Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಮಗನ ಜೊತೆ ಬರ್ತಡೇ ಆಚರಿಸಿಕೊಂಡ ನಟ ವಿಜಯ್ ರಾಘವೇಂದ್ರ..!! ಸಂಭ್ರಮ ಹೇಗಿತ್ತು ನೋಡಿ??

0

ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರು ತಮ್ಮ ಹುಟ್ಟುಹಬ್ಬವನ್ನು ತಮ್ಮ ಮಗ ಮತ್ತು ಸ್ನೇಹಿತರ ಜೊತೆಗೆ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಇನ್ನು ವಿಜಯ ರಾಘವೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಸೃಜನ್ ಲೋಕೇಶ್, ಮೇಘನಾರಾಜ್, ಪತ್ನಿ ಸ್ಪಂದನ ಮತ್ತು ಇತರರು ಅವರ ಫೋಟೋಗಳನ್ನು ಹಂಚಿಕೊಂಡು ಶುಭಾಶಯಗಳನ್ನು ತಿಳಿಸಿದ್ದಾರೆ.

ಇನ್ನು ವಿಜಯ್ ರಾಘವೇಂದ್ರ ಅವರು ಮೇ 26 1979 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಈಗ 42 ವರ್ಷಗಳಾಗಿವೆ. ಇವರ ತಂದೆಯ ಹೆಸರು ಎಸ್.ಎ ಚಿನ್ನೇಗೌಡ ಮತ್ತು ತಾಯಿಯ ಹೆಸರು ಜಯಮ್ಮ. ಇವರ ತಂದೆ ಎಸ್.ಎ ಚಿನ್ನೇಗೌಡ ಅವರು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಹೋದರ ಆಗಬೇಕು.

ಹಾಗಾಗಿ ಇವರು ಡಾ.ರಾಜ್ ಕುಮಾರ್ ಅವರ ಕುಟುಂಬಕ್ಕೆ ನೆಂಟರು ಆಗಬೇಕು. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟ ಶ್ರೀಮುರಳಿ ಅವರು ವಿಜಯ ರಾಘವೇಂದ್ರ ಅವರಿಗೆ ತಮ್ಮ ಆಗಬೇಕು ಎಂದು ಗೊತ್ತಿರುವ ವಿಷಯ. ವಿಜಯ ರಾಘವೇಂದ್ರ ಅವರು ನಾಯಕ ನಟರಾಗಿ ತೆರೆಯ ಮೇಲೆ ಕಾಣುವ ಮುನ್ನ ಇವರು ಕೆಲ ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯ ಮಾಡಿದ್ದಾರೆ.

ಹೌದು 1982 ರಲ್ಲಿ ಬಿಡುಗಡೆಯಾದ ಚಲಿಸುವ ಮೋಡಗಳು ಚಿತ್ರದ ಮೂಲಕ ಇವರು ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇದರಲ್ಲಿ ಇವರು ಮಾಸ್ಟರ್ ರಾಘವೇಂದ್ರ ಆಗಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಅರಳಿದ ಹೂವುಗಳು, ಜಗ ಮೆಚ್ಚಿದ ಹುಡುಗ, ಕೊಲ್ಲೂರ ಶ್ರೀಮೂಕಾಂಬಿಕ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು, ಸಂಗೀತ ಸಾಗರ, ಗಾನಯೋಗಿ, ಪಂಚಾಕ್ಷರ ಗವಾಯಿ, ಸ್ವಾಮಿ ವಿವೇಕಾನಂದ ಚಿತ್ರಗಳಲ್ಲಿ ಬಾಲನಟರಾಗಿ ನಟಿಸಿದ್ದಾರೆ.

 

ಇದಾದ ಮೇಲೆ 2002 ರಲ್ಲಿ ನಿನಗಾಗಿ ಚಿತ್ರದ ಮೂಲಕ ಇವರು ತೆರೆಯ ಮೇಲೆ ನಾಯಕ ನಟರಾಗಿ ಕಾಣಿಸಿಕೊಂಡರು. ತದನಂತರ ಇವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಕೆಲ ಕನ್ನಡದ ಹಾಡುಗಳನ್ನು ಕೂಡ ಹಾಡಿ ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇನ್ನು ವಿಜಯ್ ರಾಘವೇಂದ್ರ ಅವರು ಕಿಸ್ಮತ್ ಎನ್ನುವ ಸಿನಿಮಾವನ್ನು ನಿರ್ದೇಶನ ಕೂಡ ಮಾಡಿದ್ದಾರೆ.

ಹಾಗೆಯೇ 2013 ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 1ಗೆ ಪ್ರವೇಶ ಮಾಡಿ ಅಲ್ಲಿ ವಿನ್ನರ್ ಕೂಡ ಆದರು. ಹಾಗೆಯೇ ಡ್ರಾಮಾ ಜ್ಯೂನಿಯರ್ಸ್, ಡಾನ್ಸ್ ಕರ್ನಾಟಕ ಡಾನ್ಸ್, ಡಾನ್ಸ್ ಕರ್ನಾಟಕ ಡಾನ್ಸ್ ಲಿಟಲ್ ಮಾಸ್ಟರ್ಸ್ ಹೀಗೆ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಪ್ರಸ್ತುತ ಇವರು ಡಾನ್ಸಿಂಗ್ ಚಾಂಪಿಯನ್ ಎನ್ನುವ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದಾರೆ. ಹಾಗೆಯೇ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ರಾಘವೇಂದ್ರ ಅವರಿಗೆ ಶೌರ್ಯ ರಾಘವೇಂದ್ರ ಎನ್ನುವ ಮಗ ಕೂಡ ಇದ್ದಾರೆ……

Leave A Reply