ರಶ್ಮಿಕಾ ಮಂದಣ್ಣ ಮನೆ ಮೊದಲ ಬಾರಿಗೆ ನೋಡಿ, ಎಲ್ಲಿದೆ ಮತ್ತು ಹೇಗಿದೆ ಗೊತ್ತೇ ಸುಂದರ ಭವ್ಯ ಬಂಗಲೆ, ಒಳಗಡೆ ಏನೇನೆಲ್ಲಾ ಇದೆ ನೋಡಿ !!
ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5 1996 ರಂದು ಕೊಡಗಿನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಮದನ್ ಮಂದಣ್ಣ ಮತ್ತು ತಾಯಿಯ ಹೆಸರು ಸುಮನ್ ಮಂದಣ್ಣ. ಇವರಿಗೆ ಶೀಮಾನ್ ಮಂದಣ್ಣ ಎನ್ನುವ ಸಹೋದರಿ ಕೂಡ ಇದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಸೈಕಾಲಜಿ ಜರ್ನಲಿಸಂ ಮತ್ತು ಇಂಗ್ಲೀಷ್ ಲಿಟರೇಚರ್ ಪದವಿಯನ್ನು ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಮಾಡಿ ಮುಗಿಸಿದ್ದಾರೆ.
ಇವರು ಓದುತ್ತಿರುವ ಸಮಯದಲ್ಲೇ ಮಾಡೆಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ನಂತರ ಸಾಕಷ್ಟು ಆಡ್ ಗಳಲ್ಲಿ ಅಭಿನಯ ಮಾಡುತ್ತಿದ್ದರು. ತದನಂತರ ಸಿನಿಮಾ ರಂಗಕ್ಕೆ ಬಂದು ನಟನೆ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಮೊದಲನೆಯದಾಗಿ ನಟಿಸಿ ತುಂಬಾನೇ ಜನಪ್ರಿಯ ಆದರು.
ಈ ಸಿನಿಮಾದ ಸಕ್ಸಸ್ ನಂತರ ಇವರಿಗೆ ಸಾಕಷ್ಟು ಪರಭಾಷೆಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ದೊರಕುತ್ತಿವೆ. ಅದರಲ್ಲೂ ಈಗ ಬಾಲಿವುಡ್ ನಲ್ಲೂ ಕೂಡ ರಶ್ಮಿಕಾ ಮಂದಣ್ಣ ಅವರು ಅಭಿನಯಿಸುತ್ತಿದ್ದಾರೆ. ಇವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸ್ಟೇಟ್ ಕ್ರಶ್ ಆಗಿದ್ದರು ಆದರೆ ಈಗ ಇವರು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ. ಆಗಲೇ ಹೇಳಿದಂತೆ ರಶ್ಮಿಕಾ ಅವರು 2016 ರಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿ ಬೆಳ್ಳಿತೆರೆಗೆ ಕಾಲಿಟ್ಟರು.
ಇದಾದ ಮೇಲೆ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಅಂಜನಿಪುತ್ರ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಚಮಕ್, ದರ್ಶನ್ ಅವರ ಜೊತೆ ಜೊತೆಗೆ ಯಜಮಾನ, ಧ್ರುವ ಸರ್ಜಾ ಅವರ ಜೊತೆಗೆ ಪೊಗರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ತೆಲುಗಿನಲ್ಲಿ ಇವರು 7 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಹಿಂದಿಯಲ್ಲಿ ನೋಡಿದರೆ ಮಿಷನ್ ಮಜ್ನು ಮತ್ತು ಗುಡ್ ಬಾಯ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಶೂಟಿಂಗ್ ಇನ್ನೂ ಜರುಗುತ್ತಿದ್ದು ಮುಂದಿನ ವರ್ಷ ತೆರೆಯ ಮೇಲೆ ಬರುತ್ತದೆ ಎಂದು ಹೇಳಲಾಗಿದೆ. ಇನ್ನೂ ರಶ್ಮಿಕಾ ಮಂದಣ್ಣ ಅವರ ಮನೆ ಹೇಗೆ ಎಂದು ನೀವು ಇಲ್ಲಿ ನೋಡಬಹುದು…..