ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರದ ಮೂಲಕ ತುಂಬಾನೇ ಜನಪ್ರಿಯ ಆದರು ಎಂದು ಹೇಳಬಹುದು. ಬೇರೆ ಬೇರೆ ದೇಶಗಳು ಕೂಡ ನಮ್ಮ ಕನ್ನಡ ಇಂಡಸ್ಟ್ರಿ ಕಡಗೆ ತಿರುಗುವಂತೆ ಮಾಡಿದರು. ಯಶ್ ಅವರು ಪ್ಯಾನ್ ಇಂಡಿಯಾ ನಟರಾಗಿದ್ದು ಇವರಿಗೆ ವಿದೇಶದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳ ಬಳಗವೇ ಇದೆ.
ನಮ್ಮ ಯಶ್ ಅವರು ಕೇವಲ ಕೆಜಿಎಫ್ ಚಿತ್ರಕ್ಕೆ ಮಾತ್ರವಲ್ಲ ತಮ್ಮ ಪ್ರತಿಯೊಂದು ಸಿನಿಮಾಗೂ ಕೂಡ ತುಂಬಾ ಕಷ್ಟವನ್ನು ಪಡುತ್ತಾರೆ. ಯಶ್ ಅವರು ಯಾವುದೇ ರೀತಿಯ ಸಿನಿಮಾದ ಬ್ಯಾಗ್ರೌಂಡ್ ಇಲ್ಲದೆ ಬೆಳ್ಳಿ ತೆರೆಗೆ ಬಂದಿದ್ದಾರೆ. ಇವರ ತಂದೆ ಸರ್ಕಾರಿ ಬಸ್ ಡ್ರೈವರ್ ಆಗಿದ್ದರು. ಇನ್ನೂ ಯಶ್ ಅವರು ತಮ್ಮ ಪಿಯುಸಿ ಪದವಿಯನ್ನು ಮೈಸೂರಿನ ಮಹಾಜನ ಎಜುಕೇಷನ್ ಸೊಸೈಟಿ ನಲ್ಲಿ ಮಾಡಿ ಮುಗಿಸಿದ್ದಾರೆ.
ತದನಂತರ ನಟನೆ ಮೇಲೆ ಆಸಕ್ತಿ ಇರುವ ಕಾರಣ ಬೆನಕ ಡ್ರಾಮಾ ಟ್ರೂಪ್ ಗೆ ಸೇರಿಕೊಂಡರು. ಇದಾದ ಮೇಲೆ ಇವರು ನಂದಗೋಕುಲ, ಪ್ರೀತಿ ಇಲ್ಲದ ಮೇಲೆ, ಮುಕ್ತ, ಮಳೆಬಿಲ್ಲು ಎನ್ನುವ ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತದನಂತರ ಜಂಭದ ಹುಡುಗಿ, ಮೊಗ್ಗಿನ ಮನಸ್ಸು ಚಿತ್ರಗಳಲ್ಲಿ ಸಹಾಯಕ ನಟರಾಗಿ ಅಭಿನಯಿಸಿದ್ದಾರೆ.
ತದನಂತರ ರಾಕಿ ಚಿತ್ರದ ಮೂಲಕ ನಾಯಕ ನಟರಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು. ಇದಾದ ಮೇಲೆ ಸಾಕಷ್ಟು ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡಿದರು. ಇನ್ನು ಯಶ್ ಅವರು ಡಿಸೆಂಬರ್ 9 2016 ರಂದು ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರನ್ನು ವಿವಾಹ ಮಾಡಿಕೊಂಡರು.
ವಿವಾಹ ಮಾಡಿಕೊಂಡ ಮೇಲೆ ಇವರು ಸಾಕಷ್ಟು ಸಮಯವನ್ನು ಕೆಜಿಎಫ್ ಚಿತ್ರಕ್ಕಾಗಿ ಮುಡಿಪಿಟ್ಟರು. ಇವರ ಪರಿಶ್ರಮ ಕಷ್ಟ ಮುಡಿಪಿಟ್ಟ ಸಮಯ ಎಲ್ಲವೂ ಕೂಡ ಈಗ ಒಂದು ದೊಡ್ಡ ಪ್ರತಿಫಲವನ್ನೇ ಕೊಡುತ್ತಿದೆ ಎಂದು ಹೇಳಬಹುದು. ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಕೂಡ ಈ ಚಿತ್ರಕ್ಕೆ ತುಂಬಾನೆ ಪರಿಶ್ರಮವನ್ನು ಪಟ್ಟಿದ್ದಾರೆ.
ಇನ್ನು ಯಶ್ ಅವರು ಹೇಗೆ ವರ್ಕೌಟ್ ಮಾಡುತ್ತಿದ್ದರು ಎಂಬುದು ನೀವು ನೋಡಿದರೆ ನಿಜಕ್ಕೂ ಶಾಕ್ ಆಗ್ತೀರಾ. ಯಶ್ ಅವರ ಕಸರತ್ತು ಹೇಗಿತ್ತು ಎನ್ನುವುದನ್ನು ಈ ವಿಡಿಯೋ ಮುಖಾಂತರ ನೀವು ನೋಡಬಹುದು……