ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಿಧ ಹಾಡುಗಳು ವೈರಲ್ ಆಗುತ್ತಲೇ ಇರುತ್ತವೆ. ಈ ಹಾಡುಗಳಿಗೆ ಸಾಕಷ್ಟು ಜನರು ಸ್ಟೆಪ್ಪುಗಳನ್ನು ಹಾಕಿ ರೀಲ್ಸ್ ಮಾಡುತ್ತಾರೆ. ಇದು ಈಗ ಸರ್ವೇಸಾಮಾನ್ಯ ಎಂದು ಹೇಳಬಹುದು. ಈಗ ಟ್ರೆಂಡ್ ನಂತೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಹಾಡು ಕೂಡ ನಮ್ಮ ದೇಶದಲ್ಲಿ ಮಾತ್ರವಲ್ಲ ಪರದೇಶದಲ್ಲೂ ಕೂಡ ತುಂಬಾನೇ ಫೇಮಸ್ ಆಗಿದೆ.
ಹೌದು ರಾರಾ ರಕ್ಕಮ್ಮ ಹಾಡಿನ ಒಂದು ಸಿಗ್ನೇಚರ್ ಸ್ಟೆಪ್ ಗೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಸ್ಟೆಪ್ ಅನ್ನು ಹಾಕಿ ರೀಲ್ಸ್ ಮಾಡಿದ್ದಾರೆ. ಇದರಂತೆಯೇ ಈ ಹಾಡಿನ ಸಿಗ್ನೇಚರ್ ಸ್ಟೆಪ್ ಅನ್ನು ವಿದೇಶಿಗರು ಸಹ ಹಾಕಿದ್ದಾರೆ. ಅದರಲ್ಲೂ ಬಾಂಗ್ಲಾದೇಶದ ಒಬ್ಬ ಯುವತಿ ರಾರಾ ರಕ್ಕಮ್ಮ ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಅದರ ವೀಡಿಯೋವನ್ನು ಇಲ್ಲಿ ನೀವು ನೋಡಬಹುದು.
ಇನ್ನೂ ವಿಕ್ರಾಂತ್ ರೋಣ ಸಿನಿಮಾವನ್ನು ನಟ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ ಮತ್ತು ಶಾಲಿನಿ ಜಾಕ್ ಮಂಜು ಮತ್ತು ಅಲಂಕಾರ ಪಾಂಡಿಯನ್ ಅವರು ನಿರ್ಮಾಣ ಮಾಡಿದ್ದಾರೆ. ಇನ್ನು ಇದರಲ್ಲಿ ಸುದೀಪ್ ಅವರು ನಾಯಕ ನಟರಾಗಿ ಅಭಿನಯಿಸಿದ್ದು ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಅವರು ನಾಯಕಿಯರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕಿಚ್ಚ ಸುದೀಪ್ ಅವರ ಜೊತೆಗೆ ನಿರುಪ್ ಭಂಡಾರಿ ಅವರು ಕೂಡ ಇದ್ದಾರೆ. ಇನ್ನು ಈ ಸಿನಿಮಾ ಜುಲೈ 28 2022 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಪಾತ್ರದಲ್ಲಿ, ನಿರುಪ್ ಭಂಡಾರಿ ಅವರು ಸಂಜೀವ್ ಪಾತ್ರದಲ್ಲಿ, ನೀತಾ ಅಶೋಕ್ ಅವರು ಅಪರ್ಣಾ ಪಾತ್ರದಲ್ಲಿ, ಜಾಕ್ವೆಲಿನ್ ಫರ್ನಾಂಡಿಸ್ ಅವರು ರಾಕ್ವೆಲ್ ಡಿ ಕೋಸ್ಟಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇವರುಗಳ ಜೊತೆಗೆ ರವಿಶಂಕರ್ ಗೌಡ, ಮಧುಸೂದನ್ ರಾವ್, ವಾಸುಕಿ ವೈಭವ್ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಹಾಗೆಯೇ ಈ ಸಿನಿಮಾದಲ್ಲಿರುವ ರಾರಾ ರಕ್ಕಮ್ಮ ಹಾಡಂತೂ ಎಲ್ಲಾ ಕಡೆ ತುಂಬಾನೆ ಸದ್ದನ್ನು ಮಾಡುತ್ತಿದೆ. ಇನ್ನೂ ಈ ಹಾಡನ್ನು ನಕಾಶ್ ಅಜೀಜ್ ಮತ್ತು ಸುನಿಧಿ ಚೌಹಾನ್ ಅವರು ಹಾಡಿದ್ದಾರೆ……