ಬಾಲಿಕಾ ವಧು ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಅತ್ಮಹತ್ಯೆ ಮಾಡಿಕೊಂಡಿದ್ಯಾಕೆ? ಸಾಯುವ ಮುನ್ನ ಆಕೆ ಗರ್ಭಿಣಿ ಆಗಿದ್ರಾ? ಈ ಚಂಡಾಳ ಏನು ಮಾಡಿದ್ದ ಗೊತ್ತೇ ??
ಬದುಕಲು ಬೇಕಾದ ಎಲ್ಲಾ ಪ್ರತಿಭೆ, ಶಕ್ತಿ ಇದ್ದರೂ ಕೆಲವರು ತಮ್ಮ ಬುದ್ಧಿಗೆ ಕೈ ಕೊಟ್ಟು ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಅದೇ ರೀತಿ ತನ್ನ ಉಜ್ವಲ ಭವಿಷ್ಯಕ್ಕೆ ತಾನೇ ಇತಿಶ್ರೀ ಹಾಡಿದ ನಟಿ ಅಂದರೆ ಅದು ಪ್ರತ್ಯೂಷಾ ಬ್ಯಾನರ್ಜಿ. ಹಿಂದಿಯ ಬಾಲಿಕಾ ವಧು ಧಾರವಾಹಿ ಮೂಲಕ ಆನಂದಿ ಪಾತ್ರದಲ್ಲಿ ಮನೆ ಮಗಳಾಗಿ ಜನಪ್ರಿಯತೆ ಗಳಿಸಿದ್ದ ಪ್ರತ್ಯೂಷಾ ಬ್ಯಾನರ್ಜಿ ತುಂಬಾನೇ ಪ್ರತಿಭಾವಂತೆ. ಚಿಕ್ಕ ವಯಸ್ಸಿನಲ್ಲಿಯೇ ತನ್ನ ನಟನಾ ಕೌಶಲ್ಯದಿಂದ ಸಾವಿರಾರು.
ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದಿದ್ದರು. ಆದರೆ ಪ್ರೀತಿಯ ಪಾಶಕ್ಕೆ ಬಿದ್ದು ಮೋಸ ಹೋಗಿ ಕೊನೆಗೆ ಜೀವನವನ್ನೇ ಬಲಿ ಪಡೆದುಕೊಂಡಿದ್ದಾರೆ. ಆನಂದಿ ಎಂದೇ ಜನ ಗುರುತಿಸುತ್ತಿದ್ದ, ಪ್ರತ್ಯೂಷಾ ಬೆಂಗಾಲಿ ಕುಟುಂಬದವರು. ಬಿಹಾರದಲ್ಲಿ 1991 ರಲ್ಲಿ ಜನಿಸಿದ ಅವರು 2010 ರಲ್ಲಿ ಬಾಲಿಕಾ ವಧು ಧಾರವಾಹಿ ಮೂಲಕ ಮೊದಲ ಬಾರಿ ಬಣ್ಣ ಹಚ್ಚಿದವರು. ತುಂಬಾ ಸರಳ ನಡವಳಿಕೆ ಜೊತೆಗೆ ಆಕರ್ಷಕವಾಗಿದ್ದ ಪ್ರತ್ಯೂಷಾರಿಗೆ 2012 ರಲ್ಲಿ ಒಂದು.
ಪಾರ್ಟಿಯಲ್ಲಿಮಾಡೆಲ್ ಹಾಗೂ ನಟನಾಗಿದ್ದ ರಾಹುಲ್ ರಾಜ್ ಸಿಂಗ್ ಪರಿಚಯ ಆಗಿ ಇಬ್ಬರಲ್ಲೂ ಪ್ರೀತಿ ಹುಟ್ಟುತ್ತೆ. ರಾಹುಲ್ ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರತ್ಯೂಷಾ, ಒಂದು ಫ್ಲ್ಯಾಟ್ ಖರೀದಿಸಿ ಅದರಲ್ಲಿಯೇ ಇಬ್ಬರೂ ಸಮಯ ಕಳೆಯುತ್ತಿದ್ದರು. ಅಷ್ಟೇ ಅಲ್ಲ ಆತನ ಮೇಲಿನ ಕುರುಡು ನಂಬಿಕೆಯಿಂದ ತನ್ನೆಲ್ಲಾ ಆರ್ಥಿಕ ವಹಿವಾಟುಗಳನ್ನು ಪೂರ್ತಿಯಾಗಿ ಆತನಿಗೆ ಕೊಟ್ಟು ಬಿಟ್ಟಿದ್ದಳು.
ಈ ಬಗ್ಗೆ ಗೊತ್ತಾದ ಆಕೆಯ ಪೋಷಕರು ಇದನ್ನು ವಿರೋಧಿಸಿದಾಗ, ಅವರ ಜೊತೆ ಜಗಳ ಆಡಿ ಅವರೊಂದಿಗೆ ವೈಮನಸ್ಸು ಮಾಡಿಕೊಂಡು ದೂರ ಆಗಿದ್ದರು. ಇತ್ತ ರಾಹುಲ್ ಮಾತ್ರ ಪ್ರತ್ಯೂಷಾಳ ಇರೋ ಬರೋ ದುಡ್ಡನ್ನೆಲ್ಲಾ ಖರ್ಚು ಮಾಡಿದ್ದ, ಕೊನೆಗೆ ಪ್ರತ್ಯೂಷಾ ತನ್ನ ಖರ್ಚಿಗೆ ರಾಹುಲ್ ಬಳಿ ಕೈ ಚಾಚುವಂತೆ ಆಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ರಾಹುಲ್’ಗೆ.
ಹಿಂದೆ ಸಾಲೋನಿ ಶರ್ಮಾ ಜೊತೆ ಇದ್ದ ಸಂಬಂಧದ ಬಗ್ಗೆಯೂ ಗೊತ್ತಾಗಿತ್ತು. ಇದು ಮಾಧ್ಯಾಮಗಳಲ್ಲಿ ಸುದ್ದಿಯಾದಾಗ ರಾಹುಲ್, ತನಗೂ ಪ್ರತ್ಯೂಷಾಗೂ ಯಾವುದೇ ಸಂಬಂಧ ಇಲ್ಲ, ತನ್ನ ಗರ್ಲ್ ಫ್ರೆಂಡ್ ಸಾಲೋನಿ ಎಂಬುದಾಗಿ ಹೇಳಿಕೊಂಡಿದ್ದ, ತನ್ನನ್ನು ರಾಹುಲ್ ಸ್ವಾರ್ಥಕ್ಕಾಗಿ ಬಳಸಿಕೊಂಡ ಅನ್ನುವ ಸತ್ಯದ ಅರಿವಾಗಿ ಪ್ರತ್ಯೂಷಾ ಮಾನಸಿಕ ಕುಗ್ಗಿ ಹೋಗಿದ್ದಳು. ಇತ್ತ ಮಾಧ್ಯಮಗಳಲ್ಲಿ ಪ್ರತ್ಯೂಷಾ ಬಗ್ಗೆ.
ಬೇರೆ ಬೇರೆ ರೀತಿಯ ಸುದ್ದಿಗಳ ಪ್ರಸಾರ, ಇನ್ನೊಂದೆಡೆ ತಂದೆ ತಾಯಿ ಜೊತೆ ವೈಮನಸ್ಸು, ಮತ್ತೊಂದೆಡೆ ರಾಹುಲ್ ಮೋಸ ಎಲ್ಲವೂ ಒಟ್ಟಾಗಿ ಜೀವನವೇ ಬೇಡ ಅನ್ನುವ ನಿರ್ಧಾರಕ್ಕೆ ಬಂದಿದ್ದ ಪ್ರತ್ಯೂಷಾ, ಕೊನೆಯದಾಗಿ ರಾಹುಲ್’ಗೆ ಫೋನ್ ಮಾಡಿ ತಾನು ಸಾಯುತ್ತಿರುವುದಾಗಿ ಹೇಳಿ 2016 ರ ಏಪ್ರಿಲ್ 1 ರಂದು ನೇಣಿಗೆ.
ಶರಣಾಗಿದ್ದಳು. ತಕ್ಷಣ ರಾಹುಲ್ ಅಲ್ಲಿ ಓಡೋಡಿ ಬಂದರೂ ಆಗಲೇ ಪ್ರತ್ಯೂಷಾ ಪ್ರಾಣ ಹಾರಿ ಹೋಗಿತ್ತು. ಪೊಲೀಸ್ ತನಿಖೆ ವೇಳೆ ಪ್ರತ್ಯೂಷಾ ಗರ್ಭಿಣಿ ಆಗಿದ್ದರು ಅನ್ನುವ ಕೆಲವು ಸಂಶಯಗಳು ಕೂಡ ಹುಟ್ಟಿತ್ತು. ಈ ರೀತಿ ಪ್ರತ್ಯೂಷಾ ತನ್ನ ಉಜ್ವಲ ಭವಿಷ್ಯಕ್ಕೆ ತಾನೇ ಕೊಳ್ಳಿ ಇಟ್ಟಿದ್ದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.