ಕನ್ನಡದ ಜನಪ್ರಿಯ ನಟಿ ಶ್ರುತಿ ಅವರು ಈಗ ಕಿರುತೆರೆಯಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಎನ್ನುವ ಜನಪ್ರಿಯ ಕಾಮಿಡಿ ರಿಯಾಲಿಟಿ ಶೋನಲ್ಲಿ ಶ್ರುತಿ ಅವರು ಜಡ್ಜ್ ಆಗಿದ್ದಾರೆ. ಇನ್ನೂ ಇವರ ಜೊತೆಗೆ ಹಾಸ್ಯನಟ ಸಾಧುಕೋಕಿಲ ಅವರು ಕೂಡ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಗೆಯೇ ಈ ಕಾರ್ಯಕ್ರಮವನ್ನು ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಅವರು ನಿರೂಪಣೆಯನ್ನು ಮಾಡುತ್ತಿದ್ದಾರೆ. ಇನ್ನು ಈ ರಿಯಾಲಿಟಿ ಶೋ ಅನ್ನು ನೋಡುತ್ತಿರುವ ಸಾಕಷ್ಟು ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದರಲ್ಲಿ ಬರುವ ಒಂದೊಂದು ಸ್ಕಿಟ್ ಮತ್ತು ಪಾತ್ರಗಳು ಕೂಡ ತುಂಬಾ ಅದ್ಭುತವಾಗಿದೆ ಎಂದು ಹೇಳಬಹುದು. ಇನ್ನೂ ಶ್ರುತಿ ಅವರು ಮೊದಲ ಬಾರಿಗೆ ತಮ್ಮ ಅಣ್ಣ ಆಗಿರುವ ಹಾಸ್ಯನಟ ಶರಣ್ ಅವರ ಜೊತೆಗೆ ರೀಲ್ಸ್ ಅನ್ನು ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ನೀವೂ ಸಹ ಇಲ್ಲಿ ನೋಡಬಹುದು.
ಹಾಗೆಯೇ ಶ್ರುತಿ ಅವರಿಗೆ ವ್ಯವಸಾಯ ಕೆಲಸವು ಅಂದರೆ ತುಂಬಾ ಇಷ್ಟ. ಇದಕ್ಕಾಗಿ ಶ್ರುತಿ ಅವರು ಸ್ವಂತ ಜಮೀನನ್ನು ಖರೀದಿ ಮಾಡಿ ಅದರಲ್ಲಿ ಸ್ವಂತವಾಗಿ ಉಳುಮೆ ಮಾಡಿ ಸಾಕಷ್ಟು ವಿವಿಧ ಬೆಳೆಗಳನ್ನು ಬೆಳೆಸಿದ್ದಾರೆ. ಇನ್ನೂ ಇವರಿಗೆ ಮಹೇಂದರ್ ಗೌರಿ ಎನ್ನುವ ಮಗಳು ಸಹ ಇದ್ದಾರೆ. ಹಾಗೆಯೇ ಶ್ರುತಿ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಇವರು ಕೆಲ ಸಿನಿಮಾಗಳನ್ನು ತೆಲುಗು ತಮಿಳು ಮತ್ತು ಮಲಯಾಳಂ ನಲ್ಲಿ ಕೂಡ ಅಭಿನಯ ಮಾಡಿದ್ದಾರೆ.
ಇವರು 1989 ರಲ್ಲಿ ಮಲಯಾಳಂನಲ್ಲಿ ಸ್ವಂತಂ ಎನ್ನೂ ಕಾರುತಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು. ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 1990 ರಲ್ಲಿ ನಂಬಿದ್ರೆ ನಂಬಿ ಬಿಟ್ರೆ ಬಿಡಿ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಇದಾದ ಮೇಲೆ ಇವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಶ್ರುತಿ ಅವರು ಬಿಗ್ ಬಾಸ್ ಕನ್ನಡ ಸೀಸನ್ ಮೂರರಲ್ಲಿ ಭಾಗವಹಿಸಿ ಅದರಲ್ಲಿ ವಿನ್ನರ್ ಕೂಡ ಆಗಿದ್ದರು…..