ರಾಧಿಕಾ ಕುಮಾರಸ್ವಾಮಿ ಮಸ್ತ್ ಡ್ಯಾನ್ಸ್ ನೋಡಿ ಹೇಗಿದೆ, ಪಡ್ಡೆ ಹುಡುಗ, ಹುಡುಗಿಯರು ನಾಚು ವಂತೆ ಡಾನ್ಸ್ ಮಾಡಿದ್ದಾರೆ ನೋಡಿ ಈ ವೈರಲ್ ವಿಡಿಯೋ !!
ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರು ಮಸ್ತ್ ಡ್ಯಾನ್ಸ್ ಮಾಡಿ ಅಭಿಮಾನಿಗಳಿಗಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಡ್ಯಾನ್ಸ್ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು. ಇನ್ನು ರಾಧಿಕಾ ಕುಮಾರಸ್ವಾಮಿ ಅವರು ನವೆಂಬರ್ 1 1986 ರಂದು ಮಂಗಳೂರಿನಲ್ಲಿ ಜನಿಸಿದ್ದಾರೆ.
ರಾಧಿಕಾ ಅವರು ಕೇವಲ ಒಂಬತ್ತನೇ ತರಗತಿಯಲ್ಲಿ ಓದುತ್ತಿರಬೇಕಾದರೆ 2002 ರಲ್ಲಿ ನೀಲ ಮೇಘ ಶ್ಯಾಮ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ಇನ್ನೂ ಇದಾದ ಮೇಲೆ ವಿಜಯ್ ರಾಘವೇಂದ್ರ ಅವರ ಜೊತೆಗೆ ನಿನಗಾಗಿ ಚಿತ್ರದಲ್ಲಿ ನಟಿಸಿದ್ದಾರೆ.
ತದನಂತರ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಜೊತೆಗೆ ತಂಗಿಯಾಗಿ ತವರಿಗೆ ಬಾ ತಂಗಿ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ತುಂಬಾನೇ ಯಶಸ್ಸನ್ನು ಸಾಧಿಸಿತು. ತದನಂತರ ಪ್ರೇಮಖೈದಿ, ರೋಮಿಯೋ ಜ್ಯೂಲಿಯೆಟ್, ಊಲಾಲಾ, ಮಣಿ, ಮನೆ ಮಕ್ಕಳು, ತಾಯಿ ಇಲ್ಲದ ತಬ್ಬಲಿ, ರಿಷಿ, ಮಸಾಲಾ, ಆಟೋಶಂಕರ್, ಅಣ್ಣತಂಗಿ, ಮಂಡ್ಯ, ಹೆತ್ತವರ ಕನಸು, ಹಠವಾದಿ, ಗುಡ್ ಲಕ್, ಒಡಹುಟ್ಟಿದವಳು, ಅನಾಥರು, ಜನಪದ, ಅಮೃತವಾಣಿ, ನವಶಕ್ತಿ ವೈಭವ ಚಿತ್ರಗಳಲ್ಲಿ ನಟಿಸಿದ್ದಾರೆ.
ರಾಧಿಕಾ ಅವರು ತಾಯಿಯಿಲ್ಲದ ತಬ್ಬಲಿ ಚಿತ್ರದಲ್ಲಿ ನಟಿಸಿದ್ದಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ. ಇದಾದ ಮೇಲೆ ಕೆಲ ವರ್ಷಗಳ ಗ್ಯಾಪ್ ತೆಗೆದುಕೊಂಡು ಮತ್ತೆ ಸ್ವೀಟಿ ನನ್ನ ಜೋಡಿ ಚಿತ್ರದ ಮೂಲಕ ಇವರು ನಟನೆ ಮಾಡುವುದಕ್ಕೆ ಬಂದರು. ಇದಾದ ಮೇಲೆ ರುದ್ರತಾಂಡವ, ದಮಯಂತಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ಮತ್ತು ತಮಿಳಿನಲ್ಲಿ ಕೂಡ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ರಾಧಿಕಾ ಕುಮಾರಸ್ವಾಮಿ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಲಕ್ಕಿ ಮತ್ತು ತಮ್ಮ ಸಿನಿಮಾ ಆದ ಸ್ವೀಟಿ ನನ್ನ ಜೋಡಿ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ರಾಧಿಕಾ ಕುಮಾರಸ್ವಾಮಿ ಅವರು 2006 ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಶಮಿಕಾ ಕುಮಾರಸ್ವಾಮಿ ಎನ್ನುವ ಮಗಳು ಕೂಡ ಇದ್ದಾರೆ…..