ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನನ್ನ ಎಲ್ಲಾ ಪ್ರೀತಿಯ ಮತಬಾಂಧವರಿಗೆ ನಿಮ್ಮ ಮನೆ ಮಗ ಹೆಚ್.ಪಿ ರಾಜಗೋಪಾಲ ರೆಡ್ಡಿ ಮಾಡುವ ನಮಸ್ಕಾರಗಳು.
ಇದೇ ವಿಧಾನಸಭಾ ಕ್ಷೇತ್ರದಲ್ಲಿ ಹುಟ್ಟಿ, ಬೆಳೆದ ನಾನು ನನ್ನ ಕ್ಷೇತ್ರದ ಜನರಿಗೆ ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ, ಯಾವುದೇ ಸ್ವಾರ್ಥ ವಿಲ್ಲದೆ, ಇಲ್ಲಿಯವರೆಗೂ ನನ್ನ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇನೆ.
ಬಡವರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಹಾಗೂ ನನ್ನ ಕ್ಷೇತ್ರದಲ್ಲಿ ಇರುವ ಎಲ್ಲಾ ಅಶಕ್ತ ಜನರಿಗೆ ಇನ್ನು ಹೆಚ್ಚು ಹೆಚ್ಚು ಸೇವೆಗಳನ್ನು ಮಾಡಬೇಕೆನ್ನುವುದು ನನ್ನ ಮಹಾಭಿಲಾಷೆ.
ಜೊತೆಗೆ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೂಡ ನನ್ನ ಕನಸು.
ಈ ಎಲ್ಲಾ ನನ್ನ ಸೇವೆಗಳು, ಕನಸುಗಳಿಗೆ ಸ್ಪೂರ್ತಿ ತುಂಬ ಬೇಕಾಗಿರುವುದು ನನ್ನ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರೀತಿಯ ಜನರು.
2023 ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜನತಾದಳದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದೇನೆ.
ತೆನೆ ಹೊತ್ತ ಮಹಿಳೆಯ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ, ನಿಮ್ಮ ಸೇವೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಲು ನನಗೆ ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಇಂತಿ ನಿಮ್ಮ ಮನೆ ಮಗ ಎಚ್. ಪಿ ರಾಜಗೋಪಾಲ ರೆಡ್ಡಿ.