Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಾಲಾಶ್ರೀ ಮಗಳು ಅಮ್ಮ ಮತ್ತು ಮಗನೊಂದಿಗೆ ದುಬೈ ಪ್ರವಾಸದಲ್ಲಿ..!! ಹೀಗಿಲ್ಲ ಜಾಲಿ ಮಾಡುತ್ತಿದ್ದಾರೆ ನೋಡಿ!!

0

ಕನಸಿನ ರಾಣಿ ನಟಿ ಮಾಲಾಶ್ರೀ ಅವರು ತಮ್ಮ ಮಕ್ಕಳು ಮತ್ತು ಅವರ ತಾಯಿಯ ಜೊತೆಗೆ ದುಬೈ ಪ್ರವಾಸದಲ್ಲಿದ್ದಾರೆ. ಮಾಲಾಶ್ರೀ ಅವರ ಮಕ್ಕಳಾದ ಅನನ್ಯ ಮತ್ತು ಆರ್ಯನ್ ಹಾಗೂ ಅವರ ತಾಯಿಯ ಜೊತೆಗೆ ಇರುವ ಮಾಲಾಶ್ರೀ ಅವರು ದುಬೈನಲ್ಲಿ ತೆಗೆಸಿಕೊಂಡ ಕೆಲ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಕೆಲ ಫೋಟೋಗಳನ್ನು ಇಲ್ಲಿ ನೋಡಬಹುದು.

ಇನ್ನೂ ಮಾಲಾಶ್ರೀ ಅವರ ಪತಿ ರಾಮು ಅವರು ಕೂಡ 2021 ರಲ್ಲಿ ಕೊರೋನಾದಿಂದ ಮರಣ ಹೊಂದಿದರು. ಇದರಿಂದ ಈಗೀಗ ಅಷ್ಟೆ ಮಾಲಾಶ್ರೀ ಮತ್ತು ತಮ್ಮ ಮಕ್ಕಳು ಹೊರಗೆ ಬರುತ್ತಿದ್ದಾರೆ. ಈ ಹಿಂದೆ ಮಾಲಾಶ್ರೀಯವರು ತಮ್ಮ ಮಕ್ಕಳು ಮತ್ತು ತಾಯಿಯ ಜೊತೆಗೆ ತಿರುಪತಿಯ ತಿಮ್ಮಪ್ಪನ ದರ್ಶನವನ್ನು ಪಡೆದಿದ್ದರು. ಈಗ ಇವರು ದುಬೈ ಪ್ರವಾಸದಲ್ಲಿ ಇದ್ದಾರೆ.

ಇನ್ನೂ ಮಾಲಾಶ್ರೀ ಅವರು ಆಗಸ್ಟ್ 10 1973 ರಂದು ಜನಿಸಿದ್ದಾರೆ. ಇವರಿಗೆ ನಟಿ ಶುಭಾಶ್ರೀ ಅವರು ಸಹೋದರಿ ಆಗಬೇಕು. ಮಾಲಾಶ್ರೀ ಅವರು ಕನ್ನಡ ಅಲ್ಲದೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಮಾಲಾಶ್ರೀ ಅವರು ಬಾಲ ನಟಿಯಾಗಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇವರು ಬಾಲನಟಿಯಾಗಿ ಸುಮಾರು 35 ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ 26 ಸಿನಿಮಾಗಳಲ್ಲಿ ಇವರು ಹುಡುಗನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.

ಹೌದು 1979 ರಂದು ಇಮಾಯಂ ಎನ್ನುವ ತಮಿಳು ಚಿತ್ರದ ಮೂಲಕ ಇವರು ಬಾಲನಟಿಯಾಗಿ ನಟಿಸಿ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಇನ್ನೂ ನಮ್ಮ ಕನ್ನಡದಲ್ಲಿ 1989 ರಲ್ಲಿ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಇದರಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ನಾಯಕ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದಾದ ಮೇಲೆ ಮಾಲಾಶ್ರೀ ಅವರು ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇವರು 2017 ರಲ್ಲಿ ಬಿಡುಗಡೆಯಾದ ಉಪ್ಪು ಹುಳಿ ಖಾರ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದಾರೆ. ಇದಾದ ಮೇಲೆ ಇವರ ಯಾವ ಸಿನಿಮಾಗಳೂ ಕೂಡ ಇನ್ನೂ ಬಿಡುಗಡೆಯಾಗಿಲ್ಲ. ಹಾಗೆಯೇ ಮಾಲಾಶ್ರೀ ಅವರ ಮಕ್ಕಳ ಹೆಸರು ಅನನ್ಯ ಮತ್ತು ಆರ್ಯನ್ ಎಂದು…..

Leave A Reply