ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಅಷ್ಟೇ ಒಬ್ಬ ಯುವಕ ತುಂಬಾ ವೈರಲ್ ಆಗುತ್ತಿದ್ದಾರೆ. ಇನ್ನು ಈ ಯುವಕನನ್ನು ಜನರು ಸಾಕ್ಷಾತ್ ದೇವರು ಎಂದೇ ಭಾವಿಸಿ ಮೆರವಣಿಗೆ ಮಾಡುತ್ತಿದ್ದಾರೆ, ಪೂಜಿಸುತ್ತಿದ್ದಾರೆ ಮತ್ತು ಆರಾಧಿಸುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಈ ಯುವಕ ಜನರಿಗೆ ನಡೆದಾಡುವ ದೇವರು ಆಗಿದ್ದು ಹೇಗೆ ಗೊತ್ತಾ ಇದರ ಕಥೆ ಇಲ್ಲಿದೆ ನೋಡಿ.
ಉತ್ತರ ಕನ್ನಡದ ಮೂಲತಃ ಆಗಿರುವ ಮಲ್ಲಿಕಾರ್ಜುನ ಮುತ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ. ಇನ್ನು ಈ ಯುವಕನನ್ನು ಜನರು ನೋಡಿ ಸಾಕಷ್ಟು ಪ್ರೀತಿಸುತ್ತಾರೆ ಮತ್ತು ದೇವರಾಗಿ ಪೂಜಿಸುತ್ತಾರೆ. ಹೌದು, ಈ ಹುಡುಗ ಅನ್ನದಾಸೋಹ ಮತ್ತು ಅನೇಕ ಪವಾಡಗಳಿಗೆ ಸಿದ್ದ ಪುರುಷರಾಗಿ ಹೆಸರು ಮಾಡಿದ್ದಾರೆ.
ಉತ್ತರ ಕರ್ನಾಟಕದ ಅನೇಕ ಭಾಗದ ಊರುಗಳಲ್ಲಿ ಒಂದಾಗಿರುವಂತಹ ಯಾದಗಿರಿ ಜಿಲ್ಲೆಯ ಶಾಪುರ ಮಹಲ್ ರೋಜಾ ಎನ್ನುವ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ್ದಾರೆ. ಇನ್ನು ಇವರಿಗೆ ತಮ್ಮದೇ ಆದ ಮಠ ಇದೆ. ಇನ್ನು ತಮ್ಮ ಹಳ್ಳಿಯ ಉಳಿದ ಜಿಲ್ಲೆಗಳಲ್ಲಿ ಹೋಲಿಸಿದರೆ ಸಾಕ್ಷರತೆಯ ಪ್ರಮಾಣ ತುಸು ಕಡಿಮೆ ಎಂದು ಹೇಳಬಹುದು. ಆದರೆ ಅಲ್ಲಿ ದೈವ ನಂಬಿಕೆ ಆಧ್ಯಾತ್ಮಿಕ ತಳಹದಿಯಲ್ಲಿ ಈ ಭಾಗದ ಜನರು ಒಂದು ಹೆಜ್ಜೆ ಮುಂದೆ ಇದ್ದಾರೆ ಎಂದು ಹೇಳಬಹುದು.
ಇವರ ಮಠದ ಸುತ್ತಮುತ್ತಲಿನ ಜನರು ಇವರನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಇನ್ನು ಮಲ್ಲಿಕಾರ್ಜುನ ಅವರು ಎಲ್ಲೇ ಇದ್ದರೂ ಕೂಡ ಅವರ ಸುತ್ತಮುತ್ತ ಜನರ ಗುಂಪುಗಳನ್ನು ನೋಡಬಹುದು. ಇನ್ನು ಜನರು ತಮ್ಮ ಕಷ್ಟಗಳಿಗೆ ನಂಬಿರುವಂತಹ ದೈವ ಸ್ಪಂದಿಸಿದರೆ ಮಾತ್ರ ಅವರಿಗೆ ಅದರಲ್ಲಿ ಒಂದು ನಂಬಿಕೆ ಹುಟ್ಟುತ್ತದೆ. ಇನ್ನೂ ಇದರಂತೆಯೇ ಶ್ರೀಮಲ್ಲಿಕಾರ್ಜುನ ಮುತ್ಯಾ ಯಾದಗಿರಿ ಹಾಗೂ ಗುಲ್ಬರ್ಗ ಜಿಲ್ಲೆಯ ಜನತೆಯ ದೃಷ್ಟಿಯಲ್ಲಿ ಪ್ರಸ್ತುತ ಸಾಕ್ಷಾತ್ ದೇವಮಾನವರೇ ಆಗಿದ್ದಾರೆ.
ಇನ್ನು ಮಲ್ಲಿಕಾರ್ಜುನ ಮುತ್ಯಾ ಅವರ ಕಾರ್ ಬಂದರೆ ಸಾಕು ಅವರು ಕಾರುನಿಂದ ಇಳಿಯುವ ಮೊದಲೇ ಜನರು ಕಾರಿನ ಸುತ್ತು ನಿಂತುಕೊಂಡು ಗುಂಪು ಕಟ್ಟಿರುತ್ತಾರೆ. ಅವರ ಕಾಲುಗಳಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಇನ್ನು ಅವರನ್ನು ಒಮ್ಮೆಯಾದರೂ ನೋಡಬೇಕು ಅದು ನಮಗೆ ಪುಣ್ಯ ಎಂದು ಸಾಕಷ್ಟು ಜನರು ಮನಸ್ಸಿನಲ್ಲಿ ಅಂದುಕೊಂಡಿದ್ದಾರೆ……