ಬಾಲಿವುಡ್ ನ ಫೇಮಸ್ ನಟರು ಯಾರೆಲ್ಲ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ ಗೊತ್ತಾ ?? ದೊಡ್ಡ ದೊಡ್ಡ ಪ್ರತಿಭೆಗಳು ಲಿಸ್ಟ್ ನಲ್ಲಿ ಇದ್ದಾರೆ ನೋಡಿ !!
ಬಾಲಿವುಡ್ ನ ಖ್ಯಾತ ನಟರು ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಸ್ಯಾಂಡಲ್ ವುಡ್ ನಲ್ಲಿ ನಟಿಸಿ ಇಲ್ಲೂ ಕೂಡ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಅಂತಹ ಬಾಲಿವುಡ್ ನಟರು ಯಾರು ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ..
ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿನಯದ ವಿಷ್ಣು ವಿಜಯ ಸಿನಿಮಾದಲ್ಲಿ ವಿಜಯ್ ಎನ್ನುವ ಮುಖ್ಯವಾದ ಪಾತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.
ನಟ ವಿವೇಕ್ ಒಬೆರಾಯ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಡಿಸಿಪಿ ಪಾತ್ರದಲ್ಲಿ ನಟಿಸಿ ಕನ್ನಡ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು.
ನಟ ಸುನೀಲ್ ಶೆಟ್ಟಿ ಅವರು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ನಟಿಸಿ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟರು.
ನಟ ಸಂಜಯ್ ದತ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಅಧೀರ ಎನ್ನುವ ವಿಲನ್ ಪಾತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.
ನಟ ಅನಿಲ್ ಕಪೂರ್ ಅವರು ಕನ್ನಡದ ಹಳೆಯ ಚಿತ್ರ ಆಗಿರುವ ಪಲ್ಲವಿ ಅನುಪಲ್ಲವಿ ಎನ್ನುವ ಫೇಮಸ್ ಚಿತ್ರದಲ್ಲಿ ನಾಯಕ ಪಾತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.
ನಟ ಅಮಿತಾಭ್ ಬಚ್ಚನ್ ಅವರು ಕನ್ನಡದ ನಟ ಧ್ಯಾನ್ ಅವರ ಅಭಿನಯದ ಅಮೃತಧಾರೆ ಚಿತ್ರದಲ್ಲಿ ಒಂದು ಗೆಸ್ಟ್ ಪಾತ್ರದಲ್ಲಿ ಕಾಣಿಸಿ ಕನ್ನಡ ಇಂಡಸ್ಟ್ರಿಗೆ ಮೊದಲನೆಯದಾಗಿ ಕಾಲಿಟ್ಟರು.
ಡಿನೋ ಮೋರಿಯಾ ಅವರು ನಟಿ ಮೋಹಕತಾರೆ ರಮ್ಯಾ ಅವರ ಜತೆಗೆ ಹೆಚ್ಚುವರಿ ಚಿತ್ರದಲ್ಲಿ ಹೀರೋ ಆಗಿ ನಟಿಸಿ ಕನ್ನಡ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು.
ಜಾಕಿ ಶಾಲೆ ಅವರು ತಾರಾ ಕಿಶನ್ ಅವರ ಅಭಿನಯದ ಕೇರ್ ಆಫ್ ಫುಟ್ಪಾತ್ ಚಿತ್ರದಲ್ಲಿ ಒಂದು ಗೆಸ್ಟ್ ರೋಲ್ ನಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಇದಾದ ಮೇಲೆ ಇವರು ಜಮಾನಾ, ಅಣ್ಣಾಬಾಂಡ್, ಅಮಾನಿಶಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ……