ಅಣ್ಣಾವ್ರ ಎರಡನೆಯ ಮಗ ಆಗಿರುವ ನಟ ರಾಘವೇಂದ್ರ ರಾಜ್ ಕುಮಾರ್ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಟಾಪ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಆಗಸ್ಟ್ 15 1965 ರಲ್ಲಿ ಚೆನ್ನೈ ನಲ್ಲಿ ಜನಿಸಿದರು. ಇನ್ನೂ ರಾಘವೇಂದ್ರ ರಾಜ್ ಕುಮಾರ್ ಅವರು.
ಮಂಗಳಾ ಅವರನ್ನು ಮೊದಲನೆಯ ನೋಟದಲ್ಲೇ ಅಂದರೆ ಶಿವರಾಜ್ ಕುಮಾರ್ ಅವರ ಮದುವೆಯಲ್ಲಿ ನೋಡಿ ಅವರನ್ನು ಪ್ರೀತಿಸಿ ನಂತರ ಇಬ್ಬರು ಮನೆಯವರ ಒಪ್ಪಿಗೆಯಿಂದ ಮದುವೆ ಮಾಡಿಕೊಂಡಿದ್ದಾರೆ.ಇಲ್ಲಿ ನೀವು ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳ ರಾಘವೇಂದ್ರ ಅವರ ಮದುವೆಯ ಕೆಲ ಸುಂದರ ಕ್ಷಣಗಳನ್ನು ವೀಕ್ಷಿಸಬಹುದು.
ರಾಘವೇಂದ್ರ ರಾಜ್ ಕುಮಾರ್ ಅವರು 1974 ರಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಇವರು ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಅಭಿನಯಿಸಿದ್ದಾರೆ. ಇದಾದ ಮೇಲೆ 1988 ರಲ್ಲಿ ಚಿರಂಜೀವಿ ಸುಧಾಕರ ಎನ್ನುವ ಚಿತ್ರದ ಮೂಲಕ ಇವರು ಹೀರೋ ಆಗಿ ಎಂಟ್ರಿ ನೀಡಿದರು.
ತದನಂತರ ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಅನುಕೂಲಕ್ಕೊಬ್ಬ ಗಂಡ, ಕಲ್ಯಾಣ ಮಂಟಪ, ಭರ್ಜರಿ ಗಂಡು, ಅನುರಾಗ ಅಲೆಗಳು, ನಾವಿಬ್ಬರು ನಮಗಿಬ್ಬರು, ಸಾಗರದೀಪ, ಆಟ ಹುಡುಗಾಟ, ಇಬ್ಬರ ನಡುವೆ ಮುತ್ತಿನ ಆಟ, ಶ್ರೀಮತಿ ಕಲ್ಯಾಣ, ಗೆಲುವಿನ ಸರದಾರ,.
ಸೂತ್ರಧಾರ, ಶಿವರಂಜನಿ, ಸ್ವಸ್ತಿಕ್, ಟುವ್ವಿ ಟುವ್ವಿ ಟುವ್ವಿ, ಪಕ್ಕದ ಮನೆ ಹುಡುಗಿ, ಅಮ್ಮನ ಮನೆ, ತ್ರಯಂಬಕಮ್, ರಾಜತಂತ್ರ, ಪೊಗರು, ಜೇಮ್ಸ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.ಹಾಗೆಯೇ ಇವರು ಕೆಲ ಕನ್ನಡದ ಹಾಡುಗಳನ್ನು ಸಹ ಹಾಡಿದ್ದಾರೆ. ಇನ್ನು ರಾಘವೇಂದ್ರ ರಾಜ್ ಕುಮಾರ್ ಅವರು ಶ್ರುತಿ ಸೇರಿದಾಗ, ಜಾಕಿ, ಅಣ್ಣಾಬಾಂಡ್, ಯಾರೇ ಕೂಗಾಡಲಿ,
ರನ್ ಆಂಟನಿ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಹಾಗೆಯೇ ವಿಜಯ್ ರಾಘವೇಂದ್ರ ಅವರಿಗೆ ವಿನಯ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಿಬ್ಬರೂ ಕೂಡ ಹೀರೋ ಆಗಿ ಕನ್ನಡ ಸಿನಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದಾರೆ…..