Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ರಾಘಣ್ಣ ಖಂಡ್ರೆ ಅಪ್ಪುಗೆ ಎಷ್ಟೊಂದು ಪ್ರೀತಿ ನೋಡಿ! ನಿಜಕ್ಕೂ ಸಹೋದರರು ಅಂದ್ರೆ ಹೀಗಿರಬೇಕು ಕಂಡ್ರಿ!!

0

ಅಣ್ಣಾವ್ರ ಕುಟುಂಬ ಎಂದರೆ ಎಲ್ಲರಿಗೂ ತುಂಬಾ ಪ್ರೀತಿ. ಅದರಲ್ಲೂ ಶಿವರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರು 3 ಜನರು ಕೂಡ ತುಂಬ ಅನ್ಯೋನ್ಯತೆಯಿಂದ ಇರುತ್ತಾರೆ. ಈಗಿನ ಕಾಲದಲ್ಲಿ ಸಾಕಷ್ಟು ಅಣ್ಣ ತಮ್ಮಂದಿರು ಚಿಕ್ಕವರಿದ್ದಾಗ ತಮ್ಮ ಚೆನ್ನಾಗಿರುತ್ತಾರೆ ತದನಂತರ ಮದುವೆಯಾದ ಮೇಲೆ ದಾಯಾದಿಗಳಾಗಿ ಆಗುತ್ತಾರೆ.

ಆದರೆ ಇಲ್ಲಿರುವ ಸನ್ನಿವೇಶವನ್ನು ನೋಡಿದರೆ ರಾಘಣ್ಣ ಎಂದರೆ ಅಪ್ಪು ಅವರಿಗೆ ಎಷ್ಟೊಂದು ಪ್ರೀತಿ ಅಕ್ಕರೆ ಎಂದು ಗೊತ್ತಾಗುತ್ತದೆ. ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರು. ಅದರಲ್ಲಿ ರಾಘಣ್ಣ ಮತ್ತು ಪುನೀತ್ ಅವರು ಇಬ್ಬರೂ ಬಂದಿದ್ದರು. ರಾಘಣ್ಣ ಅವರಿಗೆ ಕೆಲ ಆರೋಗ್ಯ ಸಮಸ್ಯೆಗಳಿಂದ ಅವರಿಗೆ ನಡೆಯುವುದಕ್ಕೆ ಆಗುತ್ತಿರಲಿಲ್ಲ.

ಹಾಗಾಗಿ ಪುನೀತ್ ಅವರು ತಮ್ಮ ಅಣ್ಣನನ್ನು ಜೋಪಾನವಾಗಿ ಕೈಹಿಡಿದುಕೊಂಡು ವೇದಿಕೆಯ ಮೇಲೆ ಕರೆದುಕೊಂಡು ಹೋಗಿರುವ ವಿಡಿಯೋ ಇಲ್ಲಿ ನೀವು ನೋಡಬಹುದು. ಇನ್ನು ಪುನೀತ್ ಅವರು ನಮ್ಮ ಜೊತೆ ಈಗ ಇಲ್ಲ. ಅವರು ತೀರಿಕೊಂಡು ಸಾಕಷ್ಟು ತಿಂಗಳುಗಳು ಆದರೂ ಕೂಡ ಅವರ ನೆನಪಿನಲ್ಲೇ ಎಲ್ಲರೂ ಇದ್ದಾರೆ.

ಇನ್ನೂ ಅವರ ಅಭಿಮಾನಿಗಳಂತೂ ಅವರ ಮಾರ್ಗದಲ್ಲಿಯೇ ನಡೆಯುತ್ತಾ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಪುನೀತ್ ಅವರ ಸಮಾಧಿ ಬಳಿ ಸಾಕಷ್ಟು ವಿವಿಧ ಭಾಷೆಯ ಕಲಾವಿದರು ರಾಜಕಾರಣಿಯ ವ್ಯಕ್ತಿಗಳು ಗಣ್ಯರು ಅಭಿಮಾನಿಗಳು ಹೋಗಿ ಪುನೀತ್ ಅವರ ಸಮಾಧಿಯ ದರ್ಶನವನ್ನು ಮಾಡಿಕೊಂಡು ಬಂದಿದ್ದಾರೆ.

ಪುನೀತ್ ಅವರು ಬದುಕಿದ್ದಾಗ ಸಾಕಷ್ಟು ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ. ಆದರೆ ಅವನ್ನು ಒಂದನ್ನು ಕೂಡ ಬಹಿರಂಗಪಡಿಸಲಿಲ್ಲ. ಆದರೆ ಅವರು ತೀರಿಕೊಂಡ ಮೇಲೆ ಅವರು ಮಾಡಿರುವ ಸಾಮಾಜಿಕ ಸೇವೆಗಳನ್ನು ಕೇಳಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಈ ರೀತಿಯ ವ್ಯಕ್ತಿತ್ವ ಇರುವ ನಟನು ಇಷ್ಟು ಬೇಗ ಇಹಲೋಕ ತ್ಯಜಿಸಿರುವುದು ಎಲ್ಲರ ಮನಸ್ಸಿಗೆ ನೋವನ್ನುಂಟು ಮಾಡಿದೆ.

ಅದರಲ್ಲೂ ಒಂದು ಖುಷಿಯ ವಿಚಾರ ಏನೆಂದರೆ ನಮ್ಮ ಅಪ್ಪು ಅವರಿಗೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಸಾಕಷ್ಟು ವಿದೇಶಗಳಲ್ಲೂ ಕೂಡ ಅಭಿಮಾನಿಗಳಿದ್ದಾರೆ. ಇವರನ್ನು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ತುಂಬಾನೇ ಪ್ರೀತಿ ಮಾಡುತ್ತಾರೆ. ಅಂತಹ ವ್ಯಕ್ತಿತ್ವ ಇರುವ ನಟ ನಮ್ಮ ಕರ್ನಾಟಕ ರಾಜ್ಯದಲ್ಲಿ ಹುಟ್ಟಿದ್ದಕ್ಕೆ ನಮ್ಮೆಲ್ಲರ ಹೆಮ್ಮೆಯಾಗಿದೆ…..

Leave A Reply