ಕಿರುತೆರೆಯ ಜನಪ್ರಿಯ ನಟಿ ರಂಜನಿ ರಾಘವನ್ ಅವರು ಪ್ರಪಂಚದಲ್ಲಿ ಇರುವ ಏಕೈಕ ಕನ್ನಡಾಂಬೆಯ ದೇವಸ್ಥಾನವನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು ರಂಜನಿ ರಾಘವನ್ ಅವರು ಏಕೈಕ ಭುವನೇಶ್ವರಿ ದೇವಸ್ಥಾನದ ಆಲಯವನ್ನು ವೀಡಿಯೋ ಮಾಡಿಕೊಂಡು ದೇವಿಗೆ ಭುವನೇಶ್ವರೀದೇವಿ ಎನ್ನುವ ಹಾಡನ್ನು ಕೂಡ ಸ್ವತಃ ಹಾಡಿದ್ದಾರೆ.
ಈ ಹಾಡನ್ನು ರಂಜನಿ ಅವರು ತುಂಬಾ ಅದ್ಭುತವಾಗಿ ಹಾಡಿದ್ದಾರೆ ಎಂದು ಹೇಳಬಹುದು. ಇನ್ನೂ ಈ ಏಕೈಕ ಕನ್ನಡಾಂಬೆಯ ದೇವಸ್ಥಾನವು ಸಿದ್ಧಾಪುರದ ಭುವನಗಿರಿ ಎನ್ನುವ ಹಳ್ಳಿಯಲ್ಲಿ ಇದೆ. ಇನ್ನೂ ಈ ದೇವಾಲಯವನ್ನು ಭುವನೇಶ್ವರಿ ದೇವಾಲಯ ಎಂದು ಸಹ ಕರೆಯುತ್ತಾರೆ. ಇಲ್ಲಿ ನೀವು ಪ್ರಪಂಚದ ಏಕೈಕ ಕನ್ನಡಾಂಬೆ ದೇವಸ್ಥಾನದ ವೀಡಿಯೋವನ್ನು ನೋಡಬಹುದು.
ಇನ್ನೂ ರಂಜನಿ ರಾಘವನ್ ಅವರು ಮಾರ್ಚ್ 29 1994 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪುಟ್ಟಗೌರಿ ಮದುವೆ ಎನ್ನುವ ಧಾರಾವಾಹಿಯಲ್ಲಿ ಗೌರಿ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನ ಇವರು ನಾಗವೇಣಿ ಎನ್ನುವ ಚಿಕ್ಕ ಪಾತ್ರದಲ್ಲಿ ಕಿಲಾಡಿ ಚನ್ನಮ್ಮ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ತದನಂತರ ಆಕಾಶದೀಪ ಎನ್ನುವ ಸೀರಿಯಲ್ ನಲ್ಲೂ ಕೂಡ ಅಭಿನಯಿಸಿದ್ದಾರೆ. ಇದಾದ ಮೇಲೆ ಇಷ್ಟದೇವತೆ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಇದೀಗ ರಂಜನಿ ರಾಘವನ್ ಅವರು ಕನ್ನಡಿತಿ ಎನ್ನುವ ಧಾರಾವಾಹಿಯಲ್ಲಿ ಪ್ರಸ್ತುತ ನಟನೆ ಮಾಡುತ್ತಿದ್ದಾರೆ.
ಕನ್ನಡತಿ ಧಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಈ ಸೀರಿಯಲ್ ಗಾಗಿ ರಂಜನಿ ಅವರು ತುಂಬಾ ಕಷ್ಟ ಪಡುತ್ತಿದ್ದಾರೆ ಎಂದು ಹೇಳಬಹುದು. ಇದರ ಜೊತೆಗೆ ಪೌರ್ಣಮಿ ತಿಂಕಲ್ ಎನ್ನುವ ಮಲಯಾಳಂ ಧಾರಾವಾಹಿಯಲ್ಲೂ ಕೂಡ ಅಭಿನಯಿಸಿದ್ದಾರೆ.
ಇನ್ನೂ ಬೆಳ್ಳಿತೆರೆಯಲ್ಲಿ ನೋಡಿದರೆ 2017 ರಲ್ಲಿ ರಾಜಹಂಸ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ತದನಂತರ ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ರಂಜನಿ ರಾಘವನ್ ಅವರು ಕಥೆ ಡಬ್ಬಿ ಎನ್ನುವ ಪುಸ್ತಕವನ್ನು ಕೂಡ ಬರೆದಿದ್ದಾರೆ. ಈ ಪುಸ್ತಕವು 6 ತಿಂಗಳಿನಲ್ಲಿ 15 ಕ್ಕಿಂತ ಹೆಚ್ಚು ಎಡಿಷನ್ ಗಳಷ್ಟು ಮಾರಾಟವಾಗಿದೆ…..