Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಹೇಶ್ ಬಾಬು ಅವರನ್ನು ಮದುವೆ ಆದ ನಂತರ ಸಿನಿಮಾ‌ ಕೆರಿಯರನ್ನೇ ತ್ಯಾಗ ಮಾಡಿದ ನಟಿ ನಮ್ರತಾ ಶಿರೋಡ್ಕರ್! ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ?!

0

ಸಿನಿಮಾ ಜಗತ್ತಿನಲ್ಲಿ ಅನೇಕ‌ ಸೆಲೆಬ್ರಿಟಿಗಳು ಒಬ್ಬರನೊಬ್ಬರು‌ ಪ್ರೀತಿಸಿ ಮದುವೆ ಆಗಿದ್ದಾರೆ. ಅಂತಹ ಉದಾಹರಣೆಗಳು ಅನೇಕ ಇವೆ. ಇನ್ನು ಹೀಗೆ ಮದುವೆ ಆದ ಸೆಲೆಬ್ರಿಟಿಗಳಲ್ಲಿ ಕೆಲವರು ಮತ್ತೆ ಇಂಡಸ್ಟ್ರಿ ಯಲ್ಲಿ ನಟನೆ ಮುಂದುವರಿಸಿ ಕೊಂಡು ಹೋಗಿದ್ದಾರೆ. ಹೆಚ್ಚಿನವರು ಸಿನಿಮಾ ರಂಗಕ್ಕೆ ‌ಸಂಬಂಧ ಇಲ್ಲದವರನ್ನು ಮದುವೆ ಆಗಿ ನಂತರ ತಾವೂ ಸಿನಿಮಾ‌ ಕೆರಿಯರ್ ಬಿಟ್ಟಿದ್ದಾರೆ. ಆದರೆ ಸಿನಿಮಾ ಇಂಡಸ್ಟ್ರಿ ಯಲ್ಲಿದ್ದವರನ್ನೇ ಮದುವೆ ಆಗಿ ನಟನೆ‌ ಬಿಟ್ಟವರು ಬಹಳ‌‌ ಕಡಿಮೆ.‌

ಆದರೆ ಬಾಲಿವುಡ್ ಕ್ಷೇತ್ರದಲ್ಲಿ‌ ಮಿಂಚುತ್ತಿದ್ದ, ಸಾಕಷ್ಟು ಅವಕಾಶಗಳು ಇದ್ದರೂ ನಟಿ ನಮ್ರತಾ ಶಿರೋಡ್ಕರ್ ಮಾತ್ರ ಮದುವೆ ಆದ ಕೂಡಲೇ ತಮ್ಮ‌ ಸಿನಿಮಾ‌ ಕೆರಿಯರ್‌ಗೆ ಗುಡ್ ಬೈ ಹೇಳಿದ್ದರು. ಹೌದು, ನಮ್ರತಾ ಶಿರೋಡ್ಕರ್ ಅವರು ತೆಲುಗು ಚಿತ್ರರಂಗದಲ್ಲಿ ಪ್ರಿನ್ಸ್ ಎಂದೇ ಕರೆಯಿಸಿಕೊಳ್ಳುವ ಮಹೇಶ್ ಬಾಬು ಅವರನ್ನು ಮದುವೆ ಆಗಿದ್ದರು.

ಮಹೇಶ್ ಬಾಬು ಅವರು ಟಾಲಿವುಡ್ ನ ಸೂಪರ್ ಸ್ಟಾರ್ ನಾಯಕನಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿ ಕೂಡ ಗುರುತಿಸಿಕೊಂಡವರು. 1999 ರಲ್ಲಿ ತೆರೆಕಂಡ `ರಾಜಕುಮಾರಡು’ ಚಿತ್ರದಿಂದ ನಾಯಕನಾಗಿ ಸಿನಿ ಜರ್ನಿ ಆರಂಭಿಸಿದರು. ಕೆ ರಾಘವೇಂದ್ರ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೀತಿ ಜಿಂಟಾ ನಾಯಕಿಯಾಗಿ ನಟಿಸಿದ್ದರು.

ಆ ನಂತರ ಅವರು ‘ಮುರಾರಿ’, ‘ಬಾಬಿ’ , ‘ಒಕ್ಕಾಡು’, ‘ಅರ್ಜುನ್’, ‘ಪೊಕಿರಿ’ , ‘ಅಗಾಡು’, ‘ ಬ್ರಹ್ಮೋತ್ಸವಂ ‘, ಸ್ಪೈಡರ್, ಭಾರತ್ ಆನೆ ನೇನು, ಮಹರ್ಷಿ, ಸರಿಲೇರು ನಿಕೆವೇರು ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ನಮ್ರತಾ ಶಿರೋಡ್ಕರ್ ಅವರು1993ರಲ್ಲಿ ಮಿಸ್‌ ಇಂಡಿಯಾ ಕೀರಿಟ ಗೆದ್ದಿದ್ದರು.‌ ಹಲವು ವರ್ಷಗಳ ಕಾಲ ಮಾಡೆಲಿಂಗ್‌ನ ನಂತರ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದರು. ನಮ್ರತಾ ಸಲ್ಮಾನ್‌ ಖಾನ್‌ ಸಿನಿಮಾ ಜಬ್‌ ಪ್ಯಾರ್‌ ಕಿಸಿಸೇ ಹೋತಾ ಹೈ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟರು.

 

ನಮ್ರತಾ ಅವರು, ಮೇರೆ ದೋ ಅನ್ಮೋಲ್‌ ರತನ್, ಹೀರೋ ಹಿಂದೂಸ್ತಾನಿ, ಕಚ್ಚೆ ಧಾಗೆ, ಪುಕರ್, ವಾಸ್ತವ್ ಅಲ್ಬೆಲಾ, ತೇರಾ ಮೇರಾ ಸಾಥ್ ರಹೇ, ಮೆಸ್ಸಿಹ್, ಪ್ರನ್ ಜಾನೆ ಪರ್ ಶಾನ್ ಜಾಯೆ, ತಹಜೀಬ್, ಚರಸ್, ಇನ್ಸಾಫ್ ಮತ್ತು ಎಲ್ಒಸಿ ಕಾರ್ಗಿಲ್’ ನಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಇವರು ವಂಶಿ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಾಯಕಿಯಾಗಿ ನಟಿಸಿದ್ದರು.‌ 2000ರಲ್ಲಿ ವಂಶಿ ಸಿನಿಮಾದ ಶೂಟಿಂಗ್‌ ಸಮಯದಲ್ಲಿ ಮಹೇಶ್‌ ಬಾಬು ಮತ್ತು ನಮ್ರತಾರ ಮೊದಲ ಭೇಟಿ ಆಯಿತು. ಮೊದಲ ಬಾರಿಗೆ ಪರಸ್ಪರ ಇಷ್ಷಪಟ್ಟ ಈ ಜೋಡಿ ಸಿನಿಮಾ ಶೂಟಿಂಗ್‌ ಮುಗಿಯುವ ವೇಳೆಗೆ ಪ್ರೀತಿಸಲು ತೊಡಗಿದ್ದರು. ಆ ನಂತರ 2005 ರಲ್ಲಿ ಇಬ್ಬರೂ ಮದುವೆ ಆದರು.‌

ಇನ್ನು ನಮ್ರತಾ ಅವರು ಮಹೇಶ್ ಬಾಬುಗಿಂತ ಮೂರು ವರ್ಷ ದೊಡ್ಡವರು. ಆದರೆ ಇದು ಅವರ ಪ್ರೀತಿಗೆ ಯಾವುದೇ ಅಡ್ಡಿ ಮಾಡಿರಲಿಲ್ಲ.‌ ಆದರೆ ಮದುವೆ ನಂತರದಲ್ಲಿ ಸಿನಿಮಾ ನಟನೆಯನ್ನೇ ನಮ್ರತಾ ತ್ಯಾಗ ಮಾಡಿದ್ದಾರೆ. ‌ಇದಕ್ಕೆ ಕಾರಣವೂ ಇದೆ. ಇಬ್ಬರೂ ಸಿನಿಮಾ ಇಂಡಸ್ಟ್ರಿ ಯಲ್ಲಿ ಇದ್ದರೆ ಕುಟುಂಬ ನಿರ್ವಹಣೆ ಕಷ್ಟ, ಜೊತೆಗೆ ಏನಾದರೂ ಭಿನ್ನಾಭಿಪ್ರಾಯ ಬರಬಹುದು. ಮಹೇಶ್ ಬಾಬು ಅವರು ಸಿನಿಮಾ ರಂಗದಲ್ಲಿ ಎತ್ತರದ ಸ್ಥಾನದಲ್ಲಿದ್ದಾರೆ.‌

ಅವರು ಹಾಗೆಯೇ ಮುಂದುವರಿಯಲಿ, ಅವರಿಗೆ ಬೇಕಾದ ಸಹಕಾರ ನಾನು ಕೊಡುತ್ತೇನೆ ಎಂದು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಈ ಜೋಡಿಗೆ ಗೌತಮ್ ಎಂಬ ಪುತ್ರ, ಸಿತಾರ ಎಂಬ ಪುತ್ರಿ ಇದ್ದಾರೆ.‌ ಒಟ್ಟಿನಲ್ಲಿ ಯಶಸ್ವೀ ಪರುಷನ‌ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಅನ್ನುವುದಕ್ಕೆ ಇವರೇ ಸಾಕ್ಷಿ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply