ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಾವು ಮೊದಲನೆಯದಾಗಿ ನಟಿಸಿರುವ ಗಂಗೋತ್ರಿ ಸಿನಿಮಾದಲ್ಲಿ ಒಂದು ಹಾಡಿನ ಪೂರ್ತಿ ಲೇಡಿ ಗೆಟಪ್ ಅನ್ನು ಧರಿಸಿ ಡ್ಯಾನ್ಸ್ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಿಡಿದ ಶ್ರುತಿ ಮತ್ತು ತ್ರಿಪಾತ್ರ ಅಭಿನಯ ಮಾಡಿರುವ ಅಣ್ಣಾವ್ರ ಮಕ್ಕಳು ಚಿತ್ರದಲ್ಲಿ ಲೇಡಿ ಗೆಟಪ್ ಅನ್ನು ಧರಿಸಿ ನಟನೆ ಮಾಡಿದ್ದಾರೆ.
ಕಮಲ್ ಹಾಸನ್ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಪಂಚ ಭಾಷಾ ನಟರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ಹಿಟ್ ಸಿನಿಮಾ ಆಗಿರುವ ಅವಳ್ ಷಣ್ಮುಗಿ ಎನ್ನುವ ಸಿನಿಮಾದಲ್ಲಿ ಮೊದಲನೆಯದಾಗಿ ಲೇಡಿ ಗೆಟಪ್ ಅನ್ನು ಧರಿಸಿದ್ದಾರೆ. ಇದರಿಂದ ಇವರಿಗೆ ಭಾರಿ ಮೆಚ್ಚುಗೆಯನ್ನು ಸಾಧಿಸಿಕೊಂಡಿದ್ದು ತದನಂತರ ದಶಾವತಾರ ಸಿನಿಮಾದಲ್ಲಿ ಕೂಡ ಲೇಡಿ ಗೆಟಪ್ ಅನ್ನು ಧರಿಸಿ ಅಭಿನಯ ಮಾಡಿದ್ದಾರೆ.
ಕತ್ತೆಗಳು ಸರ್ ಕತ್ತೆಗಳು ಸಿನಿಮಾದಲ್ಲಿ ರಮೇಶ್, ಎಸ್ ನಾರಾಯಣ್ ಮತ್ತು ಕೋಮಲ್ ಅವರು ಮೂರು ಜನರು ಕೆಲ ಸನ್ನಿವೇಶದಲ್ಲಿ ಲೇಡಿ ಗೆಟಪ್ ಅನ್ನು ಧರಿಸಿ ಇವರನ್ನು ತುಂಬ ಸೊಗಸಾಗಿ ಲೇಡಿ ಗೆಟಪ್ ನಲ್ಲಿ ಈ ಸಿನಿಮಾದಲ್ಲಿ ತೋರಿಸಿದ್ದಾರೆ.
ತಮಿಳಿನ ಖ್ಯಾತ ನಟ ಶಿವ ಕಾರ್ತಿಕೇಯನ್ ಅವರು ರೋಮ್ಯಾಂಟಿಕ್ ಮತ್ತು ಕಾಮಿಡಿ ಚಿತ್ರ ಆಗಿರುವ ರೆಮೊ ಚಿತ್ರದಲ್ಲಿ ಲೇಡಿ ಗೆಟಪ್ ನಲ್ಲಿ ನರ್ಸ್ ಆಗಿ ನಟಿಸಿ ಅವರನ್ನು ಈ ಸಿನಿಮಾದಲ್ಲಿ ನೋಡಿದರೆ ಥೇಟ್ ಹುಡುಗಿಯಂತೆ ಕಾಣಿಸುತ್ತಾರೆ.
ಖ್ಯಾತ ನಟ ವಿಕ್ರಂ ಅವರು ಕಂದ ಸ್ವಾಮಿ ಎನ್ನುವ ಸಿನಿಮಾದಲ್ಲಿ ಲೇಡಿ ಗೆಟಪ್ ನಲ್ಲಿ ತುಂಬಾ ಸೊಗಸಾಗಿ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಇವರು ಮೇಕಪ್ ಮತ್ತು ಸೀರೆಯ ವೇಷದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಾ ಲೇಡಿಯಂತೆಯೇ ನಟನೆ ಮಾಡಿದ್ದಾರೆ.
ಪ್ರಕಾಶ್ ರೈ ಅವರು ರಾಘವೇಂದ್ರ ರಾಜಕುಮಾರ್ ಅವರ ಅಭಿನಯದ ಅನುಕೂಲಕೊಬ್ಬ ಗಂಡ ಎನ್ನುವ ಚಿತ್ರದಲ್ಲಿ ಒಂದು ಲೇಡಿ ಗೆಟಪ್ ನಲ್ಲಿ ಅಭಿನಯಿಸಿ ಸೂಪರ್ ಆಗಿ ಆಕ್ಟ್ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳಿನಲ್ಲಿ ಪಂಕಾರನ್ ಎನ್ನುವ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಲೇಡಿ ಗೆಟಪ್ ಅನ್ನು ಧರಿಸಿ ಡಾನ್ಸ್ ಮಾಡಿದ್ದಾರೆ.
ಕನ್ನಡದ ಹಾಸ್ಯ ನಟ ಶರಣ್ ಅವರು ತಮ್ಮ ಸಿನಿಮಾಗಳಾಗಿರುವ ಜೈಲಲಿತ, ವಿಕ್ಟರಿ 2 ಮತ್ತು ಫ್ರೆಂಡ್ಸ್ ಸಿನಿಮಾದಲ್ಲಿ ಲೇಡಿ ಗೆಟಪ್ ನಲ್ಲಿ ನಟಿಸಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.
ದಳಪತಿ ವಿಜಯ್ ಅವರು ತಮಿಳಿನಲ್ಲಿ ತಮ್ಮ ಸಿನಿಮಾ ಆಗಿರುವ ಪ್ರಿಯಾಮನವಲೈ ಎನ್ನುವ ಚಿತ್ರದಲ್ಲಿ ಒಂದು ಹಾಡಿನಲ್ಲಿ ಲೇಡಿ ಗೆಟಪ್ ಧರಿಸಿದ್ದಾರೆ.
ಕನ್ನಡದ ಜನಪ್ರಿಯ ಹಾಸ್ಯ ನಟ ಸಾಧು ಕೋಕಿಲ ಅವರು ಶರಣ್ ಅವರ ಅಭಿನಯದ ವಿಕ್ಟರಿ 2 ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ ಪಟಾಕಿ ಚಿತ್ರದಲ್ಲಿ ಲೇಡಿ ಗೆಟಪ್ ನಲ್ಲಿ ಅಭಿನಯ ಮಾಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರು ತಾವು ಅಭಿನಯ ಮಾಡಿರುವ ಮೇಕಪ್ ಚಿತ್ರದಲ್ಲಿ ಅಜ್ಜಿಯ ವೇಷವನ್ನು ಧರಿಸಿ ಸಕ್ಕತ್ತಾಗಿ ಆಕ್ಟ್ ಮಾಡಿದ್ದಾರೆ…..