ದಕ್ಷಿಣ ಭಾರತದ ಖ್ಯಾತ ನಟಿ ಎಂದೇ ಗುರುತಿಸಿಕೊಂಡಿರುವ ನಿರೋಷಾ ಅವರು ಜನವರಿ 31 1971 ರಂದು ಜನಿಸಿದರು. ಇವರ ತಂದೆಯ ಹೆಸರು ಎಂ ಆರ್ ರಾಧಾ ಮತ್ತು ತಾಯಿಯ ಹೆಸರು ಗೀತಾ ರಾಧ ಎಂದು. ಇನ್ನು ನಿರೋಷಾ ಅವರು ತಮಿಳು ತೆಲುಗು ಮಲಯಾಳಂ ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ನಿರೋಷಾ ಅವರು 1988 ರಲ್ಲಿ ತಮಿಳಿನಲ್ಲಿ ಅಗ್ನಿ ನಾಟ್ ಚೈತ್ರಂ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1991 ರಲ್ಲಿ ಇಬ್ಬರು ಹೆಂಡಿರ ಮುದ್ದಿನ ಪೋಲಿಸ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ತದನಂತರ ಮಿಡಿದ ಹೃದಯಗಳು, ಲಾಕಪ್ ಡೆತ್, ಗಂಡುಗುಳಿ, ಮದರ್ ಇಂಡಿಯಾ, ಓಹೋ, ಎಮರ್ಜೆನ್ಸಿ, ಶಿವ, ಪಾಳೇಗಾರ, ಬೃಂದಾವನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡದಲ್ಲಿ ಇವರು ನಟಿಸಿದ ಮಿಡಿದ ಹೃದಯಗಳು ಎನ್ನುವ ಎರಡನೆಯ ಚಿತ್ರದ ಮೂಲಕವೇ ನಿರೋಷಾ ಅವರು ಸಾಕಷ್ಟು ಜನಪ್ರಿಯತೆಯನ್ನು ಕನ್ನಡ ಇಂಡಸ್ಟ್ರಿಯಲ್ಲಿ ಸಾಧಿಸಿಕೊಂಡರು. ಇನ್ನೂ ನಿರೋಷಾ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿ ಸಾಕಷ್ಟು ನಟಿಸಿದ್ದಾರೆ. ಹಾಗೆಯೇ ನಿರೋಷಾ ಅವರು 1995 ರಲ್ಲಿ ನಟ ರಾಮ್ಕಿ ಅವರನ್ನು ವಿವಾಹ ಮಾಡಿಕೊಂಡರು.
ವಿವಾಹ ಮಾಡಿಕೊಂಡ ಮೇಲೆ ನಿರೋಷಾ ಅವರು ಸಿನಿಮಾ ರಂಗದಿಂದ ದೂರ ಆದರು. ತದನಂತರ 2000 ರಲ್ಲಿ ಪೋಷಕ ನಟಿಯಾಗಿ ಅಭಿನಯಿಸುವುದಕ್ಕೆ ಮತ್ತೆ ತೆರೆಯ ಮೇಲೆ ಬಂದರು. ಇನ್ನೂ ನಿರೋಷಾ ಅವರ ಪತಿ ನಟ ರಾಮ್ಕಿ ಅವರು ತಮಿಳು ಮತ್ತು ತೆಲುಗಿನ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ.
ಇವರು ಮಾರ್ಚ್ 31 1962 ರಂದು ಜನಿಸಿದ್ದಾರೆ. ರಾಮ್ಕಿ ಅವರು ತಮಿಳು ಮತ್ತು ತೆಲುಗಿನಲ್ಲಿ ಸೇರಿ ಸುಮಾರು 70 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಬಹುದು. ಪ್ರಸ್ತುತ ನಿರೋಷಾ ಅವರು ತೆಲುಗಿನ ಒಂದು ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಹಾಗೆಯೇ ನಟ ರಾಮ್ಕಿ ಮತ್ತು ನಟಿ ನಿರೋಷಾ ಅವರ ಕೆಲ ಅಪರೂಪದ ದೃಶ್ಯಗಳನ್ನು ನೋಡಬಹುದು…..