ಮದುವೆಯಲ್ಲಿ ಡ್ಯಾನ್ಸ್ ಮಾಡಿದ ಕನ್ನಡ ಕೋಗಿಲೆ ಅಖಿಲಾ ಪಜಿಮಣ್ಣು, ಕೋಟಿಗಟ್ಟಲೆ ವೀಕ್ಷಣೆ ಪಡೆದ ವೈರಲ್ ವಿಡಿಯೋ ಇಲ್ಲಿದೆ ನೋಡಿ !!
ಇತ್ತೀಚೆಗಷ್ಟೇ ಹೊಸದಾಗಿ ವಿವಾಹ ಮಾಡಿಕೊಂಡಿರುವ ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಶರ್ಮಾ ಅವರಿಬ್ಬರು ತಮ್ಮ ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್ ಅನ್ನು ಮಾಡಿದ್ದಾರೆ. ಅದರ ವೀಡಿಯೋವನ್ನು ನೀವು ಇಲ್ಲಿ ನೋಡಬಹುದು…
ಕನ್ನಡದ ಜನಪ್ರಿಯ ಶೋ ಆಗಿದ್ದ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು ಅವರು ಧನಂಜಯ್ ಶರ್ಮಾ ಎಂಬುವವರ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಇವರಿಬ್ಬರು 2021 ವರ್ಷದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ತದನಂತರ ಒಂದು ವರ್ಷ ಆದ ಮೇಲೆ ಈಗ ತಮ್ಮ ಮದುವೆಯನ್ನು ತುಂಬಾ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ.
ಇನ್ನು ಅಖಿಲಾ ಅವರು 15 ಮೇ 1999 ರಂದು ಪುತ್ತೂರಿನಲ್ಲಿ ಜನಿಸಿದ್ದಾರೆ. ಇವರು ತುಳು ಭಾಷೆಯ ಕುಟುಂಬಕ್ಕೆ ಸೇರಿದ್ದಾರೆ. ಅಖಿಲಾ ಅವರು 2019 ರಲ್ಲಿ ಕನ್ನಡ ಕೋಗಿಲೆ ಶೋನಲ್ಲಿ ಮೊದಲನೇ ರನ್ನರ್ ಅಪ್ ಆಗಿದ್ದರು ಇದಕ್ಕೂ ಮುನ್ನ 2011 ರಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 8 ರಲ್ಲಿ ಗೆದ್ದಿದ್ದಾರೆ. ಇವರನ್ನು ಎಲ್ಲರೂ ಬಿಸ್ಕೆಟ್ ರಾಣಿ ಎಂದೇ ಹೆಚ್ಚಾಗಿ ಕರೆಯುತ್ತಾರೆ.
ಇನ್ನು ಇವರ ತಂದೆಯ ಹೆಸರು ಉದಯಕುಮಾರ್ ಮತ್ತು ತಾಯಿಯ ಹೆಸರು ಉಷಾ ಪಜಿಮಣ್ಣು ಎಂದು. ಇವರಿಗೆ ಸ್ವಂತ ತಮ್ಮ ಕೂಡ ಇದ್ದಾರೆ. ಇನ್ನು ಅಖಿಲಾ ಅವರು ಮಂಗಳೂರಿನಲ್ಲಿರುವ ಸಹ್ಯಾದ್ರಿ ಕಾಲೇಜ್ ಆಫ್.
ಇಂಜಿನಿಯರಿಂಗ್ & ಮ್ಯಾನೇಜ್ ಮೆಂಟ್ ನಲ್ಲಿ ತಮ್ಮ ಎಂಬಿಎ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಅಖಿಲಾ ಅವರು ತುಂಬ ಸೊಗಸಾಗಿ ಹಾಡುಗಳನ್ನು ಹಾಡುತ್ತಾರೆ.
ತಮ್ಮದೇ ಆದ ಕವರ್ ಸಾಂಗ್ ಗಳನ್ನು ಯೂಟ್ಯೂಬ್ ಚಾನಲ್ ನಲ್ಲಿ ಕೂಡ ಹಾಕಿದ್ದಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ಇವರಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ.
ನಿಶ್ಚಿತಾರ್ಥ ಮಾಡಿಕೊಂಡ ದಿನ ಅಖಿಲಾ ಅವರು ಧನಂಜಯ ಶರ್ಮಾ ಜೊತೆ ಇರುವ ವಿಡಿಯೋವೊಂದನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿ ಎಂಗೇಜ್ ಆಗಿದ್ದೇನೆ ಎಂದು ಬರೆದುಕೊಂಡಿದ್ದರು.
ಇನ್ನೂ ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಾಕಷ್ಟು ಅಭಿಮಾನಿಗಳನ್ನು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಖಿಲಾ ಪಜಿಮಣ್ಣು ಮತ್ತು ಧನಂಜಯ ಶರ್ಮಾ ಅವರ ಮದುವೆಯ ಕೆಲ ಸುಂದರ ದೃಶ್ಯಗಳನ್ನು ಇಲ್ಲಿ ನೋಡಬಹುದು…..