ಕನ್ನಡದ ಜನಪ್ರಿಯ ನಟ ಮತ್ತು ಖ್ಯಾತ ನಿರೂಪಕ ಆಗಿರುವ ಮಾಸ್ಟರ್ ಆನಂದ್ ಅವರು ಜನವರಿ 4 1984 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಮೊದಲು ಬಾಲನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಆಗಲೇ ಒಂದು ಗುರುತನ್ನು ಸಾಧಿಸಿಕೊಂಡವರು. ಹೌದು ಇವರು ಬಾಲನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತುಂಬಾನೇ ಜನಪ್ರಿಯರಾಗಿದ್ದಾರೆ.
ಆನಂದ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ನೋಡಿ ಇದೀಗ ಯಶಸ್ವಿ ನಟ ಮತ್ತು ನಿರೂಪಕ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಇವರ ತಂದೆಯ ಹೆಸರು ಬಿ.ಹರಿಹರಣ್ ಮತ್ತು ತಾಯಿಯ ಹೆಸರು ಬಿ.ಎಸ್ ಲತಾ. ಇವರು ಬಾಲ ನಟರಾಗಿ ನಟಿಸಿದ ಗೌರಿಗಣೇಶ ಚಿತ್ರ ಸಕತ್ ಫೇಮಸ್ ಆಯ್ತು ಮತ್ತು ಇದರ ಮುಖಾಂತರ ಇವರು ಕೂಡ ತುಂಬಾನೇ ಪ್ರಖ್ಯಾತರನ್ನು ಸಾಧಿಸಿಕೊಂಡರು.
ತದನಂತರ ಬೆಳ್ಳಿಯಪ್ಪ ಬಂಗಾರಪ್ಪ, ಶಾಂತಿಕ್ರಾಂತಿ, ಮುತ್ತಿನಹಾರ, ಕರ್ಪೂರದ ಗೊಂಬೆ, ಫ್ರೆಂಡ್ಸ್, ಪ್ರೀತಿಗಾಗಿ, ಜೇಷ್ಠ, ಸಚಿನ್, ಹೊಸವರ್ಷ, ಪ್ರೀತಿ ನೀ ಹೀಗೇಕೆ, 5 ಈಡಿಯಟ್ಸ್, ಬುಲೆಟ್ ಬಸ್ಯ, ಜಾತ್ರೆ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಬಹುದು.
ಇದರ ಜೊತೆಗೆ ಎಸ್ಸೆಸ್ಸೆಲ್ಸಿ ನನ್ ಮಕ್ಳು, ಪಡುವಾರಳ್ಳಿ ಪಡ್ಡೆಗಳು, ರೋಬೋ ಫ್ಯಾಮಿಲಿ, ನಿಗೂಢ ರಾತ್ರಿ ಎನ್ನುವ ಧಾರಾವಾಹಿಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ ಮತ್ತು ಈ ಧಾರಾವಾಹಿಗಳನ್ನು ಸ್ವತಃ ನಿರ್ದೇಶನ ಕೂಡ ಮಾಡಿದ್ದಾರೆ. ಹಾಗೆಯೇ ಆಗಲೇ ಹೇಳಿದಂತೆ ಮಾಸ್ಟರ್ ಆನಂದ್ ಅವರು ಖ್ಯಾತ ನಿರೂಪಕ ಆಗಿ ಕೂಡ ಗುರುತಿಸಿಕೊಂಡಿದ್ದಾರೆ.
ಇವರು ಮೊದಲು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದರು. ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ತದನಂತರ ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್ ಸೀಸನ್ 2, ಕಾಮಿಡಿ ಕಿಲಾಡಿಗಳು ಸೀಸನ್ 2, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್, ಡ್ರಾಮಾ ಜೂನಿರ್ಯಸ್ ಸೀಸನ್ 3, ಕಾಮಿಡಿ ಕಿಲಾಡಿಗಳು ಸೀಸನ್ 2 ಶೋಗಳನ್ನು ಹೋಸ್ಟ್ ಮಾಡಲಾಗಿದೆ.
ಇನ್ನೂ ಮಾಸ್ಟರ್ ಆನಂದ್ ಅವರು ಮಾರ್ಚ್ 18 2010 ರಂದು ಯಶಸ್ವಿನಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ವಂಶಿಕಾ ಮತ್ತು ಕೃಷ್ಣ ಚೈತನ್ಯ ಎಂಬ ಇಬ್ಬರು ಮಕ್ಕಳು ಇದ್ದಾರೆ. ಇನ್ನು ಇಲ್ಲಿ ಮಾಸ್ಟರ್ ಆನಂದ್ ಅವರ ಮನೆ ಹೇಗಿದೆ ಎಂದು ನೋಡಬಹುದು…..