ಕನ್ನಡದ ಸ್ಟಾರ್ ನಟಿಯರು ಕೆಲವರು ಮದುವೆ ಮಾಡಿಕೊಂಡು ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಆ ನಟಿಯರು ಯಾರು ಎಂದು ಇಲ್ಲಿ ನೋಡೋಣ ಬನ್ನಿ..
ನಟಿ ಮಾಧವಿ ಅವರ ಮೊದಲಿನ ಹೆಸರು ಕನಕಾ ವಿಜಯಲಕ್ಷ್ಮಿ ಎಂದು. ಇವರು ಸೆಪ್ಟೆಂಬರ್ 14 1962 ರಂದು ಆಂಧ್ರಪ್ರದೇಶದ ಏಲೂರಿನಲ್ಲಿ ಜನಿಸಿದ್ದಾರೆ. ಇವರು ತೆಲುಗು ಮಲಯಾಳಂ ಹಿಂದಿ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸುಮಾರು 300 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಮಾಧವಿ ಅವರು 1996 ರಲ್ಲಿ ಯುಎಸ್ ಮೂಲದ ರಾಲ್ಫ್ ಶರ್ಮಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಇವ್ಲಿನ್ ಶರ್ಮಾ, ಪ್ರಿಸಿಲ್ಲಾ ಶರ್ಮಾ ಮತ್ತು ಟಿಫನಿ ಶರ್ಮಾ ಎನ್ನುವ 3 ಜನ ಹೆಣ್ಣು ಮಕ್ಕಳಿದ್ದಾರೆ. ಮಾಧವಿ ಅವರು ಪ್ರಸ್ತುತ ತಮ್ಮ ಪತಿ ಮತ್ತು ಮಕ್ಕಳ ಜೊತೆಗೆ ಯುಎಸ್ ನಲ್ಲಿ ವಾಸಿಸುತ್ತಿದ್ದಾರೆ.
ನಟಿ ಸಿಂಧು ಮೆನನ್ ಅವರು ಜೂನ್ 17 1985 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕನ್ನಡ ತೆಲುಗು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇವರು 2010 ರಂದು ಡಾಮಿನಿಕ್ ಪ್ರಭು ಅವರನ್ನು ವಿವಾಹವಾದರು. ಇನ್ನು ಇವರಿಗೆ ಶ್ವೇತ್ಲಾನಾ ಮೆನನ್ ಎನ್ನುವ ಮಗಳು ಕೂಡ ಇದ್ದಾರೆ. ಪ್ರಸ್ತುತ ಸಿಂಧು ಮೆನನ್ ಅವರು ತಮ್ಮ ಪತಿ ಮತ್ತು ಮಗಳ ಜೊತೆಗೆ ಲಂಡನ್ ನಲ್ಲಿ ನೆಲೆಸಿದ್ದಾರೆ.
ನಟಿ ರಾಜೇಶ್ವರಿ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮುಖಾಂತರ ತುಂಬಾನೇ ಜನಪ್ರಿಯ ಆದರು ಎಂದು ಹೇಳಬಹುದು. ಇವರು ಚಂದ್ರಿಕಾ ಎನ್ನುವ ಪಾತ್ರದಲ್ಲಿ ನಟಿಸಿ ಜನರ ಮನಸ್ಸನ್ನು ದೋಚಿಕೊಂಡಿದ್ದರು. ಇನ್ನೂ ರಾಜೇಶ್ವರಿ ಅವರು ಪಾರ್ಥಸಾರಥಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಬ್ಬಳು ಮಗಳು ಸಹ ಇದ್ದಾರೆ. ಪ್ರಸ್ತುತ ರಾಜೇಶ್ವರಿಯವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.
ನಟಿ ಮಾನ್ಯ ನಾಯ್ಡು ಅವರು ಅಕ್ಟೋಬರ್ 17 1982 ರಂದು ಜನಿಸಿದ್ದಾರೆ. ಇವರು ತೆಲುಗು ಚಿತ್ರಗಳ ಜೊತೆಗೆ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಅದರಲ್ಲೂ ಶಾಸ್ತ್ರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಖತ್ ಫೇಮಸ್ ಆದರು ಎಂದು ಹೇಳಬಹುದು ಇನ್ನೂ ಮಾನ್ಯ ಅವರು ವಿಕಾಸ್ ಬಾಜಿಪೈ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಮಿಶ್ಕಾ ಎನ್ನುವ ಮಗಳು ಇದ್ದಾರೆ. ಪ್ರಸ್ತುತ ಮಾನ್ಯ ನಾಯ್ಡು ಅವರು ತಮ್ಮ ಕುಟುಂಬದವರ ಜೊತೆಗೆ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ.
ನಟಿ ರಂಬಾ ಅವರು ಜೂನ್ 5 1976 ರಂದು ವಿಜಯವಾಡದಲ್ಲಿ ಜನಿಸಿದ್ದಾರೆ. ಇವರು ತೆಲುಗು ತಮಿಳು ಮಲಯಾಳಂ ಕನ್ನಡ ಮತ್ತು ಹಿಂದಿ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ರಂಭಾ ಅವರು 2010 ರಲ್ಲಿ ಇಂದ್ರನ್ ಪದ್ಮನಾಥನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ 3 ಜನ ಮಕ್ಕಳು ಇನ್ನೂ ರಂಭಾ ಅವರು ತಮ್ಮ ಕುಟುಂಬದವರ ಜೊತೆಗೆ ಟೊರೊಂಟೊದಲ್ಲಿ ನೆಲೆಸಿದ್ದಾರೆ…..