90ರ ಸಮಯದಲ್ಲಿ ಸ್ಯಾಂಡಲ್ ವುಡ್ ನಲ್ಲಿ ನಟಿಸಿರುವ ನಟಿಯರ ಗಂಡಂದಿರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..ನಟಿ ಅಮಲಾ ಅವರು 90 ಮತ್ತು 2000ರ ಸಮಯದಲ್ಲಿ ಟಾಪ್ ಲೀಡಿಂಗ್ ನಟಿಯಾಗಿದ್ದರು. ಇವರು ತೆಲುಗು ಹಿಂದಿ ಮಲಯಾಳಂ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಸೆಪ್ಟೆಂಬರ್ 12 1967 ರಂದು ಜನಿಸಿದ್ದಾರೆ.
ಇನ್ನೂ ಅಮಲಾ ಅವರು ಕನ್ನಡದಲ್ಲಿ 1987 ರಲ್ಲಿ ಪುಷ್ಪಕ ವಿಮಾನ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಬಣ್ಣದ ಗೆಜ್ಜೆ, ಅಗ್ನಿಪಂಜರ, ಕ್ಷೀರ ಸಾಗರ, ಬೆಳ್ಳಿಯಪ್ಪ ಬಂಗಾರಪ್ಪ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು 1992 ರಲ್ಲಿ ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟಿ ಬಿಂದಿಯಾ ಅವರು 1973 ರಲ್ಲಿ ಜನಿಸಿದ್ದಾರೆ. ಇವರು ಕನ್ನಡ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇವರು ಕನ್ನಡದಲ್ಲಿ 1992 ರಲ್ಲಿ ರವಿಚಂದ್ರನ್ ಅವರ ಜೊತೆಗೆ ಹಳ್ಳಿಮೇಷ್ಟ್ರು ಚಿತ್ರದ ಮೂಲಕ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಬಿಂದಿಯಾ ಅವರು ಖ್ಯಾತ ಕ್ರಿಕೆಟಿಗ ಆಗಿರುವ ಮನೋಜ್ ಪ್ರಭಾಕರ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟಿ ಗೌತಮಿ ಅವರು ಜುಲೈ 2 1968 ರಂದು ಜನಿಸಿದ್ದಾರೆ. ಇವರು ತೆಲುಗು ಮಲಯಾಳಂ ಹಿಂದಿ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಗೌತಮಿ ಅವರು 1987 ರಲ್ಲಿ ಬಿಡುಗಡೆಯಾದ ಏಳು ಸುತ್ತಿನ ಕೋಟೆ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ಇದಾದ ಮೇಲೆ ಸಾಹಸ ವೀರ, ಚಿಕ್ಕೆಜಮಾನ್ರು, ಚೆಲುವ ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನೂ ಇವರು ಸಂದೀಪ್ ಭಾಟಿಯಾ ಅವರನ್ನು 1998 ರಲ್ಲಿ ವಿವಾಹ ಮಾಡಿಕೊಂಡರು. ಆದರೆ 1 ವರ್ಷಗಳ ಬಳಿಕ ಇವರಿಗೆ ವಿಚ್ಛೇಧನ ನೀಡಿ ಖ್ಯಾತ ನಟ ಕಮಲ್ ಹಾಸನ್ ಅವರ ಜತೆ ಸಹ ಜೀವನ ನಡೆಸಿದರು. ಇದಾದ ಮೇಲೆ ಇವರ ಜೊತೆಗೆ ಕೂಡ ದೂರವಾದರು.
ನಟಿ ವಿನಯಾ ಪ್ರಸಾದ್ ಅವರು ನವೆಂಬರ್ 22 1965 ರಂದು ಜನಿಸಿದ್ದಾರೆ. ಇವರು ಕನ್ನಡ ಮಲಯಾಳಂ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ವಿನಯ ಪ್ರಸಾದ್ ಅವರು 1988 ರಲ್ಲಿ ಬಿಡುಗಡೆಯಾದ ಮಧ್ವಾಚಾರ್ಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ಇದಾದ ಮೇಲೆ ಇವರು ಬಹುತೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ವಿನಯಾ ಪ್ರಸಾದ್ ಅವರು ಜ್ಯೋತಿಪ್ರಕಾಶ್ ಎನ್ನುವವರನ್ನು 2002 ರಲ್ಲಿ ವಿವಾಹ ಮಾಡಿಕೊಂಡರು. ಆದರೆ ಇವರು ಅಕಾಲಿಕ ಮರಣವನ್ನು ಹೊಂದಿದರು. ತದನಂತರ ವಿ ಆರ್ ಕೆ ಪ್ರಸಾದ್ ಎನ್ನುವವರನ್ನು ವಿವಾಹ ಮಾಡಿಕೊಂಡರು.
ನಟಿ ಸುಮನ್ ರಂಗನಾಥ್ ಅವರು ಜುಲೈ 26 1974 ರಂದು ಜನಿಸಿದ್ದಾರೆ. ಇವರು ಕನ್ನಡ ಬಂಗಾಳಿ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮನ್ ಅವರು 1989 ರಲ್ಲಿ ಬಿಡುಗಡೆಯಾದ ಸಿಬಿಐ ಶಂಕರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.
ಇದಾದ ಮೇಲೆ ಬಾಳ ಹೊಂಬಾಳೆ, ಡಾಕ್ಟರ್ ಕೃಷ್ಣ, ಸಂತ ಶಿಶುನಾಳ ಶರೀಫ, ನಮ್ಮೂರ ಹೆಮ್ಮರ, ಕೆಂಪು ಸೂರ್ಯ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು 2019 ರಲ್ಲಿ ಸಜ್ಜನ್ ಚಿನ್ನಪ್ಪ ಎನ್ನುವವರನ್ನು ಮತ್ತು ಮಾಡಿಕೊಂಡಿದ್ದಾರೆ.
ನಟಿ ಭವ್ಯ ಅವರು ಜನವರಿ 12 1966 ರಂದು ಜನಿಸಿದ್ದಾರೆ. ಇವರು ಕನ್ನಡ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಭವ್ಯಾ ಅವರು 1983 ರಲ್ಲಿ ಬಿಡುಗಡೆಯಾದ ಪ್ರೇಮ ಪರ್ವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಇವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಭವ್ಯಾ ಅವರು ಮುಖೇಶ್ ಪಾಟೀಲ್ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ……