ವಿಕೆಂಡ್ ವಿತ್ ರಮೇಶ್ ಕನ್ನಡ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ದೂರದರ್ಶನ ಕಾರ್ಯಕ್ರಮವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಾರ್ಯಕ್ರಮವು ಕ್ರೀಡೆ, ಮನರಂಜನೆ, ರಾಜಕೀಯ ಮತ್ತು ವ್ಯಾಪಾರದಂತಹ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂದರ್ಶನಗಳನ್ನು ಒಳಗೊಂಡಿದೆ.
ವೀಕೆಂಡ್ ವಿತ್ ರಮೇಶ್‌ನ ಪ್ರತಿಯೊಂದು ಸಂಚಿಕೆಯು ಒಂದು ನಿರ್ದಿಷ್ಟ ವ್ಯಕ್ತಿತ್ವಕ್ಕೆ ಮೀಸಲಾಗಿರುತ್ತದೆ ಮತ್ತು ರಮೇಶ್ ಅವರ ಜೀವನದ ಕಥೆಯನ್ನು ಪರಿಶೀಲಿಸುತ್ತಾರೆ, ಅವರ ಹೋರಾಟಗಳು, ಯಶಸ್ಸುಗಳು ಮತ್ತು ಸಾಧನೆಗಳನ್ನು ಎತ್ತಿ ತೋರಿಸುತ್ತಾರೆ. ಈ ಕಾರ್ಯಕ್ರಮವು ಅದರ ಸ್ಪೂರ್ತಿದಾಯಕ ವಿಷಯ ಮತ್ತು ರಮೇಶ್ ಅವರ ಕೌಶಲ್ಯಪೂರ್ಣ ಹೋಸ್ಟಿಂಗ್‌ನಿಂದಾಗಿ ಕನ್ನಡ ಪ್ರೇಕ್ಷಕರಲ್ಲಿ ನೆಚ್ಚಿನದಾಗಿದೆ.
ಇನ್ನು ಈ ಬಾರಿ ಸೀಸನ್ ನಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿರುವ ಡಾ ಸಿ.ಎನ್ ಮಂಜುನಾಥ್ ಅವರನ್ನು ಕರೆಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರು ತಮ್ಮ ಮದುವೆಯ ಕಥೆಯ ಬಗ್ಗೆ ತಿಳಿಸಿದ್ದಾರೆ. ಅದಕ್ಕೂ ಮುನ್ನ ಮಂಜುನಾಥ್ ಅವರು ಜಯದೇವ ಆಸ್ಪತ್ರೆಯು ಭಾರತದ ಬೆಂಗಳೂರಿನಲ್ಲಿರುವ ಪ್ರಸಿದ್ಧ ವೈದ್ಯಕೀಯ ಸಂಸ್ಥೆಯಾಗಿದ್ದು, ಹೃದಯರಕ್ತನಾಳದ ಆರೈಕೆಯಲ್ಲಿ ಪರಿಣತಿಯನ್ನು ಹೊಂದಿದೆ. ಈ ಗೌರವಾನ್ವಿತ ಆಸ್ಪತ್ರೆಯ ಚುಕ್ಕಾಣಿ ಹಿಡಿದವರು ನಿರ್ದೇಶಕ ಸಿ ಎನ್ ಮಂಜುನಾಥ್, ಖ್ಯಾತ ಹೃದ್ರೋಗ ತಜ್ಞ ಮತ್ತು ಹೃದ್ರೋಗ ಕ್ಷೇತ್ರದಲ್ಲಿ ಪರಿಣಿತರು.
ಹೃದ್ರೋಗಶಾಸ್ತ್ರದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಡಾ.ಮಂಜುನಾಥ್ ಅವರು ಜಯದೇವ ಆಸ್ಪತ್ರೆಯಲ್ಲಿ ಸುಧಾರಿತ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಇದು ದೇಶದ ಪ್ರಮುಖ ಹೃದ್ರೋಗ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ. ರೋಗಿಗಳ ಆರೈಕೆಗೆ ಅವರ ಸಮರ್ಪಣೆ, ಅವರ ಅಪಾರ ಜ್ಞಾನ ಮತ್ತು ಪರಿಣತಿಯೊಂದಿಗೆ, ವೈದ್ಯಕೀಯ ಸಮುದಾಯದಲ್ಲಿ ಅವರಿಗೆ ವ್ಯಾಪಕವಾದ ಮನ್ನಣೆ ಮತ್ತು ಪುರಸ್ಕಾರಗಳನ್ನು ಗಳಿಸಿದೆ. ಇವರ ನೇತೃತ್ವದಲ್ಲಿ ಜಯದೇವ ಆಸ್ಪತ್ರೆ ಹೃದ್ರೋಗದಿಂದ ಬಳಲುತ್ತಿರುವವರ ಪಾಲಿಗೆ ಆಶಾಕಿರಣವಾಗಿದೆ.
ಇನ್ನು ಇವರು ಡಾಕ್ಟರ್ ಆಗುವ ಮುನ್ನ ಮಂಜುನಾಥ್ ಅವರು ಎಂ.ಎಸ್ ಓದುತ್ತಿರುವ ಸಮಯದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ನಿಮ್ಮ ಮಗಳನ್ನು ನಾನು ಮದುವೆಯಾಗುತ್ತೇನೆ ಎಂದು ಹೇಳಿದಾಗ ದೇವೇಗೌಡರು ಅದಕ್ಕೆ ಮೊದಲು ಒಪ್ಪಲಿಲ್ಲ. ಏಕೆಂದರೆ ಆಗ ಮಂಜುನಾಥ ಅವರ ಬಳಿ ಏನೇನು ಇರಲಿಲ್ಲ. ಇನ್ನೂ ದೇವೇಗೌಡ್ರು ಮಂಜುನಾಥ್ ಅವರನ್ನು ನೋಡಿ ಅನುಮಾನ ಪಟ್ಟರು.
ನನ್ನ ರಾಜಕೀಯ ನನ್ನ ಆಸ್ತಿ ನೋಡಿ ತನ್ನ ಮಗಳನ್ನು ನೀನು ಮದುವೆ ಮಾಡಲು ನಿರ್ಧಾರ ಮಾಡಿದರೆ ಅದು ನಿನ್ನ ಭ್ರಮೆ ಎಂದು ಹೇಳಿದರು. ಆಗ ನಂತರ ಮತ್ತೆ ಮಂಜುನಾಥ್ ಅವರು ದೇವೇಗೌಡರನ್ನು ಕಬ್ಬನ್ ಪಾರ್ಕಗೆ ಕರೆದುಕೊಂಡು ಹೋಗಿ ನಿಮ್ಮ ಮಗಳನ್ನು ನಾನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಭರವಸೆ ನೀಡಿದಾಗ ದೇವೇಗೌಡರು ಮಂಜುನಾಥ್ ಅವರ ಒಳ್ಳೆಯ ಗುಣ ಮತ್ತು ವ್ಯಕ್ತಿತ್ವಕ್ಕೆ ಒಪ್ಪಿಕೊಂಡು ಇಬ್ಬರಿಗೂ ಒಕ್ಕಲಿಗ ಸಮುದಾಯ ಭವನದಲ್ಲಿ ವಿವಾಹ ಮಾಡಿದರು.
ಇನ್ನು ದೇವೇಗೌಡರು ತಮ್ಮ ಅಳಿಯನಿಗೆ ಸೂಟ್ ಹೊಲಿಸಿದರೂ ಕೂಡ ಅದನ್ನು ನಿರಾಕರಿಸಿದರು. ಹಾಗೆಯೇ ಪ್ರೀತಿಯಿಂದ ಒಂದು ಉಂಗುರವನ್ನು ನೀಡಿದ್ದಾರೆ. ಅದು ಸದಾ ಮಂಜುನಾಥ್ ಅವರ ಬೆರಳಲ್ಲೇ ಇರುತ್ತದೆ. ಇನ್ನು ಈ ವಿಚಾರವನ್ನು ಮಂಜುನಾಥ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ದೇವೇಗೌಡ್ರ ಅವರ ಪತ್ನಿ ಚೆನ್ನಮ್ಮ ಅವರು ಕೂಡ ನನ್ನ ಅಳಿಯ ತುಂಬಾ ಬುದ್ಧಿವಂತ ತುಂಬಾ ಒಳ್ಳೆಯ ಗುಣ ಇರುವ ವ್ಯಕ್ತಿ ಎಂದು ಹಾಡಿ ಹೊಗಳಿದ್ದಾರೆ…..