ನೀವು ಮಲಯಾಳಂ ಫಿಲಂ ಸಿನಿಮಾ ಅಭಿಮಾನಿಗಳಾಗಿದ್ದರೆ ನೀವು ವಿಮರ್ಶಕರು ಆಗಿರುತ್ತೀರಾ. ಯಾಕಂದ್ರೆ ಇತರ ಎಲ್ಲಾ ಸಿನಿಮಾಗಳಿಗಿಂತ ಬಹಳ ವಿಭಿನ್ನವಾಗಿ ಮಲಯಾಳಂ ಸಿನಿಮಾಗಳು ಮೂಡಿಬರುತ್ತವೆ. ಇನ್ನು ಮಲಯಾಳಂನಲ್ಲಿ ಹೀರೋ ಆಗಿ ಈಗಲೂ ಕಾಣಿಸಿಕೊಳ್ಳುತ್ತಿರುವ ಕೆಲವು ನಟರು ಹಲವು ದಶಕಗಳಿಂದ ಮಲಯಾಳಂ ಸಿನಿಮಾ ರಂಗವನ್ನು ಆಳಿಕೊಂಡು ಬರುತ್ತಿದ್ದಾರೆ.
ಮಮ್ಮುಟಿ, ಮೋಹನ್ ಲಾಲ್ ಇತ್ತೀಚಿನ ಪೃಥ್ವಿರಾಜ್, ದುಲ್ಕರ್ ಸಲ್ಮಾನ್ ಎಲ್ಲರೂ ಮಲಯಾಳಂ ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇನ್ನು ಮಲಯಾಳಂ ಸಿನಿಮಾ ಅಂದ್ರೆ ಜನರಿಗೆ ನೆನಪಿಗೆ ಬರುವುದೇ ಕ್ಲಾಸಿಕ್ ಸಿನಿಮಾಗಳು. ಇಲ್ಲಿ ಇತರ ಭಾಷೆಗಳ ಸಿನಿಮಾಗಳಂತೆ ಧಮ್ ಧೂಮ್ ಅಂತ ಸಿಕ್ಕಾಪಟ್ಟೆ ಬಜೆಟ್ ನಲ್ಲಿ ನಿರ್ಮಾಣವಾಗುವ ಸಿನಿಮಾಗಳು ಇರೋದಿಲ್ಲ ಅದರ ಬದಲಾಗಿ ಮಲಯಾಳಂ ಸಿನಿಮಾಗಳಲ್ಲಿ ಕಥೆಯೇ ಸಿನಿಮಾದ ಜೀವಾಳ.
ಇನ್ನು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ತಾರೆಯರು ಕೂಡ ಬಹಳ ಡಿಫರೆಂಟ್. ಇತರ ಸಿನಿಮಾ ರಂಗದಲ್ಲಿ ಮಹಿಳಾ ಕಲಾವಿದರು ಬಂದು ಹೋಗುತ್ತಾರೆ ಆದರೆ ಮಲಯಾಳಂನಲ್ಲಿ ಹಾಗಲ್ಲ ಒಮ್ಮೆ ಕ್ಲಿಕ್ ಆದ್ರೆ ಅಲ್ಲಿಯೇ ದಶಕಗಳ ವರೆಗೆ ನೆಲೆಸುತ್ತಾರೆ. ಮಲಯಾಳಂ ಸಿನಿಪ್ರಿಯರು ಅಷ್ಟೇ ಇಂತಹ ನಟಿಯರಿಗೆ ಹೆಚ್ಚು ಹೊತ್ತು ನೀಡುತ್ತಾರೆ. ಅದರಲ್ಲೂ ಕೆಲವು ನಟಿಯರು ಇತರ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಮಲಯಾಳಂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಜಾನಕಿ ಸುಧೀರ್ ಅವರ ಹೆಸರನ್ನು ನೀವು ಕೇಳಿರಬಹುದು. ಇವರು ಹೆಚ್ಚು ಸಿನಿಮಾಗಳಲ್ಲೇನೋ ಅಭಿನಯಿಸಲಿಲ್ಲ ಆದರೆ ಅವರು ಮಾಡಿಸಿಕೊಳ್ಳುವ ಫೋಟೋ ಶೂಟ್ ಆಗಾಗ ಟ್ರೋಲ್ ಆಗುತ್ತೆ.
ಕೇರಳಿಗರು ಆಭರಣ ಪ್ರಿಯರು ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಹೆಣ್ಣು ಮಕ್ಕಳು ತರಾವರಿ ಒಡವೆಗಳನ್ನು ಆಧರಿಸುತ್ತಾರೆ. ಇದೀಗ ನಟಿ ಜಾನಕಿ ಸುಧೀರ್ ಬಟ್ಟೆಗಳನ್ನು ಧರಿಸದೇ ಕೇವಲ ಆಭರಣಗಳನ್ನು ಧರಿಸಿ ಫೋಟೋ ಶೂಟ್ ಮಾಡಿದ್ದಾರೆ. ಇದು ಕೆಲವರ ಕೆಂಗಣ್ಣಿಗೆ ಗುರಿಯಾದರೂ ಇನ್ನು ಕೆಲವರು ವಾವ್ ಅಂತ ಉದ್ಘಾರವೆತ್ತಿದ್ದಾರೆ. ಜಾನಕಿ ಸುಧೀರ್ ಮಲಯಾಳಂನಲ್ಲಿ ಮಾಡಿರುವುದು ಕೈಬೆರಳ ಎಣಿಕೆಯಷ್ಟು ಸಿನಿಮ ಮಾತ್ರ ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಸಕ್ರಿಯರಾಗಿ ಇರುವ ಜಾನಕಿ ಸುಧೀರ್ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಇನ್ನು ಜಾನಕಿ ಸುಧೀರ್ ಅವರು ಮಲಯಾಳಂ ಬಿಗ್ ಬಾಸ್ ಸೀಸನ್ 4ರ ಸ್ಪರ್ದಿಯಾಗಿಯೂ ಕೂಡ ಕಾಣಿಸಿಕೊಂಡಿದ್ದರು. ಇದರಲ್ಲಿ ಸ್ಪರ್ದಿಯಾದ ನಂತರವೇ ಜಾನಕಿ ಸುಧೀರ್ ಅವರನ್ನು ಜನರು ಹೆಚ್ಚಾಗಿ ಗುರುತಿಸಿದ್ದು.
ಇನ್ನು 2017ರಲ್ಲಿ ಜಾನಕಿ ಸುಧೀರ್ ಮಲಯಾಳಂ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಂಕ್ಸ್, ಹಾಲಿವುಂಟು ಸಿನಿಮಾಗಳಲ್ಲಿ ಜಾನಕಿ ಸುಧೀರ್ ನಟಿಸಿದ್ದಾರೆ ಆದರೆ ಈ ಸಿನಿಮಾ ಯಾವುದು ಅಷ್ಟಾಗಿ ಕ್ಲಿಕ್ ಆಗಿಲ್ಲ. ಆದರೆ ಜಾನಕಿಯ ಸುಧೀರ್ ಇನ್ಸ್ಟಾಗ್ರಾಮಲ್ಲಿ ಸಾಕಷ್ಟು ಇರುತ್ತಾರೆ ಹಾಗಾಗಿ ಅವರ ಫ್ಯಾನ್ಗಳು ಕೂಡ ತುಂಬಾನೇ ಇದ್ದಾರೆ.
ಜಾನಕಿ ಸುಧೀರ್ ಇತ್ತೀಚೆಗೆ ಒಂದು ಫೋಟೋ ಶೂಟ್ ಮಾಡಿಸಿದ್ರು ವಿವಿಧ ಬಂಗಿಯಲ್ಲಿ ಫೋರ್ಸ್ ಕೊಟ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಈ ಫೋಟೋಗಳ ವಿಶೇಷ ಅಂದ್ರೆ ಇದರಲ್ಲಿ ಜಾನಕಿ ಸುಧೀರ್ ಕೆಳಭಾಗದಲ್ಲಿ ಒಂದು ಲುಂಗಿ ಸುತ್ತಿದ್ದಾರೆ. ಆದರೆ ಟಾಪ್ ಲೆಸ್ ಫೋಟೋಶೂಟ್ ಮಾಡಿಸಿದ್ದಾರೆ ಅಂದರೆ ಮೇಲ್ಬಾಗದಲ್ಲಿ ಯಾವುದೇ ಬಟ್ಟೆಯನ್ನು ತೊಡದೆ ಕೇವಲ ಆಭರಣದಲ್ಲಿ ಮೈಮುಚ್ಚಿಕೊಂಡಿದ್ದಾರೆ. ಈ ಫೋಟೋಶೂಟ್ ನೋಡಿ ಹಲವರು ದಂಗಾಗಿದ್ದಾರೆ. ನೀವು ಈ ಫೋಟೋಗಳನ್ನು ಈ ಲೇಖನದಲ್ಲಿ ನೋಡಬಹುದು.