ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ ಕೃತಿ ಖರಬಂಧ ಅವರು ಮದುವೆ ಆಗುತ್ತಿರುವ ಹುಡುಗ ಯಾರು ಗೊತ್ತಾ.!! ಎರಡನೇ ಹೆಂಡತಿಯಾಗಿ ಮದುವೆಯಾಗಲಿದ್ದಾರೆ !!
ಕೃತಿ ಖರಬಂದ ಅವರು ಅಕ್ಟೋಬರ್ 29 1990 ರಂದು ಜನಿಸಿದರು. ಇವರ ತಂದೆ ತಾಯಿಯ ಹೆಸರು ಅಶ್ವನಿ ಖರಬಂದ ಮತ್ತು ರಜನಿ ಖರಬಂದ ಎಂದು. ಇವರಿಗೆ ಇಶಿತಾ ಖರಬಂದ ಮತ್ತು ಜೈವರ್ಧನ್ ಖರಬಂದ ಎನ್ನುವ ಸಹೋದರಿ ಸಹೋದರ ಕೂಡ ಇದ್ದಾರೆ. ಕೃತಿ ಖರಬಂದ ಅವರು ಪಂಜಾಬಿ ಕುಟುಂಬಕ್ಕೆ ಸೇರಿದ್ದು ಡೆಲ್ಲಿಯಲ್ಲಿ ಹುಟ್ಟಿದ್ದಾರೆ.
ಸ್ವಲ್ಪ ವರ್ಷಗಳು ಆದಮೇಲೆ ತಮ್ಮ ಕುಟುಂಬದ ಜೊತೆಗೆ ಬೆಂಗಳೂರಿಗೆ ಬಂದು ನೆಲೆಸುತ್ತಾರೆ. ಇವರು ಜ್ಯುವೆಲರಿ ಡಿಸೈನಿಂಗ್ ನಲ್ಲಿ ಡಿಪ್ಲೊಮಾ ಪದವಿಯನ್ನು ಮಾಡಿದ್ದಾರೆ. ಇವರು ಬಾಲನಟಿಯಾಗಿ ಸಾಕಷ್ಟು ಟಿವಿ ಆಡ್ ಗಳಲ್ಲಿ ಮಾಡಿದ್ದಾರೆ. ಕೃತಿ ಖರಬಂದ ಅವರು 2009 ರಲ್ಲಿ ತೆಲುಗಿನ ಬೋನಿ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು.
ಇನ್ನೂ ನಮ್ಮ ಕನ್ನಡದಲ್ಲಿ 2010 ರಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಚಿರು ಸಿನಿಮಾದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಪ್ರೇಮ್ ಅಡ್ಡಾ, ಗಲಾಟೆ, ಗೂಗ್ಲಿ, ತಿರುಪತಿ ಎಕ್ಸ್ ಪ್ರೆಸ್, ಸೂಪರ್ ರಂಗ, ಬೆಳ್ಳಿ, ಮಿಂಚಾಗಿ ನೀ ಬರಲು, ಮಾಸ್ತಿಗುಡಿ, ದಳಪತಿ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕೃತಿ ಖರಬಂದ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಹವಾ ಕೂಡ ಇದೆ. ಇದರ ಜೊತೆಗೆ ಇವರಿಗೆ ಸಾಕಷ್ಟು ಅಭಿಮಾನಿಗಳ ಬಳಗವೇ ಇದೆ ಎಂದು ಹೇಳಬಹುದು. ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಗೂಗ್ಲಿ ಚಿತ್ರದಲ್ಲಿ ನಟಿಸಿ ಕನ್ನಡದಲ್ಲಿ ಮತ್ತಷ್ಟು ಜನಪ್ರಿಯತೆಯನ್ನು ಸಾಧಿಸಿಕೊಂಡರು. ಇದರ ಜೊತೆಗೆ ಸಾಕಷ್ಟು ತೆಲುಗು ಮತ್ತು ಹಿಂದಿಯಲ್ಲಿ ಕೂಡ ನಟಿಸಿದ್ದಾರೆ.
ಪ್ರಸ್ತುತ ಕೃತಿ ಖರಬಂದ ಅವರು ತೆಲುಗು ಮತ್ತು ಹಿಂದಿ ಚಿತ್ರಗಳನ್ನು ಮಾಡುವುದರಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನೂ ಕೃತಿ ಖರಬಂದ ಅವರು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ವಿವಾಹ ಮಾಡಿಕೊಳ್ಳಲಿದ್ದಾರೆ. ಇವರಿಬ್ಬರ ಪ್ರೀತಿಯ ಬಗ್ಗೆ ಈಗಾಗಲೇ ಕೃತಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ಇನ್ನು ಪುಲ್ಕಿತ್ ಸಾಮ್ರಾಟ್ ಅವರ ಜೊತೆಗೆ ಕೃತಿ ಅವರು ಹಿಂದಿಯಲ್ಲಿ ವೀರೆ ಕಿ ವೆಡ್ಡಿಂಗ್, ಪಾಗಲ್ ಪಂಟಿ ಮತ್ತು ಟೈಶ್ ಚಿತ್ರಗಳಲ್ಲಿ ನಟಿಸಿದ್ದಾರೆ…..