ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಅಂದರೆ ಇನ್ನೂ ಹೆಸರಿಟ್ಟಿಲ್ಲ ಡಿ 56 ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಇನ್ನೂ ಇವರು ಇದಕ್ಕೂ ಮುನ್ನ ಬಾಲನಟಿಯಾಗಿ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಹೌದು ರಾಧನಾ ರಾಮ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ಮಲ್ಲ ಚಿತ್ರದ ಕರುನಾಡೆ ಕೈಚಾಚಿದೆ ನೋಡೆ ಎನ್ನುವ ಹಾಡಿನಲ್ಲಿ ರವಿಚಂದ್ರನ್ ಅವರ ಜೊತೆಗೆ ರಾಧನಾ ಅವರು ತೆರೆಯನ್ನು ಹಂಚಿಕೊಂಡಿದ್ದಾರೆ. ಈ ವಿಷಯ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಇನ್ನು ರಾಧನಾ ರಾಮ್ ಅವರು ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿರುವುದು ಮಾಲಾಶ್ರೀ ಅವರ ಅಭಿಮಾನಿಗಳಿಗೆ ತುಂಬಾ ಸಂತೋಷವನ್ನು ಕೊಟ್ಟಿದೆ.
ಇನ್ನು ಮಾಲಾಶ್ರೀ ಅವರು ಆಗಸ್ಟ್ 10 1973 ರಂದು ಜನಿಸಿದ್ದಾರೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಕೆಲ ಸಿನಿಮಾಗಳನ್ನು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನೂ ಮಾಲಾಶ್ರೀ ಅವರು ಖ್ಯಾತ ನಿರ್ಮಾಪಕರಾಗಿರುವ ರಾಮು ಅವರನ್ನು ವಿವಾಹ ಮಾಡಿಕೊಂಡಿದ್ದರು. ಆದರೆ ರಾಮು ಅವರು ಕೋವಿಡ್ ಎನ್ನುವ ಮಾರಕ ಕಾಯಿಲೆಯಿಂದ ಕಳೆದ ವರ್ಷ ಸಾವನ್ನಪ್ಪಿದರು.
ಇನ್ನೂ ಮಾಲಾಶ್ರೀ ಅವರಿಗೆ ನಟಿ ಶುಭಾಶ್ರೀ ಅವರು ಸಹೋದರಿ ಆಗಬೇಕು. ಹಾಗೆಯೇ ಸಿನಿಮಾ ವಿಷಯಕ್ಕೆ ಬಂದರೆ ಮಾಲಾಶ್ರೀ ಅವರು 1979 ರಲ್ಲಿ ತಮಿಳಿನಲ್ಲಿ ಇಮಾಯಂ ಎನ್ನುವ ಚಿತ್ರದ ಮೂಲಕ ಬಾಲ ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಹಾಗೆಯೇ 1989 ರಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಜೊತೆಗೆ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಹೀರೋಯಿನ್ ಆಗಿ ತೆರೆಯ ಮೇಲೆ ಕಾಲಿಟ್ಟು ಸ್ಯಾಂಡಲ್ ವುಡ್ ಗೆ ಕೂಡ ಪ್ರವೇಶ ಮಾಡಿದರು.
ಇದಾದ ಮೇಲೆ ಇವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಮಾಲಾಶ್ರೀ ಅವರು ಮೊದಲು ಎಮೋಶನ್ ಸೆಂಟಿಮೆಂಟ್ ಮತ್ತು ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೂ ತದನಂತರ ನಾನು ಕೂಡ ಯಾವ ಹೀರೋಗೂ ಕಡಿಮೆಯಿಲ್ಲ ಎನ್ನುವ ರೀತಿ ಮಾಸ್ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ……