Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಯೂರಿ ಮಗನ ತೊದಲು ಮಾತು ಎಷ್ಟು ಮುದ್ದಾಗಿದೆ ನೋಡಿ!! ವೈರಲ್ ಆಯಿತು ನಟಿಯ ಮಗನ ಕ್ಯೂಟ್ ವಿಡಿಯೋ!!

0

ಕನ್ನಡದ ಖ್ಯಾತ ನಟಿ ಮಯೂರಿ ಕ್ಯಾತರಿ ಅವರ ಮಗನ ಹೆಸರು ಆರವ್. ಮಯೂರಿ ಅವರ ಮಗ ಕಳೆದ ವರ್ಷ ಮಾರ್ಚ್ 16 2021 ರಂದು ಜನಿಸಿದ್ದಾನೆ. ಇನ್ನೂ ಮಯೂರಿ ಅವರು ತಮ್ಮ ಪತಿ ಮತ್ತು ಮಗನ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋಗಳು ಮತ್ತು ವೀಡಿಯೋಗಳನ್ನು ಹಾಕುತ್ತಾನೆ ಇರುತ್ತಾರೆ. ಇವರು ಸಾಮಾಜಿಕ ಜಾಲತಾಣದಲ್ಲಿ ತುಂಬ ಸಕ್ರಿಯರಾಗಿರುತ್ತಾರೆ ಎಂದು ಹೇಳಬಹುದು.

ಇದರ ಹಿಂದೆ ಕೂಡ ಮಯೂರಿ ಅವರು ತಮ್ಮ ಪ್ರೆಗ್ನೆನ್ಸಿಯ ಫೋಟೋಶೂಟ್ ಅನ್ನು ಕೂಡ ತುಂಬ ವಿಭಿನ್ನವಾಗಿ ಮಾಡಿಸಿ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಈಗ ಮಯೂರಿ ಅವರು ತಮ್ಮ ಮಗನ ಮೊದಲ ತೊದಲು ಮಾತನಾಡುವುದನ್ನು ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ. ಇದರ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು.

ಇನ್ನು ಮಯೂರಿ ಕ್ಯಾತರಿ ಅವರು ಜುಲೈ 11 1992 ರಂದು ಧಾರವಾಡದಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಪ್ರಕಾಶ್ ಕ್ಯಾತರಿ ಮತ್ತು ತಾಯಿಯ ಹೆಸರು ಗೀತಾ ಕ್ಯಾತರಿ. ಇವರು ಮೊದಲು ಕಿರುತೆರೆಗೆ ಕಾಲಿಟ್ಟು ನಂತರ ಸಿನಿಮಾ ರಂಗದಲ್ಲಿ ತಮ್ಮ ಪ್ರಯಾಣವನ್ನು ಶುರು ಮಾಡಿದರು. ಹೌದು ಇವರು 2015 ರಲ್ಲಿ ಪ್ರಸಾರವಾಗಿದ್ದ ಅಶ್ವಿನಿ ನಕ್ಷತ್ರ ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ಅಶ್ವಿನಿ ಪಾತ್ರದಲ್ಲಿ ನಟಿಸಿ ಸಖತ್ ಫೇಮಸ್ ಆದರು.

 

ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಇದರ ಜನಪ್ರಿಯತೆಯಿಂದ ಇವರಿಗೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ದೊರಕಿದವು. ಮೊದಲು ಇವರು 2015 ರಲ್ಲಿ ಅಜಯ್ ರಾವ್ ಅವರ ಜೊತೆಗೆ ಕೃಷ್ಣ ಲೀಲಾ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿದರು.

ತದನಂತರ ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2, ರ್ಯಾಂಬೊ 2, ಜಾನಿ ಜಾನಿ ಎಸ್ ಪಪ್ಪಾ, 8 ಎಂ.ಎಂ ಬುಲೆಟ್, ರುಸ್ತುಂ, ನನ್ನ ಪ್ರಕಾರ, ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಂ, ಪೊಗರು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಮಯೂರಿ ಅವರು ಜೂನ್ 12 2020 ರಂದು ಬೆಂಗಳೂರಿನ ಶ್ರೀ ತಿರುಮಲ ಗಿರಿ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಅರುಣ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ……

Leave A Reply