ಯಾರೇ ನೀನು ಚೆಲುವೆ ಎನ್ನುವ ಕನ್ನಡ ಚಿತ್ರವನ್ನು ಡಿ.ರಾಜೇಂದ್ರಬಾಬು ನಿರ್ದೇಶಿಸಿದ್ದು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಾಯಕಿಯಾಗಿ ಸಂಗೀತಾ ಅವರು ಅಭಿನಯಿಸಿದ್ದಾರೆ. ಹಾಗೆಯೇ ಎರಡನೆಯ ನಾಯಕಿಯಾಗಿ ಹೀರಾ ಅವರು ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.
ಈ ಚಿತ್ರವು ಆಗಿನ ಕಾಲದಲ್ಲಿ ಭಾರೀ ಯಶಸ್ಸನ್ನು ಸಾಧಿಸಿತು. ಇದರ ಜೊತೆಗೆ ಹೀರಾ ಅವರಿಗೂ ಕೂಡ ಕನ್ನಡದಲ್ಲಿ ತುಂಬಾನೇ ಹೆಸರನ್ನು ಕೊಟ್ಟಿತು. ಹೀರಾ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇವರು ಹುಟ್ಟಿದು ಡಿಸೆಂಬರ್ 29 1971 ರಂದು ಚೆನ್ನೈನಲ್ಲಿ. ಇನ್ನೂ ಹೀರಾ ಅವರು 1991 ರಲ್ಲಿ ತಮಿಳಿನ ಇದಯಂ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ಹಾಗೆಯೇ ಸ್ಯಾಂಡಲ್ ವುಡ್ ನಲ್ಲಿ ನೋಡಿದರೆ ಹೀರಾ ಅವರು 1993 ರಲ್ಲಿ ಅಪೂರ್ವ ಜೋಡಿ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು.
ತದನಂತರ ಕಲಾವಿದ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಹೀರಾ ಅವರು ಕನ್ನಡದಲ್ಲಿ ಕೇವಲ 2 ಚಿತ್ರಗಳಲ್ಲಿ ನಟಿಸಿದರು ಕೂಡ ಸಾಕಷ್ಟು ಕನ್ನಡಿಗರ ಮನಸ್ಸನ್ನು ದೋಚಿದ್ದಾರೆ. ಹೀರಾ ಅವರು ಎಲ್ಲಾ ಭಾಷೆಗಳಲ್ಲೂ ಸೇರಿ ಮೊತ್ತ 40 ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇನ್ನೂ ಹೀರಾ ಅವರು ಆಗ ಅಜಿತ್ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಮಾಹಿತಿಗಳು ಬಂದಿತ್ತು. ಆದರೆ ಕೆಲ ಕಾರಣಾಂತರಗಳಿಂದ ಇವರು ಇಬ್ಬರು ದೂರ ಆದರು.
ಈಗ ಇಬ್ಬರು ದೂರ ಆಗಿ ಬೇರೆ ಬೇರೆ ಮದುವೆಗಳನ್ನು ಮಾಡಿಕೊಂಡಿದ್ದಾರೆ. ಇನ್ನು ಹೀರಾ ಅವರು ಡಿಗ್ರಿಯಲ್ಲಿ ಸೈಕಾಲಜಿ ಪದವಿಯನ್ನು ಮಾಡಿ ಈಗ ಮಾನಸಿಕ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಹೀರಾ ಅವರಿಗೆ ಬಡವರು ಎಂದರೆ ತುಂಬಾ ಇಷ್ಟ ಹೀಗಾಗಿ ಸಾಕಷ್ಟು ಬಡವರಿಗೆ ಇವರು ಉಚಿತವಾಗಿ ಕೌನ್ಸೆಲಿಂಗ್ ಅನ್ನು ಸಹ ಮಾಡುತ್ತಾರೆ. ಹೀರಾ ಅವರ ಪ್ರಸ್ತುತ ದೃಶ್ಯಗಳನ್ನು ನೀವು ಇಲ್ಲಿ ನೋಡಬಹುದು…..
ರಾಧ ಭಗವತಿ ಹೆಸರು ನೀವು ಕೇಳೇ ಇರಬೇಕು!
ಆ ತೊಂಬತ್ತು ದಿನಗಳು ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರವು ರಾಷ್ಟ್ರ ಪ್ರಶಸ್ತಿ ವಿಜೇತರಾದ ಯಾಕೂಬ್ ಖಾದರ್ ಹಾಗೂ ರೋನಾಲ್ಡ್ ಲೋಬೊ ಅವರ ನಿರ್ದೇಶನವು ಇದರಲ್ಲಿದೆ. ಹಾಗೆ ರಾಧಾರವರು ಈಗ ಪ್ರಸಾರವಾಗುತ್ತಿರುವ ‘ರಾಮಾಚಾರಿ ‘ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಹಾಗೆ ಮಧು ಮಗಳು ಧಾರವಾಹಿ ನಾಯಕಿಗೆ ಕಂಠ ಸಿರಿಯಾಗಿದ್ದಾರೆ.