Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬೊಂಬೆ ಹೇಳುತೈತೆ ಹಾಡನ್ನು ನುಡಿಸಿದ ವ್ಯಕ್ತಿಗೆ ಕಾಣಿಕೆ ನೀಡಿ ಕೈ ಮುಗಿದ ಅಶ್ಮಿತಾ..!! ಅಪ್ಪು ಅಗಲಿಕೆ ಸಿಕ್ಕಾಪಟ್ಟೆ ಬೇಸರ ಆಗುತ್ತೆ ಕಣ್ರೀ 🥲

0

ಪುನೀತ್ ರಾಜ್ ಕುಮಾರ್ ಅವರ ಮರಣವು ಎಲ್ಲರಿಗೂ ಒಂದು ದೊಡ್ಡ ನಷ್ಟವಾಗಿದೆ. ಹೌದು ಈ ರೀತಿ ವ್ಯಕ್ತಿತ್ವ ಇರುವ ನಟ ನಮ್ಮ ಕರ್ನಾಟಕ ರಾಜ್ಯದಲ್ಲಿ ಹುಟ್ಟಿರುವುದು ನಮಗೆಲ್ಲರಿಗೂ ಹೆಮ್ಮೆ ಇದೆ. ಪುನೀತ್ ಅವರು ದೈಹಿಕವಾಗಿ ಇಲ್ಲದೆ ಇದ್ದರೂ ಎಲ್ಲರ ಮನಸ್ಸಿನಲ್ಲಿಯೂ ಅಚ್ಚೆಯಾಗಿ ಹಾಗೆ ಉಳಿದಿದ್ದಾರೆ.

ಏಕೆಂದರೆ ಇವರು ಮಾಡಿರುವ ಅಪಾರ ಸಮಾಜ ಸೇವೆಗಳು ಒಳ್ಳೆಯ ಗುಣ ಒಳ್ಳೆಯ ವ್ಯಕ್ತಿತ್ವ ಉದಾಹರಣೆಗಳಾಗಿವೆ. ಇನ್ನು ಪುನೀತ್ ಅವರ ಹುಟ್ಟುಹಬ್ಬ ಮೊನ್ನೆಯಷ್ಟೇ ಜರುಗಿತು. ಮಾರ್ಚ್ 17 2022 ರಂದು ಪುನೀತ್ ಅವರ ಕೊನೆಯ ಚಿತ್ರವಾದ ಜೇಮ್ಸ್ ಚಿತ್ರವನ್ನು ತುಂಬಾ ಅದ್ದೂರಿಯಾಗಿ ಎಲ್ಲ ಕಡೆ ಬಿಡುಗಡೆ ಮಾಡಲಾಯಿತು.

ಈ ಚಿತ್ರವನ್ನು ನೋಡುವುದಕ್ಕೆ ಮತ್ತು ಅಪ್ಪು ಅವರ ಕ್ಷಣಗಳನ್ನು ನೆನೆಯುವುದಕ್ಕೆ ಬಹುತೇಕ ಅಭಿಮಾನಿಗಳು ತುಂಬಾ ತಿಂಗಳಿನಿಂದ ಕಾಯುತ್ತಿದ್ದರು. ಹಾಗೆಯೇ ಜೇಮ್ಸ್ ಚಿತ್ರವು ಕೇವಲ ಒಂದು ಚಿತ್ರ ಮಾತ್ರವಲ್ಲ ಇದು ಒಂದು ಭಾವನೆ ಎಂದು ಹೇಳಬಹುದು. ಅಪ್ಪು ಅವರು ನಮ್ಮ ಜೊತೆ ಈಗ ಇಲ್ಲದೇ ಇದ್ದರೂ ಕೂಡ ಅವರು ಮಾಡಿರುವ ಸಮಾಜ ಸೇವೆಗಳು ಎಲ್ಲರಿಗೂ ಒಳ್ಳೆಯ ಮಾದರಿಯಾಗಿ ನಿಂತಿವೆ.

ಇವರನ್ನು ನೋಡಿ ಪುನೀತ್ ಅವರ ಅಭಿಮಾನಿಗಳು ಸಾಕಷ್ಟು ಜನರಿಗೆ ಸಹಾಯವನ್ನು ಕೂಡ ಮಾಡುತ್ತಿದ್ದಾರೆ. ಇನ್ನು ಪುನೀತ್ ಅವರ ರಾಜಕುಮಾರ ಚಿತ್ರದಲ್ಲಿ ಇರುವ ಬೊಂಬೆ ಹೇಳುತೈತೆ ಹಾಡನ್ನು ಕೇಳಿದರೆ ನಿಜಕ್ಕೂ ತುಂಬಾನೇ ನೋವಾಗುತ್ತದೆ. ಏಕೆಂದರೆ ಈ ಹಾಡು ತುಂಬ ಅರ್ಥಪೂರ್ವಕವಾಗಿದೆ.

ಇನ್ನೂ ಈ ಹಾಡನ್ನು ಒಬ್ಬ ಪ್ರತಿಭಾನ್ವಿತ ವ್ಯಕ್ತಿ ನುಡಿಸಿದ್ದಕ್ಕೆ ಕನ್ನಡದ ನಟಿ ಶ್ವೇತಾ ಶ್ರೀವಾತ್ಸವ್ ಅವರ ಮಗಳಾದ ಅಶ್ಮಿತಾ ಅವರು ಆ ವ್ಯಕ್ತಿಗೆ ಕಾಣಿಕೆ ನೀಡಿ ಕೈ ಮುಗಿದಿದ್ದಾರೆ. ಅದರ ವೀಡಿಯೋವನ್ನು ನೀವು ಇಲ್ಲಿ ನೋಡಬಹುದು. ಇನ್ನು ಶ್ವೇತಾ ಶ್ರೀವಾತ್ಸವ ಅವರು ಮುಖಾಮುಖಿ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ಇದಾದ ಮೇಲೆ ಆ ದಿನಗಳು ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂ ಇವರಿಗೆ ಹೆಚ್ಚು ಫೇಮಸ್ ತಂದುಕೊಟ್ಟ ಚಿತ್ರವು ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ. ಇದಾದ ಮೇಲೆ ಆತ್ಮಸಾಕ್ಷಿ, ಫೇರ್ & ಲವ್ಲಿ, ಕಿರಗೂರಿನ ಗಯ್ಯಾಳಿಗಳು ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ…..

Leave A Reply