ದಕ್ಷಿಣ ಭಾರತದ ಖ್ಯಾತ ನಟಿ ಸಿಮ್ರಾನ್ ಅವರ ಬಗ್ಗೆ ನಿಮಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಇವರ ತಂಗಿ ಮೋನಾಲ್ ಅವರ ಬಗ್ಗೆ ಸ್ವಲ್ಪ ಹೇಳುತ್ತೇವೆ ಕೇಳಿ. ಸಿಮ್ರಾನ್ ಅವರು ತೆಲುಗು ಕನ್ನಡ ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇನ್ನು ಸಿಮ್ರಾನ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ಕನ್ನಡದಲ್ಲಿ ಕೇವಲ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಬೇರೆ ಯಾವುದೂ ಅಲ್ಲ ಸಿಂಹದ ಮರಿ.
ಇದಾದ ಮೇಲೆ ಇವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯ ನಟಿಯಾಗುತ್ತಾರೆ. ಇನ್ನೂ ಇವರ ತಂಗಿ ಮೋನಾಲ್ ಅವರು ಕೂಡ ತಮ್ಮ ಅಕ್ಕನಂತೆ ನಟಿಯಾಗಬೇಕೆಂದು ಸಾಕಷ್ಟು ಕನಸುಗಳನ್ನು ಹೊತ್ತುಕೊಂಡಿದ್ದರು. ಇದರಂತೆಯೇ ಮೋನಲ್ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯನ್ನು ಕೂಡ ಸಂಪಾದನೆ ಮಾಡಿಕೊಂಡಿದ್ದರು. ಇವರಿಗೆ ಸಾಕಷ್ಟು ಪರಭಾಷೆಗಳಿಂದ ಅವಕಾಶಗಳು ಕೂಡ ಬರುತ್ತಿದ್ದವು.
ಕೆಲ ವರ್ಷಗಳಲ್ಲಿ ಮೋನಾಲ್ ಅವರು ದಕ್ಷಿಣ ಭಾರತದ ಜನಪ್ರಿಯ ನಟಿ ಆಗುತ್ತಿದ್ದರು. ಆದರೆ ಅಂತಹ ಸಮಯದಲ್ಲಿ ತಮ್ಮ ರೂಮಿನಲ್ಲಿ ನೇಣು ಬಿಗಿದು ಸಿಕ್ಕಿದ್ದರು. ಹೌದು ಮೋನಾಲ್ ಅವರು ತಮ್ಮ ಕೈಯ್ಯಾರೆ ತಮ್ಮ ಜೀವನವನ್ನು ನಾಶ ಮಾಡಿಕೊಂಡರು. ಇದನ್ನು ಹೇಳುವ ಮುನ್ನ ಅವರ ಜೀವನದಲ್ಲಿ ಏನಾಯ್ತು ಎಂದು ತಿಳಿದುಕೊಳ್ಳೋಣ..
ಮೋನಾಲ್ ಅವರು ದೆಹಲಿಯಲ್ಲಿ ಜನಿಸಿದ್ದರು. ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಮೋನಾಲ್ ಅವರು ಮಾಡೆಲಿಂಗ್ ಮಾಡುತ್ತಿರುವ ಸಮಯದಲ್ಲಿ ಅವರ ಅಕ್ಕ ಸಿಮ್ರನ್ ಅವರು ತಮಿಳಿನಲ್ಲಿ ಸಾಕಷ್ಟು ಜನಪ್ರಿಯ ನಟಿಯಾಗುತ್ತಿದ್ದರು. ಆಗ ಮೋನಾಲ್ ಅವರು ಸಿಮ್ರಾನ್ ಅವರ ತಂಗಿ ಎಂದು ತಿಳಿಯುತ್ತದೆ.
ಹೀಗಾಗಿ ಇವರಿಗೆ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಮೋನಾಲ್ ಅವರು 2001 ರಲ್ಲಿ ಕನ್ನಡದಲ್ಲಿ ಇಂದ್ರಧನುಷ್ ಎನ್ನುವ ಚಿತ್ರದಲ್ಲಿ ನಟನೆ ಮಾಡುತ್ತಾರೆ. ಆದರೆ ಇವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಬದ್ರಿ ಚಿತ್ರವು. ಇದಾದ ಮೇಲೆ ತೆಲುಗಿನಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ.
ಇದಾದ ಮೇಲೆ 2001ರ ವರ್ಷದ ಕೊನೆಯದಲ್ಲಿ ತಮಿಳು ಚಿತ್ರರಂಗದಲ್ಲಿ ಮೊದಲನೆಯದಾಗಿ ನಾಯಕಿನಟಿಯಾಗಿ ಕಾಣಿಸುತ್ತಾರೆ.
ಆದರೆ 2002ರ ವರ್ಷದಲ್ಲಿ ತಮ್ಮ ಜೀವನವನ್ನೇ ಅಂತ್ಯ ಮಾಡಿಕೊಂಡರು. ಇದಕ್ಕೆ ಕಾರಣ ಡ್ಯಾನ್ಸ್ ಮಾಸ್ಟರ್ ಆಗಿದ್ದ ಪ್ರಸನ್ನ ಅವರ ಜೊತೆಗೆ ಪ್ರೇಮದ ಬಲೆಯಲ್ಲಿ ಬಿದ್ದು ತಮ್ಮ ಜೀವನವನ್ನೇ ನಾಶ ಮಾಡಿಕೊಂಡರು. ಆದರೆ ಇದು ಯಾವುದೇ ರೀತಿಯ ಮರಣದ ಪ್ರಕರಣಗಳು ಇಲ್ಲದ ಕಾರಣ ಆತನಿಗೆ ಶಿಕ್ಷೆ ಕೂಡ ಆಗಲಿಲ್ಲ. ಕೇವಲ 21ನೇ ವಯಸ್ಸಿಗೆ ತನ್ನ ಜೀವನವನ್ನು ಮುಗಿಸಿಕೊಂಡ ಮೋನಾಲ್ ಅವರಿಗೆ ಏನು ಹೇಳಬೇಕೆಂದು ಗೊತ್ತಿಲ್ಲ…..