ನಿಜ ಜೀವನದಲ್ಲಿ ಕೆಲ ಸಿನಿಮಾ ನಟ ನಟಿಯರು ಡಾಕ್ಟರ್ ಆಗಿದ್ದಾರೆ. ಅಂತಹ ನಟ ನಟಿಯರು ಯಾರು ಎಂದು ಇಲ್ಲಿ ನೋಡೋಣ ಬನ್ನಿ..ತೆಲುಗಿನ ಖ್ಯಾತ ಸ್ಟಾರ್ ನಟ ರಾಜಶೇಖರ್ ಅವರು ಫೆಬ್ರವರಿ 4 1962 ರಂದು ಜನಿಸಿದ್ದಾರೆ. ಇವರು ತೆಲುಗು ಸಿನಿಮಾದಲ್ಲಿ ಒಂದು ಒಳ್ಳೆಯ ಹೆಸರನ್ನು ಸಾಧಿಸಿದ್ದಾರೆ ಎಂದು ಹೇಳಬಹುದು. ಇನ್ನು ಇವರು ಸಿನಿಮಾ ರಂಗಕ್ಕೆ ಬರುವ ಮುನ್ನ ಎಂಬಿಬಿಎಸ್ ಪದವಿಯನ್ನು ಓದಿ ಚೆನ್ನೈನಲ್ಲಿ ಡಾಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಿದ್ದರು. ಇದಾದ ಮೇಲೆ ಇವರು ಸಿನಿಮಾ ರಂಗಕ್ಕೆ ಬಂದರು.
ಕನ್ನಡದ ಖ್ಯಾತ ನಟಿ ಆಗಿ ಗುರುತಿಸಿಕೊಂಡಿರುವ ಶ್ರೀಲೀಲಾ ಅವರು ಜುಲೈ 14 2001 ರಲ್ಲಿ ಜನಿಸಿದ್ದಾರೆ. ಇವರು ಕಿಸ್, ಭರಾಟೆ ಇನ್ನೂ ಕೆಲ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕೊನೆಯ ವರ್ಷದ ಎಂಬಿಬಿಎಸ್ ಪದವಿಯನ್ನು ಓದುತ್ತಿದ್ದಾರೆ.
ನಟಿ ರೂಪ ಕೊಡವಯೂರ್ ಅವರು ನಟಿಯ ಜೊತೆಗೆ ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು. ಇವರು ತೆಲುಗು ಚಿತ್ರರಂಗದಲ್ಲಿ ಒಂದು ಒಳ್ಳೆಯ ಗುರುತನ್ನು ಸಾಧಿಸಿಕೊಂಡಿದ್ದಾರೆ. ಇನ್ನೂ ರೂಪ ಅವರು ನಟನೆಯ ಜೊತೆಗೆ ತಮ್ಮ ವೈದ್ಯಕೀಯ ವೃತ್ತಿಯನ್ನು ಸಹ ಸಾಗಿಸುತ್ತಿದ್ದಾರೆ.
ನಟ ಅಜ್ಮಲ್ ಅಮೀರ್ ಅವರು ಮಲಯಾಳಂ ತಮಿಳು ಮತ್ತು ತೆಲುಗು ಭಾಷೆಗಳ ಚಿತ್ರಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಇವರು ನಟನೆಯ ಜೊತೆಗೆ ನಿಜ ಜೀವನದಲ್ಲಿ ಫಿಸಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
ನಟ ಭರತ್ ರೆಡ್ಡಿ ಅವರು ಅಕ್ಟೋಬರ್ 22 1978 ರಂದು ತಿರುಪತಿಯಲ್ಲಿ ಜನಿಸಿದ್ದಾರೆ. ಇವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು ನಿಜ ಜೀವನದಲ್ಲಿ ಇವರು ಹೈದ್ರಾಬಾದ್ ನಲ್ಲಿ ಹೃದಯರೋಗ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ಅವರು ಮೇ 9 1992 ರಂದು ಜನಿಸಿದ್ದಾರೆ. ಇವರು ನಟನೆ ಮಾಡುವ ಮುನ್ನ 2016 ರಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಓದಿ ಮುಗಿಸಿದ್ದಾರೆ…..