ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದಲ್ಲಿ ನಟಿಸಿದ್ದ ವೈಷ್ಣವಿ ಗೌಡ ಅವರು ತಮ್ಮ ಮೊದಲನೆಯ ಧಾರಾವಾಹಿ ಮೂಲಕ ಸಕತ್ ಫೇಮಸ್ ಆದರು. ಇನ್ನು ಈ ಸೀರಿಯಲ್ 2013 ರಲ್ಲಿ ಪ್ರಸಾರವಾಗಿತ್ತು ಮತ್ತು ಇದರಲ್ಲಿ ಇವರು ಮಾಡಿದ ಪಾತ್ರವು ಅದ್ಭುತ ಎಂದು ಹೇಳಬಹುದು. ಇದರ ಜೊತೆಗೆ ಇವರು ಬಿಗ್ ಬಾಸ್ ಮನೆಗೆ ಕೂಡ ಪ್ರವೇಶ ಮಾಡಿದ್ದರು.
ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 8 ರಲ್ಲಿ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಇನ್ನೂ ವೈಷ್ಣವಿ ಗೌಡ ಅವರು ಫೆಬ್ರವರಿ 20 1992 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ 30 ವರ್ಷಗಳಾಗಿವೆ. ಇನ್ನು ವೈಷ್ಣವಿ ಗೌಡ ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಇರುವ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಮಾಡಿ ಮುಗಿಸಿದ್ದಾರೆ ಮತ್ತು ಬಿ.ಎ ಪದವಿಯನ್ನು ಕೂಡ ಮಾಡಿ ಮುಗಿಸಿದ್ದಾರೆ.
ಇನ್ನು ಇವರ ತಂದೆಯ ಹೆಸರು ರವಿ ಕುಮಾರ್ ಮತ್ತು ತಾಯಿಯ ಹೆಸರು ಬಾನು ರವಿಕುಮಾರ್. ಹಾಗೆಯೇ ಇವರಿಗೆ ಸುನೀಲ್ ಕುಮಾರ್ ಎನ್ನುವ ಸಹೋದರ ಕೂಡ ಇದ್ದಾರೆ. ವೈಷ್ಣವಿ ಗೌಡ ಅವರು ಕೇವಲ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮಾತ್ರವಲ್ಲ ಪುನರ್ವಿವಾಹ, ಮುಂಗಾರು ಮಳೆ ಎನ್ನುವ ಧಾರಾವಾಹಿಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಇನ್ನು ಬೆಳ್ಳಿತೆರೆಗೆ ಬಂದರೆ 2019 ರಲ್ಲಿ ರವಿಕಿರಣ್ ಅವರ ನಿರ್ದೇಶನದ ಗಿರಿಗಿಟ್ಲೆ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.
ಹಾಗೆಯೇ ವೈಷ್ಣವಿ ಗೌಡ ಅವರು ಮುಲಿಯಾ ಜ್ಯುವೆಲ್ಲರಿ ಮತ್ತು ಪಾಂಡ್ಸ್ ಎನ್ನುವ ಟಿವಿ ಅಡ್ವರ್ಟೈಸ್ಮೆಂಟ್ ಗಳಲ್ಲೂ ಕೂಡ ಮಾಡೆಲ್ ಆಗಿ ನಟಿಸಿದ್ದಾರೆ. ಇನ್ನು ವೈಷ್ಣವಿ ಗೌಡ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಯಾವಾಗಲೂ ಸಕ್ರಿಯರಾಗಿದ್ದು ಸಾಕಷ್ಟು ಫೋಟೋಗಳು ಮತ್ತು ವಿಡಿಯೋಗಳನ್ನು ತಮ್ಮ ಅಭಿಮಾನಿಗಳಿಗೋಸ್ಕರ ಹಂಚಿಕೊಳ್ಳುತ್ತಿರುತ್ತಾರೆ.
ವೈಷ್ಣವಿ ಗೌಡ ಅವರು 2019 ರಲ್ಲಿ ಕಲರ್ಸ್ ಕನ್ನಡ ವಾಹಿನಿಯಿಂದ ಫೇವರಿಟ್ ಆಕ್ಟ್ರೆಸ್ ಎನ್ನುವ ಕನ್ನಡ ಟೆಲಿ ಅವಾರ್ಡ್ ಅನ್ನು ಕೂಡ ಸಂಪಾದನೆ ಮಾಡಿಕೊಂಡರು. ಇದೀಗ ವೈಷ್ಣವಿ ಗೌಡ ಅವರು ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ. ಹೌದು ಇವರ ಹೊಸ ಮನೆಯ ಗೃಹಪ್ರವೇಶಕ್ಕೆ ಚಿತ್ಕಲಾ ಬಿರಾದಾರ್, ವಿಜಯ್ ಸೂರ್ಯ, ರಘು ವೈನ್ ಸ್ಟೋರ್, ಅರವಿಂದ್ ಕೆ.ಪಿ, ದಿವ್ಯಾ ಉರುಡುಗ ಇನ್ನೂ ಸಾಕಷ್ಟು ಕಲಾವಿದರು ಆಗಮಣ ಮಾಡಿದ್ದರು……