Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಾಸ್ಟರ್ ಆನಂದ್ ಮಗಳ ಬಾಲ್ಯದ ಕ್ಯೂಟ್ ವಿಡಿಯೋ..!!  ನೋಡಿ ಮಗು ಅದಾಗಲೇ ಎಷ್ಟು ಸೊಗಸಾಗಿ ಆಡುತಿತ್ತು !!

0

ಮಾಸ್ಟರ್ ಆನಂದ್ ಮಗಳು ವಂಶಿಕಾ ಅಂಜನಾ ಕಶ್ಯಪಾ ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಆಗಿರುವ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ತನ್ನ ತಾಯಿಯ ಜೊತೆಗೆ ಭಾಗವಹಿಸಿ ಸಾಕಷ್ಟು ಅಭಿಮಾನಿಗಳನ್ನು ತನ್ನ ಕಡೆ ಸೆಳೆದುಕೊಂಡಿದ್ದಾಳೆ ಎಂದು ಹೇಳಬಹುದು.

ಇನ್ನು ಇದರ ಜೊತೆಗೆ ವಂಶಿಕಾ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸಾಕಷ್ಟು ರೀಲ್ಸ್ ಗಳನ್ನು ಕೂಡ ಮಾಡುತ್ತಿರುತ್ತಾಳೆ ಜೊತೆಗೆ ಕೆಲ ಹಾಸ್ಯವನ್ನು ಕೂಡ ಮಾಡುತ್ತಾಳೆ. ಮಾಸ್ಟರ್ ಆನಂದ್ ಮಗಳಾದ ವಂಶಿಕಾ ಬಾಲ್ಯ ವಯಸ್ಸಿನಲ್ಲಿರುವ ಕ್ಯೂಟ್ ವಿಡಿಯೋ ಇಲ್ಲಿದೆ ನಿಮಗಾಗಿ.

ಇನ್ನೂ ಬಾಲ ನಟರಾಗಿ ನಟಿಸಿ ಜನಪ್ರಿಯ ಆಗಿರುವ ನಟರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರು ಇದ್ದಾರೆ. ಅದರಲ್ಲಿ ಮಾಸ್ಟರ್ ಆನಂದ್ ಅವರು ಕೂಡ ಒಬ್ಬರು. ಮಾಸ್ಟರ್ ಆನಂದ್ ಅವರು ಕೂಡ ಬಾಲ್ಯ ವಯಸ್ಸಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿ ತುಂಬಾ ಜನಪ್ರಿಯರಾಗಿದ್ದಾರೆ. ಇದರ ಜೊತೆಗೆ ಇವರು ಸಾಕಷ್ಟು ಕಾರ್ಯಕ್ರಮಗಳನ್ನು ಹೋಸ್ಟ್ ಮತ್ತು ನಿರೂಪಣೆ ಕೂಡ ಮಾಡುತ್ತಾರೆ.

ಮಾಸ್ಟರ್ ಆನಂದ್ ಅವರು ಜನವರಿ 4 1984 ರಂದು ಜನಿಸಿದ್ದಾರೆ. ಇವರ ತಂದೆಯ ಹೆಸರು ವಿ ಹರಿಹರನ್ ಮತ್ತು ತಾಯಿಯ ಹೆಸರು ಬಿ.ಎಸ್ ಲತಾ ಎಂದು. ಇವರಿಗೆ ಅರುಣ್ ಎನ್ನುವ ಸಹೋದರ ಕೂಡ ಇದ್ದಾರೆ. ಇವರು ಕೂಡ ನಟರಾಗಿದ್ದಾರೆ.

ಇನ್ನೂ ಸಿನೆಮಾಗಳನ್ನು ನೋಡಿದರೆ ಇವರು ಗೋಲ್ಮಾಲ್ ಗೋವಿಂದಂ, ಬೆಳ್ಳಿಯಪ್ಪ ಬಂಗಾರಪ್ಪ, ಶಾಂತಿ ಕ್ರಾಂತಿ, ಕಿಂದರಿಜೋಗಿ, ಮುತ್ತಿನಹಾರ, ಕರ್ಪೂರದ ಗೊಂಬೆ, ಫ್ರೆಂಡ್ಸ್, ದೇವರು ವರವನು ಕೊಟ್ರೆ, ಮಣಿ, ಪ್ರೀತಿಗಾಗಿ, ಪ್ರೀತಿಸಲೇಬೇಕು, ಜೇಷ್ಠ, ಮೀರಾ ಮಾಧವ ರಾಘವ, ಸಜನಿ, ಹೊಸವರ್ಷ, ಪ್ರೀತಿ, 5 ಈಡಿಯಟ್ಸ್, ಪ್ಯಾರ್ಗೆ ಆಗ್ಬಿಟ್ಟೈತೆ, ಬುಲೆಟ್ ಬಸ್ಯಾ, ಜಾತ್ರೆ, ಹಗಲುಗನಸು ಇನ್ನೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಮಾಸ್ಟರ್ ಆನಂದ್ ಅವರು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡಿ ತುಂಬಾ ಪ್ರಖ್ಯಾತ ಆಗಿದ್ದಾರೆ. ಇದರ ಜೊತೆಗೆ ಡಾನ್ಸಿಂಗ್ ಸ್ಟಾರ್, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗಳನ್ನು ನಿರೂಪಣೆ ಕೂಡ ಮಾಡುತ್ತಿದ್ದಾರೆ. ಇನ್ನು ಮಾಸ್ಟರ್ ಆನಂದ್ ಅವರು ಯಶಸ್ವಿನಿ ಎನ್ನುವವರನ್ನು 2010 ರಂದು ವಿವಾಹ ಮಾಡಿಕೊಂಡಿದ್ದಾರೆ ಇವರಿಗೆ ಮಗ ಮತ್ತು ಮಗಳು ಇದ್ದಾರೆ…..

Leave A Reply