ರಾಕಿಂಗ್*ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ಇಬ್ಬರೂ ತಮ್ಮ ಮಕ್ಕಳ ಜೊತೆಗೆ ಇರುವ ಫೋಟೋಗಳನ್ನು ಆಗಾಗ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಭಿಮಾನಿಗಳಿಗೋಸ್ಕರ ಹಂಚಿಕೊಳ್ಳುತ್ತಾನೆ ಇರುತ್ತಾರೆ ಇನ್ನು ಇದೀಗ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳಿಗೆ ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿ ಅದರ ಬಗ್ಗೆ ಕೆಲವು ಸಾಲುಗಳನ್ನು ಬರೆದು ತಮ್ಮ ಮಕ್ಕಳ ಫೋಟೋವನ್ನು ಹಾಕಿಕೊಂಡಿದ್ದಾರೆ
ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡರು. ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳು ಎರಡೂ ಕೂಡ ಅದ್ಧೂರಿಯಾಗಿ ಬಿಡುಗಡೆಯಾಗಿ ಬಾಕ್ಸಾಫೀಸ್ ಅನ್ನೇ ಮೀರಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮೊದಲಿನ ಹೆಸರು ನವೀನ್ ಕುಮಾರ್ ಗೌಡ. ಇವರು ಜನವರಿ 8 1986 ರಲ್ಲಿ ಹಾಸನದಲ್ಲಿ ಜನಿಸಿದರು.
ಇವರ ತಂದೆಯ ಹೆಸರು ಅರುಣ್ ಕುಮಾರ್ ಮತ್ತು ತಾಯಿಯ ಹೆಸರು ಪುಷ್ಪ. ಯಶ್ ಅವರು ಮೊದಲು ಕಿರುತೆರೆಯ ಮೂಲಕ ನಟಿಸಿ ತದನಂತರ ಬೆಳ್ಳಿತೆರೆಗೆ ಬಂದರು. ಹೌದು ಯಶ್ ಅವರು ನಂದಗೋಕುಲ, ಸಿಲ್ಲಿ ಲಲ್ಲಿ, ಮಳೆ ಇಲ್ಲದ ಮೇಲೆ, ಶಿವ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಇವರು ಕೆಲ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ ರಾಖಿ ಚಿತ್ರದ ಮೂಲಕ ಇವರು ತೆರೆಯ ಮೇಲೆ ಹೀರೋ ಆಗಿ ಕಾಣಿಸಿಕೊಂಡರು.
ಇದಾದ ಮೇಲೆ ಇವರು ಸಾಲು ಸಾಲುಗಳಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಸ್ತುತ ಯಶ್ ಅವರ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿದೆ. ಇನ್ನು ಇವರ ಮುಂದಿನ ಚಿತ್ರ ಯಾವುದು ಎಂದು ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳಲ್ಲಿ ತುಂಬಾನೇ ಕುತೂಹಲವಿದೆ.
ಹಾಗೆಯೇ ರಾಧಿಕಾ ಪಂಡಿತ್ ಅವರು ಕೂಡ ಮೊದಲು ನಂದಗೋಕುಲ ಧಾರಾವಾಹಿಯಲ್ಲಿ ನಟಿಸಿದ ಮೇಲೆ ಮೊಗ್ಗಿನ ಮನಸು ಚಿತ್ರದ ಮೂಲಕ ಇವರು ಹೀರೋಯಿನ್ ಆಗಿ ಎಂಟ್ರಿ ನೀಡಿದರು. ಇದಾದ ಮೇಲೆ ಇವರು ಸಾಕಷ್ಟು ದೊಡ್ಡ ದೊಡ್ಡ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡು ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ.
ಯಶ್ ಮತ್ತು ರಾಧಿಕಾ ಅವರು ಬಹು ವರ್ಷಗಳ ಕಾಲ ಪ್ರೀತಿಸಿ ತಾಜ್ ಹೋಟೆಲ್ ನಲ್ಲಿ ಡಿಸೆಂಬರ್ 9 2016 ರಂದು ಅದ್ದೂರಿಯಾಗಿ ವಿವಾಹ ಮಾಡಿಕೊಂಡರು. ಇವರಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ…..