ನಟ ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ವಾಮಿ ಎಂದರೆ ಪರಮ ಭಕ್ತಿ. ಇವರು ಪ್ರತಿ ಗುರುವಾರ ದಿನದಂದು ಕಡ್ಡಾಯವಾಗಿ ತಮ್ಮ ಮನೆಯಲ್ಲಿ ರಾಘವೇಂದ್ರ ಸ್ವಾಮಿಗೆ ಪೂಜೆ ಮಾಡುತ್ತಾರೆ. ಇದರ ಜೊತೆಗೆ ಪ್ರತಿ ವರ್ಷ ಜಗ್ಗೇಶ್ ಅವರು ಮಂತ್ರಾಲಯಕ್ಕೆ ಹೋಗಿ ದೇವರ ದರ್ಶನವನ್ನು ಮಾಡಿಕೊಂಡು ಬರುತ್ತಾರೆ.
ಇನ್ನು ಜಗ್ಗೇಶ್ ಅವರು ಇತ್ತೀಚೆಗೆಯಷ್ಟೇ ಮಂತ್ರಾಲಯಕ್ಕೆ ಹೋಗಿ ಅಲ್ಲಿ ಸಾಮಾನ್ಯ ವ್ಯಕ್ತಿಯಂತೆ ರಾಘವೇಂದ್ರ ಸ್ವಾಮಿಯ ದರ್ಶನವನ್ನು ಮಾಡಿಕೊಂಡು ಬಂದಿದ್ದಾರೆ.
ಅಲ್ಲಿ ಸಾಕಷ್ಟು ಅಭಿಮಾನಿಗಳು ಜಗ್ಗೇಶ್ ಅವರ ಜೊತೆಗೆ ಸೆಲ್ಫಿಯನ್ನು ಕೂಡ ತೆಗೆದುಕೊಂಡಿದ್ದಾರೆ. ಮಂತ್ರಾಲಯವು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇದೆ. ಇನ್ನೂ ನಮ್ಮ ನವರಸ ನಾಯಕ ಜಗ್ಗೇಶ್ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.
ಇವರು ಮಾರ್ಚ್ 17 1963 ರಂದು ಮಾಯಸಂದ್ರದಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ನಂಜಮ್ಮ ಮತ್ತು ತಾಯಿಯ ಹೆಸರು ಶಿವಲಿಂಗಪ್ಪ ಎಂದು. ಜಗ್ಗೇಶ್ ಅವರಿಗೆ ನಟ ಕೋಮಲ್ ಅವರು ಸಹೋದರ ಆಗಬೇಕು.
ಇವರ ಜೊತೆಗೆ ಮಹಾದೇವಿ ಮತ್ತು ವಿಜಯಲಕ್ಷ್ಮಿ ಎನ್ನುವವರು ಕೂಡ ಸಹೋದರಿಯರು ಆಗಬೇಕು. ಜಗ್ಗೇಶ್ ಅವರು ಕೇವಲ ನಟ ಮಾತ್ರರಲ್ಲ ಇವರು ನಿರ್ಮಾಪಕ ಮತ್ತು ನಿರ್ದೇಶಕರು ಕೂಡ ಹೌದು.
ಜಗ್ಗೇಶ್ ಅವರು ತಮ್ಮ ಸಿನಿಮಾ ಕೆರಿಯರ್ ಅನ್ನು 1992 ರಂದು ಇಬ್ಬನಿ ಕರಗಿತು ಎಂಬ ಚಿತ್ರದ ಮೂಲಕ ಶುರು ಮಾಡಿಕೊಂಡರು. ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಬಹುತೇಕ ಸಾಕಷ್ಟು ಸಿನಿಮಾಗಳು ಹಿಟ್ ಆಗಿವೆ.
ಜಗ್ಗೇಶ್ ಅವರು ಜನಪ್ರಿಯ ಆಗಿದ್ದು ತಮ್ಮ ಹಾಸ್ಯದ ನಟನೆಯಿಂದ. ಇನ್ನೂ ಇವರು ಗುರು ಮತ್ತು ಮೇಲುಕೋಟೆ ಮಂಜ ಚಿತ್ರಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ.
ಹಾಗೆಯೇ ಜಗ್ಗೇಶ್ ಅವರು ಸೈ ಟು ಡ್ಯಾನ್ಸ್, ಕಾಮಿಡಿ ಕಿಲಾಡಿಗಳು, ಕಿಲಾಡಿ ಕುಟುಂಬ, ಕನ್ನಡದ ಕಣ್ಮಣಿ, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ನ ಸೀಸನ್ ಗಳು ಹೀಗೆ ಸಾಕಷ್ಟು ಶೋಗಳಿಗೆ ಜಡ್ಜ್ ಆಗಿ ಕೂಡ ಕೆಲಸವನ್ನು ಮಾಡುತ್ತಿದ್ದಾರೆ.
ಇನ್ನು ಜಗ್ಗೇಶ್ ಅವರು 1984 ರಂದು ಪರಿಮಳ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಯತಿರಾಜ್ ಮತ್ತು ಗುರು ರಾಜ್ ಎನ್ನುವ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ…..