ಪ್ರಭಾಕರ್ ಗೆ ಟೈಗರ್ ಎಂಬ ಹೆಸರು ಬಂದಿದ್ದೆ ಅಣ್ಣಾವ್ರ ಈ ಸಿನಿಮಾದಿಂದ ಅನ್ನೋದು ನಿಮಗೆ ಗೊತ್ತಾ?? ಅಷ್ಟಕ್ಕೂ ಯಾವ ಸಿನಿಮಾ ಅದು ನೋಡಿ!
ಕನ್ನಡದ ಖ್ಯಾತ ಖಳನಾಯಕ ಟೈಗರ್ ಪ್ರಭಾಕರ್ ಅವರನ್ನು ಎಲ್ಲರೂ ಪ್ರೀತಿಯಿಂದ ಟೈಗರ್ ಎಂದು ಕರೆಯುತ್ತಾರೆ. ಟೈಗರ್ ಪ್ರಭಾಕರ್ ಅವರ ಮ್ಯಾನರಿಸಂ ನಟನೆ ಎಲ್ಲವನ್ನೂ ನೋಡಿ ಇವರಿಗೆ ಟೈಗರ್ ಎನ್ನುವ ಹೆಸರು ಬಂದಿದೆ. ಹೌದು ಅಣ್ಣಾವ್ರ ಸಿನಿಮಾ ಮತ್ತು ಡಾ ರಾಜ್ ಕುಮಾರ್ ಅವರ ಬ್ಯಾನರ್ ನಲ್ಲಿ ಬಂದ ಆ ಒಂದು ಸಿನಿಮಾದಿಂದ ಪ್ರಭಾಕರ್ ಅವರಿಗೆ ಟೈಗರ್ ಎನ್ನುವ ಹೆಸರು ಬಂದಿತು.
ಟೈಗರ್ ಪ್ರಭಾಕರ್ ಅವರು ಡಾ.ರಾಜ್ ಕುಮಾರ್ ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಕೂಡ ಟೈಗರ್ ಪ್ರಭಾಕರ್ ಅವರು ವಿಲನ್ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ಟೈಗರ್ ಪ್ರಭಾಕರ್ ಅವರಿಗೆ ಸಂಭಾಷಣೆ ಸಂಭೋದನೆ ಯಾವುದು ಕೂಡ ಇರುತ್ತಿರಲಿಲ್ಲ. ಆದರೆ ಕಲೆ ಒಂದು ದೇವತೆ ಎಂದು ನಂಬಿ ಅದನ್ನು ಸ್ವೀಕರಿಸಿ ಒಳ್ಳೆಯ ನಟನೆಯನ್ನು ನೀಡುತ್ತಿದ್ದರು.
1978 ರಲ್ಲಿ ಬಿಡುಗಡೆಯಾಗಿದ್ದ ಅಣ್ಣಾವ್ರ ಶಂಕರ್ ಗುರು ಚಿತ್ರದಿಂದ ಪ್ರಭಾಕರ್ ಅವರಿಗೆ ಟೈಗರ್ ಎನ್ನುವ ಹೆಸರು ಬಂದಿತು. ಈ ಸಿನಿಮಾ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಈ ಸಿನಿಮಾ ಆಗಿನ ಕಾಲದಲ್ಲಿ ತುಂಬಾನೇ ಯಶಸ್ವಿಯಾಯಿತು. ಇದರ ಜೊತೆಗೆ ಸಾಗರ್ ಥಿಯೇಟರ್ ನಲ್ಲಿ 1 ವರ್ಷಗಳ ಕಾಲ ಈ ಸಿನಿಮಾ ಓಡಿ ಭರ್ಜರಿ ಕಲೆಕ್ಷನ್ ಅನ್ನು ಸಹ ಮಾಡಿತ್ತು.
ಈ ಸಿನಿಮಾದಲ್ಲಿ ಡಾ.ರಾಜಕುಮಾರ್ ಅವರ ಜೊತೆಗೆ ಟೈಗರ್ ಪ್ರಭಾಕರ್, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಇನ್ನೂ ಮುಂತಾದವರು ನಟಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ತೂಗುದೀಪ ಶ್ರೀನಿವಾಸ್ ಅವರಿಗೆ ಟೈಗರ್ ಪ್ರಭಾಕರ್ ಅವರ ಹಿಂದೆ ಹೋಗಿ ಅವರ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿ ತೂಗುದೀಪ ಶ್ರೀನಿವಾಸ್ ಅವರು ಪ್ರಭಾಕರ್ ಅವರನ್ನು ಟೈಗರ್ ಟೈಗರ್ ಎಂದು ಕರೆಯುತ್ತಾರೆ.
ಇನ್ನು ಶಂಕರ್ ಗುರು ಚಿತ್ರವನ್ನು ಚಿ ಉದಯಶಂಕರ್ ಅವರು ನಿರ್ದೇಶಿಸಿದ್ದು ಇವರು ನೀಡಿದ ಟೈಗರ್ ಎನ್ನುವ ಹೆಸರು ಪ್ರಭಾಕರ್ ಅವರಿಗೆ ಮುಂದಿನ ದಿನಗಳಲ್ಲಿ ಎಲ್ಲರೂ ಟೈಗರ್ ಪ್ರಭಾಕರ್ ಎಂದೇ ಕರೆಯುತ್ತಿದ್ದರು. ಹಾಗಾಗಿ ಈ ಚಿತ್ರದಿಂದ ಪ್ರಭಾಕರ್ ಅವರಿಗೆ ಟೈಗರ್ ಎನ್ನುವ ಹೆಸರು ಬಂದಿತು. ಅಲ್ಲಿಂದ ಇವರನ್ನು ಎಲ್ಲರೂ ಟೈಗರ್ ಪ್ರಭಾಕರ್ ಎಂದೇ ಕರೆಯುತ್ತಾರೆ…..