ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಅವರು ಇಬ್ಬರೂ ಸಾಕಷ್ಟು ವರ್ಷಗಳ ಕಾಲ ಪ್ರೀತಿಸಿ ವಿವಾಹ ಮಾಡಿಕೊಂಡ ವಿಷಯ ಎಲ್ಲರಿಗೂ ಗೊತ್ತು. ಇವರು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಹೇಳಬಹುದು. ಇನ್ನೂ ಇವರಿಬ್ಬರೂ ಡಿಸೆಂಬರ್ 9 2016 ರಂದು ತುಂಬ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ.
ಇನ್ನೂ ಇವರು ಬೆಳ್ಳಿತೆರೆಗೆ ಬರುವ ಮುನ್ನ ಮೊದಲು ಕಿರುತೆರೆಯಲ್ಲಿ ನಟನೆ ಮಾಡಿದ್ದಾರೆ. ಹೌದು ರಾಧಿಕಾ ಪಂಡಿತ್ ಮತ್ತು ಯಶ್ ಅವರು ಇಬ್ಬರು ಒಟ್ಟಿಗೆ ನಂದಗೋಕುಲ ಸೀರಿಯಲ್ ಮುಖಾಂತರ ತೆರೆಯ ಮೇಲೆ ಕಾಣಿಸಿದರು. ಇನ್ನು ಇದರ ಜೊತೆಗೆ ಯಶ್ ಅವರು ಪ್ರೀತಿ ಇಲ್ಲದ ಮೇಲೆ, ಮಳೆಬಿಲ್ಲು, ಸಿಲ್ಲಿ ಲಲ್ಲಿ, ಶಿವ ಎನ್ನುವ ಧಾರಾವಾಹಿಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ.
ಇವರಿಬ್ಬರೂ ಕೂಡ ನಂದಗೋಕುಲ ಸೀರಿಯಲ್ ಮುಖಾಂತರ ತಮ್ಮ ಕೆರಿಯರ್ ಅನ್ನು ಶುರು ಮಾಡಿಕೊಂಡು ಈಗ ಸ್ಯಾಂಡಲ್ ವುಡ್ ನಲ್ಲಿ ಟಾಪ್ ಸ್ಟಾರ್ ಗಳಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿ ವಿಶ್ವಾದ್ಯಂತ ಜನಪ್ರಿಯರಾಗಿದ್ದಾರೆ.
ಇನ್ನೂ ನಂದಗೋಕುಲ ಧಾರವಾಹಿಯು 2014 ರಲ್ಲಿ ಪ್ರಸಾರವಾಗಿತ್ತು. ಈ ಸೀರಿಯಲ್ ನಲ್ಲಿ ರಾಧಿಕಾ ಪಂಡಿತ್, ಯಶ್ ಜೊತೆಗೆ ನೀತಾ, ಮೇಘಶ್ರೀ ಇನ್ನೂ ಸಾಕಷ್ಟು ಕಲಾವಿದರು ಅಭಿನಯ ಮಾಡಿದ್ದಾರೆ. ಇನ್ನು ನಂದಗೋಕುಲ ಧಾರಾವಾಹಿಯನ್ನು ನಾಗತ್ತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನ ಮಾಡಿದ್ದಾರೆ ಮತ್ತು ಈ ಸೀರಿಯಲ್ ಅನ್ನು ರೇಖಾಚಿತ್ರ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.
ಇಲ್ಲಿ ನೀವು ನಂದಗೋಕುಲ ಧಾರಾವಾಹಿಯ ಕೆಲ ಸುಂದರ ದೃಶ್ಯಗಳನ್ನು ನೋಡಬಹುದು. ಈ ಸೀರಿಯಲ್ ಮುಖಾಂತರ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಒಟ್ಟಿಗೆ ನಟಿಸಿ ತದನಂತರ ಕೆಲ ವರ್ಷಗಳ ಕಾಲ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಈಗ ವಿವಾಹ ಮಾಡಿಕೊಂಡಿದ್ದಾರೆ.
ಇವರಿಬ್ಬರು ನಮ್ಮ ಸ್ಯಾಂಡಲ್ ವುಡ್ ಗೆ ಹೆಮ್ಮೆ ಎಂದು ಹೇಳಬಹುದು. ಇನ್ನು ಇವರಿಗೆ ಐರಾ ಯಶ್ ಮತ್ತು ಯಥರ್ವ್ ಯಶ್ ಎನ್ನುವ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ…..