ಕಾಂತಾರ ಚಿತ್ರದ ಮೂಲಕ ಎಲ್ಲೆಡೆ ತುಂಬಾನೇ ಫೇಮಸ್ ಆಗಿರುವ ರಿಷಬ್ ಶೆಟ್ಟಿ ಅವರು ಕೇವಲ ನಟ ಮಾತ್ರ ಅಲ್ಲ ಇವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಸಹ ಮಾಡಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅವರು ಕನ್ನಡ ಇಂಡಸ್ಟ್ರಿ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸುವ ಮೂಲಕ ಬಂದರು.
ತದನಂತರ ಇವರು ಕೆಲ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿ ಹಾಗೆ ಕೆಲ ಚಿತ್ರಗಳಲ್ಲಿ ನಾಯಕ ನಟರಾಗಿ ಕೂಡ ಅಭಿನಯ ಮಾಡಿದ್ದಾರೆ. ಇನ್ನು ಇತ್ತೀಚಿಗೆ ಇಷ್ಟೇ ರಿಲೀಸ್ ಆದ ಕಾಂತಾರ ಚಿತ್ರ ಕೂಡ ವಿಶ್ವಾದ್ಯಂತ ಜನರಿಗೆ ತುಂಬಾನೇ ಇಷ್ಟವಾಗಿದೆ. ಇನ್ನು ಈ ಸಿನಿಮಾ ಕೂಡ ಪಾನ್ ಇಂಡಿಯಾ ಸಿನಿಮಾ ಆಗಿದ್ದು ಬೇರೆ ಭಾಷೆಗಳಲ್ಲೂ ಕೂಡ ಬಿಡುಗಡೆಯಾಗಿ ಅನ್ಯ ಭಾಷೆ ಅಭಿಮಾನಗಳು ಕೂಡ ಕಾಂತರಾ ಸಿನಿಮಾ ನೋಡಿ ಫಿದಾ ಆಗಿದ್ದಾರೆ.
ಇನ್ನು ರಿಷಬ್ ಶೆಟ್ಟಿ ಅವರು ಕುಂದಾಪುರದಲ್ಲಿ ಜನಿಸಿದ್ದಾರೆ. ಇವರು 2012 ರಲ್ಲಿ ತುಘಲಕ್ ಎನ್ನುವ ಚಿತ್ರದಲ್ಲಿ ವಿಲ್ಲನ್ ರೋಲ್ ನಲ್ಲಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಅಟ್ಟಹಾಸ, ಲೂಸಿಯಾ, ಉಳಿದವರು ಕಂಡಂತೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಬಿ ನಿಂಗ್ ವಯಸ್ಸಾಯ್ತೋ, ಬೆಲ್ ಬಾಟಮ್, ಕಥಾ ಸಂಗಮ, ಅವನೇ ಶ್ರೀಮನ್ನಾರಾಯಣ, ಹೀರೋ, ಶ್ರೀ ಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್, ಗರುಡ ಗಮನ ವೃಷಭ ವಾಹನ, ಮಿಷನ್, ಹರಿಕಥೆ ಅಲ್ಲ ಗಿರಿಕಥೆ, ಕಾಂತರಾ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಹಾಗೆ ರಿಷಬ್ ಅವರು ಮೊದಲನೆಯದಾಗಿ 2016 ರಲ್ಲಿ ರಕ್ಷಿತ್ ಶೆಟ್ಟಿ ಅವರ ಅಭಿನಯದ ರಿಕ್ಕಿ ಚಿತ್ರವನ್ನು ನಿರ್ದೇಶಿಸಿದರು. ತದನಂತರ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ರಿಷಬ್ ಶೆಟ್ಟಿ ಅವರು 2017 ರಲ್ಲಿ ಪ್ರಗತಿ ಶೆಟ್ಟಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇವರ ಮಗನ ಹೆಸರು ರನ್ವಿತ್ ಮತ್ತು ಮಗಳ ಹೆಸರು ರಾದ್ಯ. ಇಲ್ಲಿ ನೀವು ರಿಷಬ್ ಶೆಟ್ಟಿ ಅವರ ಮುದ್ದಿನ ಮಗನ ಕೆಲ ಸುಂದರ ಫೋಟೋಗಳನ್ನು ನೋಡಬಹುದು…..