ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ನಟಿಸಿದ ವಿಲನ್ ಅವಿನಾಶ್ ಅವರ ಕುಟುಂಬ ಹೇಗಿದೆ ನೋಡಿ, ಅವರ ಪತ್ನಿ ಕೂಡ ತುಂಬಾ ಫೇಮಸ್ ಇದಾರೆ ಕಣ್ರೀ !!
ಕೆಜಿಎಫ್ ಚಿತ್ರದ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡಿತು. ಕೆಜಿಎಫ್ 1 ಚಿತ್ರ ಬಿಡುಗಡೆಯಾಗಿ ಸುಮಾರು 3 ವರ್ಷಗಳು ಆಗುತ್ತಿವೆ. ಆದರೂ ಕೂಡ ಅಭಿಮಾನಿಗಳು ಈ ಸಿನಿಮಾದ ಕ್ರೇಜ್ ಅನ್ನು ಮರೆತಿಲ್ಲ. ಇದೀಗ ಅಭಿಮಾನಿಗಳು ಎಲ್ಲರೂ ಕೆಜಿಎಫ್ 2 ಚಿತ್ರಕ್ಕಾಗಿ ತುಂಬಾನೇ ಕಾಯುತ್ತಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ನಟಿಸಿದ ಸಾಕಷ್ಟು ಕಲಾವಿದರಿಗೆ ಒಳ್ಳೆಯ ಜೀವನ ಸಿಕ್ಕಿದೆ ಎಂದು ಹೇಳಬಹುದು.
ಹೌದು ಇದರಲ್ಲಿ ನಟಿಸಿದ ಕಲಾವಿದರಿಗೆ ಬೇರೆ ಬೇರೆ ಸಿನಿಮಾಗಳಲ್ಲಿ ಕೂಡ ಅವಕಾಶಗಳು ಸಿಗಲು ಶುರುವಾಗಿದೆ. ಕೆಜಿಎಫ್ ಚಿತ್ರದಲ್ಲಿ ಸಾಕಷ್ಟು ವಿಲನ್ ಗಳು ಇದ್ದಾರೆ ಎಂದು ನಿಮಗೂ ಗೊತ್ತು. ಅದರಲ್ಲಿ ಅವಿನಾಶ್ ಬಿ.ಎಸ್ ಅವರು ಕೆಜಿಎಫ್ 1 ಚಿತ್ರದಲ್ಲಿ ತಮ್ಮ ನಟನೆಯಿಂದ ಛಾಪನ್ನು ಮೂಡಿಸಿದ್ದಾರೆ. ಇವರ ಬಗ್ಗೆ ಕೆಲ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ..
ಅವಿನಾಶ್ ಅವರು ಯಾವುದೇ ರೀತಿಯ ನಟನೆಯ ಬ್ಯಾಗ್ರೌಂಡ್ ನಿಂದ ಬಂದಿಲ್ಲ. ಹಾಗಾಗಿ ಕೆಜಿಎಫ್ ಸಿನಿಮಾ ಇವರ ಮೊಟ್ಟ ಮೊದಲ ಸಿನಿಮಾವಾಗಿದೆ. ಇವರು ಬಿಸಿನೆಸ್ ನಲ್ಲಿ ಯಶಸ್ಸನ್ನು ಸಾಧಿಸಿರುವ ವ್ಯಕ್ತಿ. ತಮ್ಮ ಬಿಸಿನೆಸ್ ನಿಂದಲೇ ಐಷಾರಾಮಿ ಜೀವನವನ್ನು ಮಾಡುತ್ತಿದ್ದಾರೆ. ಇವರ ಬಳಿ ಸಾಕಷ್ಟು ಕಾರುಗಳು ಬೈಕುಗಳು ಕೂಡ ಇವೆ. ಇವರಿಗೆ ಕಾರ್ ಮತ್ತು ಬೈಕ್ ಎಂದರೆ ತುಂಬಾ ಇಷ್ಟ.
ಬಿಡುವಿದ್ದ ಸಮಯದಲ್ಲಿ ಇವರ ಸ್ನೇಹಿತರ ಜೊತೆಗೆ ಟ್ರಿಪ್ ಗಳಿಗೆ ಹೋಗುತ್ತಾರೆ. ಇನ್ನು ಇವರ ಪತ್ನಿಯ ಹೆಸರು ಸಂಗೀತ. ಇವರಿಗೆ ಒಬ್ಬ ಮಗ ಕೂಡ ಇದ್ದಾರೆ. ಇನ್ನು ಇವರ ಮನೆಯಲ್ಲಿ ವೀರ್ ಮತ್ತು ರುದ್ರ ಎನ್ನುವ 2 ನಾಯಿಗಳು ಕೂಡ ಇವೆ. ಇವುಗಳನ್ನು ನೋಡಿದರೆ ತುಂಬಾ ಭಯಂಕರವಾಗಿ ಇರುತ್ತವೆ. ಅವಿನಾಶ್ ಅವರಿಗೆ ಕೆಜಿಎಫ್ ಚಿತ್ರದಲ್ಲಿ ನಟಿಸುವುದಕ್ಕೆ ಅಚಾನಕ್ಕಾಗಿ ಅವಕಾಶ ದೊರಕಿತು.
ಈಗ ಇವರು ಕೆಜಿಎಫ್ ಚಿತ್ರದ ಮೂಲಕ ತುಂಬಾನೇ ಜನಪ್ರಿಯರಾಗಿದ್ದಾರೆ. ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಿತ್ರದಲ್ಲಿ ಆಂಡ್ರ್ಯೂಸ್ ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು. ಈ ಪಾತ್ರಕ್ಕೆ ಇವರು ಸರಿಹೋಗುತ್ತಾರೆ ಎಂದು ಇವರನ್ನು ಆಯ್ಕೆ ಮಾಡಿಕೊಂಡರು. ಇದರಿಂದ ನಟಿಸಿದ ಅವಿನಾಶ್ ಅವರಿಗೆ ಈಗ ಸಾಲುಸಾಲಾಗಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ದೊರಕುತ್ತಿವೆ.
ಇವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿ ಇರುತ್ತಾರೆ. ಕೆಜಿಎಫ್ ಚಿತ್ರದಲ್ಲಿ ನಟಿಸಿದ ಸಾಕಷ್ಟು ಸುಂದರ ಕ್ಷಣಗಳನ್ನು ತಮ್ಮ ಕುಟುಂಬದವರ ಜೊತೆಗೆ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾನೆ ಇರುತ್ತಾರೆ.
ಇವರಿಗೆ ಕನ್ನಡ ಮಾತ್ರವಲ್ಲ ಈಗ ತೆಲುಗಿನಲ್ಲೂ ಕೂಡ ನಟಿಸುವುದಕ್ಕೆ ಅವಕಾಶಗಳು ಸಿಗುತ್ತಿವೆ. ಪ್ರಸ್ತುತ ಅವಿನಾಶ್ ಅವರು ಕೆಜಿಎಫ್ 2 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಮೇಲೆ ಬೇರೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಅವಿನಾಶ್ ಅವರ ಸುಂದರ ಕುಟುಂಬದ ಕ್ಷಣಗಳು ಇಲ್ಲಿವೆ…..