ಕನ್ನಡದ ಕಿರುತೆರೆಯಲ್ಲಿ ಪ್ರೀತಿಸಿ ವಿವಾಹ ಮಾಡಿಕೊಂಡಿರುವ ನಟ ನಟಿಯರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ..
ರೇಖಾ ಕೃಷ್ಣಪ್ಪ ಅವರು ಸೆಪ್ಟೆಂಬರ್ 4 1985 ರಂದು ಜನಿಸಿದ್ದಾರೆ. ಇವರು ಸಾಕಷ್ಟು ಧಾರಾವಾಹಿಗಳಲ್ಲಿ ಮತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ನಟಿಸಿದ್ದಾರೆ. ಇನ್ನು ಇವರು ವಸಂತ್ ಕುಮಾರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಸುನೇತ್ರ ಪಂಡಿತ್ ಅವರು ಪೋಷಕ ಪಾತ್ರಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸಿಲ್ಲಿ ಲಲ್ಲಿ ಧಾರಾವಾಹಿಯ ಮುಖಾಂತರ ಇವರು ಸಖತ್ ಫೇಮಸ್ ಆದರು. ಇದರ ಜೊತೆಗೆ ಇವರು ಕೆಲ ನಟಿಯರಿಗೆ ಡಬ್ಬಿಂಗ್ ಸಹ ಮಾಡಿದ್ದಾರೆ. ಇನ್ನೂ ಇವರು ನಟ ರಮೇಶ್ ಪಂಡಿತ್ ಅವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.
ಪ್ರಶಾಂತ್ ಮತ್ತು ರೂಪಾ ಪ್ರಭಾಕರ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ರಾಜ ರಾಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಬ್ಬರು ಕ್ಯೂಟ್ ಜೋಡಿ ಎಂದೇ ಎನಿಸಿಕೊಂಡಿದ್ದಾರೆ. ಇವರು ಕೂಡ ಲವ್ ಮ್ಯಾರೇಜ್ ಆಗಿದ್ದಾರೆ.
ಶ್ರೀರಸ್ತು ಶುಭಮಸ್ತು ಎನ್ನುವ ಕನ್ನಡದ ಧಾರಾವಾಹಿಯ ಮುಖಾಂತರ ಫೇಮಸ್ ಆಗಿರುವ ಶ್ವೇತಾ ಪ್ರಸಾದ್ ಅವರು ಆರ್ ಜೆ ಪ್ರದೀಪ್ ಅವರನ್ನು ಪ್ರೀತಿ ಮಾಡಿ ವಿವಾಹ ಮಾಡಿಕೊಂಡಿದ್ದಾರೆ.
ಅಮೃತ ರಾಮಮೂರ್ತಿ ಅವರು ಮೇಘ ಮಯೂರಿ ಧಾರಾವಾಹಿಯ ಮುಖಾಂತರ ತಮ್ಮ ನಟನೆಯನ್ನು ಶುರು ಮಾಡಿದರು. ಇವರು ನಟ ರಘು ಎಂಬುವವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.
ಇಶಿತಾ ಮತ್ತು ಮುರುಗ ಅವರು ಕೂಡ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಆಗಿದ್ದ ರಾಜ ರಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇವರಿಬ್ಬರೂ ಕೂಡ ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.
ಕುಲವಧು ಧಾರಾವಾಹಿಯ ದೀಪಿಕಾ ಮತ್ತು ಮಾನಸ ಸರೋವರ ಧಾರಾವಾಹಿಯ ಆಕರ್ಷ್ ಇವರಿಬ್ಬರು ಕೂಡ ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.
ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಇಬ್ಬರೂ ಕೂಡ ಪ್ರೀತಿ ಮಾಡಿ ವಿವಾಹ ಮಾಡಿಕೊಂಡಿದ್ದಾರೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ಚಂದನ್ ಮತ್ತು ಕವಿತಾ ಗೌಡ ಅವರು ಕೂಡ ತುಂಬ ಫೇಮಸ್ ಆದರು. ಇವರು ಕೂಡ ಲವ್ ಮ್ಯಾರೇಜ್ ಆಗಿದ್ದಾರೆ.
ಸತ್ಯ ಧಾರಾವಾಹಿಯ ನಟಿ ಗೌತಮಿ ಜಾದವ್ ಅವರು ಅಭಿಷೇಕ್ ಎನ್ನುವವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ…..