ಕೆಲ ನಟಿಯರು ಸ್ಯಾಂಡಲ್ ವುಡ್ ಗೆ ಬಂದು ಕೆಲ ಚಿತ್ರಗಳಲ್ಲಿ ನಟಿಸಿ ಮಿಂಚಿನಂತೆ ಮರೆಯಾಗುತ್ತಾರೆ. ಇವರು ಕೇವಲ ಕೆಲ ಚಿತ್ರಗಳಲ್ಲಿ ನಟಿಸಿದರೂ ತುಂಬಾನೇ ಜನಪ್ರಿಯರಾಗಿದ್ದಾರೆ. ಅಂತಹ ನಟಿಯರು ಯಾರು ಎಂದು ನೋಡೋಣ..
ಹೀರಾ ಅವರು ಡಿಸೆಂಬರ್ 29 1971 ರಂದು ಜನಿಸಿದ್ದಾರೆ. ಇವರು ತಮಿಳು ತೆಲುಗು ಕನ್ನಡ ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡದಲ್ಲಿ ಕೇವಲ ಕಲಾವಿದ ಮತ್ತು ಯಾರೇ ನೀನು ಚೆಲುವೆ ಚಿತ್ರಗಳಲ್ಲಿ ಅಭಿನಯಿಸಿದರು ಕೂಡ ಕನ್ನಡಿಗರ ಮನಸ್ಸಿನಲ್ಲಿ ಅಚ್ಚೆ ಆಗಿ ಉಳಿದಿದ್ದಾರೆ.
ಚಾರುಲತಾ ಅವರು ಕನ್ನಡ ತಮಿಳು ತೆಲುಗು ಒಡಿಯಾ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಕನ್ನಡದಲ್ಲಿ ಓ ಮಲ್ಲಿಗೆ, ಜೋಡಿಹಕ್ಕಿ ಸೇರಿದಂತೆ ಇನ್ನೂ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್ ವುಡ್ ನಲ್ಲಿ ಸಖತ್ ಫೇಮಸ್ ಆಗಿದ್ದಾರೆ.
ಸಾಕ್ಷಿ ಶಿವಾನಂದ್ಬಅವರು ತೆಲುಗು ತಮಿಳು ಮಲಯಾಳಂ ಕನ್ನಡ ಮತ್ತು ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆಯೇ ನಮ್ಮ ಕನ್ನಡದಲ್ಲಿ ಗಲಾಟೆ ಅಳಿಯಂದ್ರು, ನಾನು ನಾನೇ, ಸೈನಿಕ, ಕೋದಂಡರಾಮ, ತಂದೆಗೆ ತಕ್ಕ ಮಗ, ಸೌಂದರ್ಯ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ದೋಚಿಕೊಂಡಿದ್ದಾರೆ.
ಸಂಗೀತ ಅವರು ಕೂಡ ಕನ್ನಡದಲ್ಲಿ ಕೇವಲ 2 ಚಿತ್ರಗಳಲ್ಲಿ ನಟಿಸಿ ಅವರ ಮುದ್ದು ಮುಖ ಮತ್ತು ಅಭಿನಯದಿಂದ ಸಾಕಷ್ಟು ಕನ್ನಡಿಗರನ್ನು ತಮ್ಮ ಕಡೆ ಸೆಳೆದುಕೊಂಡಿದ್ದಾರೆ.
ನಿರೋಶಾ ಅವರು ಜನವರಿ 23 1971 ರಂದು ಜನಿಸಿದ್ದಾರೆ. ಇವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಸೇರಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದು ನಮ್ಮ ಕನ್ನಡದಲ್ಲಿ ಸುಮಾರು ಹತ್ತು ಚಿತ್ರಗಳಲ್ಲಿ ನಟಿಸಿ ಇವರ ಸೌಂದರ್ಯದಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ.
ನಗ್ಮಾ ಅವರು ಡಿಸೆಂಬರ್ 25 1974 ರಂದು ಜನಿಸಿದ್ದಾರೆ. ಇವರು ವಿವಿಧ ಭಾಷೆಯಲ್ಲಿ ನಟಿಸಿದ್ದು ನಮ್ಮ ಕನ್ನಡದಲ್ಲಿ ಕುರುಬನ ರಾಣಿ, ರವಿಮಾಮ, ಹೃದಯವಂತ ಚಿತ್ರಗಳಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಖ್ಯಾತಿಯನ್ನು ಗಳಿಸಿದ್ದಾರೆ.
ಮೀರಾ ಜಾಸ್ಮಿನ್ ಅವರು ಫೆಬ್ರವರಿ 15 1982 ರಂದು ಜನಿಸಿದ್ದಾರೆ. ಇವರು ಕೂಡ ಸಾಕಷ್ಟು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದು ನಮ್ಮ ಕನ್ನಡದಲ್ಲಿ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಕಲ್ಯಾಣಿ ಅವರು ಮಲಯಾಳಂ ತೆಲುಗು ತಮಿಳು ಮತ್ತು ಕನ್ನಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ನಮ್ಮ ಕನ್ನಡದಲ್ಲಿ ಸಂಭ್ರಮ, ಚೈತ್ರದ ಚಿಗುರು, ರಾಮ ಕೃಷ್ಣ, ಹೆಬ್ಬುಲಿ ಚಿತ್ರಗಳಲ್ಲಿ ನಟಿಸಿ ಸ್ಯಾಂಡಲ್ ವುಡ್ ನಲ್ಲೂ ಸಖತ್ ಫೇಮಸ್ ಆಗಿದ್ದಾರೆ.
ಛಾಯಾ ಸಿಂಗ್ ಅವರು ಕೂಡ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಮ್ಮ ಕನ್ನಡದಲ್ಲಿ ನೋಡಿದರೆ ಮುನ್ನುಡಿ, ರಾಷ್ಟ್ರಗೀತೆ, ಗುಟ್ಟು, ತುಂಟಾಟ ಹೀಗೆ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ…..