಗೆ ಮತ್ತು ಪುನೀತ್ ಅವರಿಗೆ ಬಿಟ್ಟರೆ ಯಾರಿಗೂ ಕೂಡ ತಿಳಿಯುತ್ತಿರಲಿಲ್ಲ. ಆದರೆ ಇವರು ಮರಣ ಹೊಂದಿದ ಮೇಲೆ ಇವರು ಮಾಡಿದ ಸಾಕಷ್ಟು ಸಮಾಜ ಸೇವೆಗಳು ಹೊರಕ್ಕೆ ಬರುತ್ತಿದೆ. ಇದನ್ನು ಕೇಳಿದರೆ ನಿಜಕ್ಕೂ ಎಲ್ಲರಿಗೂ ಖುಷಿ ಎನಿಸುತ್ತದೆ. ಆದರೆ ಇಂತಹ ವ್ಯಕ್ತಿ ಮತ್ತು ನಟನನ್ನು ಕಳೆದುಕೊಂಡಿರುವ ದುಃಖದ ಸಂಗತಿ ಕೊನೆಯವರೆಗೂ ಇರುತ್ತದೆ ಎಂದು ಹೇಳಬಹುದು.
ಪುನೀತ್ ಅವರನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ತುಂಬಾ ಇಷ್ಟ ಪಡುತ್ತಾರೆ. ಇವರ ನಟನೆ ಡ್ಯಾನ್ಸ್ ವ್ಯಕ್ತಿತ್ವ ಎಲ್ಲವೂ ಕೂಡ ಇಷ್ಟವಾಗುತ್ತಿತ್ತು. ಈ ರೀತಿಯ ವ್ಯಕ್ತಿತ್ವ ಇರುವ ನಟ ನಮ್ಮ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಮತ್ತೆ ಸಿಗುವುದು ತುಂಬಾ ಕಷ್ಟ. ದೇವರು ತುಂಬಾ ಕ್ರೂರಿ ಒಳ್ಳೆಯವರನ್ನು ಬೇಗ ಕರೆದುಕೊಂಡು ಹೋಗುತ್ತಾನೆ. ಮತ್ತೆ ಪುನೀತ್ ಅವರು ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ…..