ಈಗ ಸಾಕಷ್ಟು ಭಾಷೆಗಳಲ್ಲಿ ಸಿನಿಮಾಗಳು ರೀಮೇಕ್ ಆಗುತ್ತಾ ಇರುತ್ತವೆ. ಆದರೆ ಸಿನಿಮಾಗಳನ್ನು ರೀಮೇಕ್ ಮಾಡಿದರೆ ಬಹುತೇಕ ಅದರಲ್ಲಿರುವ ಸೀನ್ ಗಳನ್ನು ಬೇರೆ ರೀತಿಯಾಗಿ ತೆಗೆಯುತ್ತಾರೆ. ಆದರೆ ಕೆಲವೊಂದು ಸೀನ್ ಗಳನ್ನು ಮಾತ್ರ ಹಾಗೆಯೇ ರಿಮೇಕ್ ಮಾಡುತ್ತಾರೆ. ಅಂತಹ ಸೀನ್ ಗಳು ಯಾವುವು ಎಂದು ನೋಡೋಣ ಬನ್ನಿ..
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪುಜಾ ಗಾಂಧಿ ಅವರ ಅಭಿನಯದ ಮುಂಗಾರು ಮಳೆ ಚಿತ್ರವನ್ನು ತೆಲುಗಿನಲ್ಲಿ ವಾನ ಎನ್ನುವ ಸಿನಿಮಾಗೆ ರೀಮೇಕ್ ಮಾಡಲಾಗಿದೆ. ಇದರಲ್ಲಿ ಟೈಮ್ ಅನ್ನೋದು ಪಕ್ಕಾ 420 ಮತ್ತು ಇನ್ನೂ ಸಾಕಷ್ಟು ಡೈಲಾಗ್ ಗಳನ್ನು ಹಾಗೆಯೇ ವಾನ ಸಿನಿಮಾದಲ್ಲೂ ಕೂಡ ರಿಮೇಕ್ ಮಾಡಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಜೆನ್ನಿಫರ್ ಕೊತ್ವಾಲ್ ಅವರ ಅಭಿನಯದ ಜೋಗಿ ಚಿತ್ರವನ್ನು ತೆಲುಗಿನಲ್ಲಿ ಪ್ರಭಾಸ್ ಅವರ ಅಭಿನಯದ ಯೋಗಿ ಚಿತ್ರಕ್ಕೆ ರಿಮೇಕ್ ಮಾಡಲಾಗಿದೆ. ಹಾಗೆಯೇ ತಮಿಳಿನಲ್ಲಿ ಕೂಡ ಧನುಶ್ ಅವರು ಜೋಗಿ ಚಿತ್ರದ ರೀಮೇಕ್ ಸಿನಿಮಾವನ್ನು ಮಾಡಿದ್ದಾರೆ. ಇನ್ನು ಇದರಲ್ಲಿ ತಾಯಿ ಮತ್ತು ಮಗನ ಹೃದಯ ಮುಟ್ಟುವ ಡ್ಯಾನ್ಸ್ ಸ್ಟೆಪ್ ಗಳನ್ನು ಹಾಗೆಯೇ ರೀಮೇಕ್ ಮಾಡಲಾಗಿದೆ.
ವಿಷ್ಣುವರ್ಧನ್ ಮತ್ತು ಸೌಂದರ್ಯ ಅವರ ಅಭಿನಯದ ಆಪ್ತಮಿತ್ರ ಚಿತ್ರವನ್ನು ತಮಿಳು ಮತ್ತು ತೆಲುಗಿನಲ್ಲಿ ರಿಮೇಕ್ ಮಾಡಲಾಗಿದೆ. ಸೌಂದರ್ಯ ಅವರು ನಟಿಸಿರುವ ಬಹುತೇಕ ಸೀನ್ ಗಳನ್ನು ಹಾಗೆಯೇ ಅದರಲ್ಲೂ ಕೂಡ ಕಾಪಿ ಮಾಡಲಾಗಿದೆ.
ಹಾಸ್ಯ ನಟ ಶರಣ್ ಅವರ ಅಭಿನಯದ ಅಧ್ಯಕ್ಷ ಚಿತ್ರವನ್ನು ತಮಿಳಿನಲ್ಲಿ ಶಿವ ಕಾರ್ತಿಕೇಯನ್ ಅವರು ವಾರುತಪಾಡತ ವಾಲಿಬಾರ್ ಸಂಗಂ ಎನ್ನುವ ಚಿತ್ರಕ್ಕೆ ರೀಮೇಕ್ ಮಾಡಲಾಗಿದೆ. ಇನ್ನು ಅಧ್ಯಕ್ಷ ಚಿತ್ರದಲ್ಲಿ ಚಿಕ್ಕಣ್ಣ ಅವರು ಪೊಲೀಸ್ ಅವರಿಗೆ ಕಾಲಿನಲ್ಲಿ ನಮಸ್ಕಾರ ಮಾಡುವ ಹಾಸ್ಯದ ಸೀನ್ ಅನ್ನು ಇದರಲ್ಲೂ ಕೂಡ ಹಾಗೆ ರಿಮೇಕ್ ಮಾಡಲಾಗಿದೆ.
ಕನ್ನಡದಲ್ಲಿ ಜೋಶ್ ಚಿತ್ರವನ್ನು ತೆಲುಗಿಗೆ ಕೆರಟಂ ಎನ್ನುವ ಚಿತ್ರಕ್ಕೆ ರೀಮೇಕ್ ಮಾಡಲಾಗಿದೆ. ಇನ್ನು ಜೋಶ್ ಚಿತ್ರದಲ್ಲಿ ಇರುವ ಪಿ.ಟಿ ಮಾಸ್ಟರ್ ಮತ್ತು ವಿದ್ಯಾರ್ಥಿಗಳ ನಡುವಿನ ಕಾಮಿಡಿ ಸೀನ್ ಗಳನ್ನು ತೆಲುಗಿನಲ್ಲೂ ಕೂಡ ಹಾಗೆಯೇ ರೀಮೇಕ್ ಮಾಡಲಾಗಿದೆ…..