Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಪೆರೇಡ್ ನಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಹೇಗೆ ಕಾಣಿಸಿಕೊಂಡರು ನೋಡಿ ವಿಡಿಯೋ !!

0

ನಾವು ಭಾರತೀಯರು ಎಲ್ಲರೂ ಆಗಸ್ಟ್ 15 ರಂದು 75ನೆಯ ಸ್ವಾತಂತ್ರ್ಯದಿನಾಚರಣೆ ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡಿದ್ದೇವೆ. ಇನ್ನೂ ಈ ಕಳೆದ 2 ವರ್ಷಗಳ ಹಿಂದೆ ಕೊರೋನಾ ಹಾವಳಿ ಇದ್ದ ಕಾರಣ ನಾವು ಎಲ್ಲೂ ಕೂಡ ಸ್ವಾತಂತ್ರ್ಯ ದಿನಾಚರಣೆ ಆಗಿರಬಹುದು ಗಣರಾಜ್ಯೋತ್ಸವ ದಿನಾಚರಣೆಯನ್ನು ಮಾಡುವುದಕ್ಕೆ ಆಗಲಿಲ್ಲ.

ಈ ಬಾರಿ ಎಲ್ಲಾ ಕಡೆ ಅಂದರೆ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಇತರೆ ಪ್ರದೇಶಗಳಲ್ಲಿ ಎಲ್ಲರು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಿದ್ದೇವೆ. ಇನ್ನೂ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಅವರು ನ್ಯೂಯಾರ್ಕ್ ದೇಶದಲ್ಲಿ ನಮ್ಮ ಭಾರತದ ಪರವಾಗಿ ಅಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಹೌದು ಅಲ್ಲು ಅರ್ಜುನ್ ಅವರನ್ನು ನೋಡುವುದಕ್ಕೆ ನ್ಯೂಯಾರ್ಕ್ ನಲ್ಲಿ ಸಾಕಷ್ಟು ಅಭಿಮಾನಿಗಳು ಸೇರಿದ್ದರು.

ಇನ್ನೂ ಅಲ್ಲು ಅರ್ಜುನ್ ಅವರ ಜೊತೆಗೆ ಅವರ ಪತ್ನಿ ಸ್ನೇಹಾ ರೆಡ್ಡಿ ಅವರು ಕೂಡ ಪೆರೇಡ್ ನಲ್ಲಿ ಭಾಗವಹಿಸಿದ್ದರು. ಇದು ನೋಡಿದರೆ ನಮ್ಮ ಭಾರತೀಯರಿಗೆ ಎಲ್ಲರಿಗೂ ಹೆಮ್ಮೆ ತಂದುಕೊಡುವ ವಿಷಯವಾಗಿದೆ. ಇನ್ನೂ ಅಲ್ಲು ಅರ್ಜುನ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸೋದರ ಅಳಿಯ ಆಗಬೇಕು ಮತ್ತು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ಟಾಲಿವುಡ್ ನಲ್ಲಿ ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಹಾಗೆಯೇ ಸಿನಿಮಾ ವಿಷಯಕ್ಕೆ ಬಂದರೆ ಅಲ್ಲು ಅರ್ಜುನ್ ಅವರು ವಿಜೇತ ಎನ್ನುವ ಚಿತ್ರದಲ್ಲಿ ಬಾಲನಟರಾಗಿ ಅಭಿನಯಿಸಿದ್ದಾರೆ. ಇದಾದ ಮೇಲೆ ಗಂಗೋತ್ರಿ ಚಿತ್ರದ ಮೂಲಕ ಇವರು ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು.

 

ಇದಾದ ಮೇಲೆ ಗಂಗೋತ್ರಿ, ಆರ್ಯ, ಬನ್ನಿ, ಹ್ಯಾಪಿ, ದೇಶಮುದುರು, ಶಂಕರ್ ದಾದಾ ಜಿಂದಾಬಾದ್, ಪರುಗು, ಆರ್ಯ 2, ವರುಡು, ವೇದಂ, ಬದ್ರಿನಾಥ್, ಜುಲಾಯಿ, ಇದ್ದರಮ್ಮಾಯಿಲಿತೋ, ಅಯಾಮ್ ದಟ್ ಚೇಂಜ್ಡ್, ಯವಡು, ರೇಸ್ ಗುರಮ್, ಸನ್ ಆಫ್ ಸತ್ಯಮೂರ್ತಿ, ರುದ್ರಮಾದೇವಿ, ಸರೈನೋಡು, ದುವ್ವಾಡ ಜಗನ್ನಾದಮ್, ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾ, ಅಲಾ ವೈಕುಂಠಪುರಂಲೋ, ಪುಷ್ಪಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಅಲ್ಲು ಅರ್ಜುನ್ ಅವರಿಗೆ ಅಲ್ಲು ಅರ್ಹ ಮತ್ತು ಅಲ್ಲು ಅಯಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ……

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply