ಪೊಲೀಸ್ ಸ್ಟೋರಿ ಖ್ಯಾತಿಯ ನಟ ಸತ್ಯ ಪ್ರಕಾಶ್ ನಮ್ಮ ಶಿವರಾಜ್ ಕುಮಾರ್ ಅವರ ಬಗ್ಗೆ ಹೀಗೆ ಹೇಳಿದ್ದಾದರೂ ಯಾಕೆ, ಅಂತಾದ್ ಏನಿದೆ ಗೊತ್ತೇ ??
ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುವ ಇವರು ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ. ಇವರ ಸಿನಿಮಾಗಳೆಂದರೆ ಎಲ್ಲರಿಗೂ ಸಹ ಅಚ್ಚುಮೆಚ್ಚು. ತಾವು ನಟಿಸಿದ ಮೊದಲ ಮೂರು ಚಿತ್ರಗಳೂ ಸಹ.
ಹಿಟ್ ಆದ ನಂತರ ಇವರಿಗೆ ಕರುನಾಡ ಜನತೆ ಪ್ರೀತಿಯಿಂದ ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನು ನೀಡಿದರು. ತಮ್ಮ ತಂದೆಯಂತೆಯೇ ಸರಳ ವ್ಯಕ್ತಿತ್ವ ಹೊಂದಿರುವ ಇವರು ಅವರ ಹಾದಿಯಲ್ಲೇ ನಡೆಯುತ್ತಾ ತಮ್ಮ ತಂದೆಯ ಆದರ್ಶದಂತೆ ನಡೆಯತ್ತಿದ್ದಾರೆ. ಇವರು ತೆರೆಯ ಮೇಲ ಬಂದರೆ ಸಾಕು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಇವರ.
ನಟನೆ ಹಾಗೂ ಡ್ಯಾನ್ಸ್ ಎಲ್ಲರಿಗೂ ಸಹ ಅಚ್ಚು ಮೆಚ್ಚು. ಪಾತ್ರ ಯಾವುದೇ ಇರಲಿ ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಳ್ಳುವ ನಮ್ಮ ಶಿವಣ್ಣನ ಎನರ್ಜಿಗೆ ಅವರೇ ಸಾಟಿ.ಇಷ್ಟೇ ಅಲ್ಲದೆ ಶಿವಣ್ಣ ಎಂದರೆ ನಮ್ಮ ಸಿನಿ ತಾರೆಯರಿಗೂ ಸಹ ಅಷ್ಟೆ ಅಚ್ಚು ಮೆಚ್ಚು ಹಾಗು ಗೌರವ ಎಂದೇ ಹೇಳಬಹುದು. ಎಲ್ಲಾ ಭಾಷೆಯ ಚಿತ್ರರಂಗದ ತಾರೆಯರಿಗೂ ಸಹ ಶಿವಣ್ಣ ಎಂದರೆ.
ಎಲ್ಲಿಲ್ಲದ ಪ್ರೀತಿ ಹಾಗೂ ಗೌರವ. ಇನ್ನು ಇತ್ತೀಚೆಗೆ ನಟ ಸತ್ಯ ಪ್ರಕಾಶ್ ಅವರು ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಮ್ಮ ಶಿವಣ್ಣನ ಸರಳತೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಕೆಲ ಸಿನಿಮಾಗಳಲ್ಲಿ ಶಿವಣ್ಣನ ಜೊತೆ ನಟಿಸಿರುವ ಸತ್ಯ ಪ್ರಕಾಶ್ ಅವರು ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಘಾಯಲ್ ನ ಕನ್ನಡ ಅವತರಣಿಕೆಯಾದ ವಿಶ್ವ ಚಿತ್ರದ ಶೂಟಿಂಗ್ ವೇಳೆಯಲ್ಲಿ.
ನಡೆದ ಪ್ರಸಂಗವೊಂದನ್ನು ನೆನೆಪಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಘಾಯಲ್ ಸಿನಿಮಾದಲ್ಲಿ ವಿಲನ್ ಆಗಿದ್ದವರು ನಟ ಅಮರೀಶ್ ಪುರಿ. ಈ ಪಾತ್ರವನ್ನು ಕನ್ನಡದಲ್ಲಿ ಸತ್ಯ ಪ್ರಕಾಶ್ ಅವರು ನಿರ್ವಹಿಸುತ್ತಿದ್ದರು. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದ್ದ ವೇಳೆಯಲ್ಲಿ ಸಂಜೆ 7 ಗಂಟೆಗೆ ಬರಬೇಕಿದ್ದ ಶಿವಣ್ಣ ಅವರು ಬೇರೊಂದು ಚಿತ್ರದ ಕೆಲಸ ಮುಗಿಸಿ ಬರುವಾಗ 9 ಗಂಟೆಯಾಗಿತ್ತು.
ಎಲ್ಲರನ್ನೂ ಸಹ ಕಾಯುವಂತೆ ಮಾಡಿದೆನೆಂದು ಭಾವಿಸಿದ ಶಿವಣ್ಣ ಬಂದ ಕೂಡಲೇ ಅಲ್ಲಿಯೇ ಬಟ್ಟೆ ಬದಲಾಯಿಸಿ ಮುಖ ತೊಳೆದು ಮೇಕಪ್ ಗೆ ಕುಳಿತುಬಿಟ್ಟರಂತೆ. ಕರುನಾಡ ಚಕ್ರವರ್ತಿಯಂತಿದ್ದ ಡಾ|| ರಾಜ್ ಕುಮಾರ್ ಮಗನಾದರೂ ಸಹ ಕೊಂಚವೂ ಸಹ ಅಳುಕಿಲ್ಲದೆ ನಿಂತಲ್ಲಿಯೇ ಬಟ್ಟೆ ಬದಲಿಸಿ ಶೂಟಿಂಗ್ ಗಾಗಿ ತಯಾರಾಗಿ ಅಷ್ಟೇ ಎನರ್ಜಿಯಿಂದ ನಟಿಸಿದ್ದನ್ನು ನೋಡಿ ಸ್ವತಃ.
ಸತ್ಯ ಪ್ರಕಾಶ್ ಅವರೇ ಶಾಕ್ ಆದರಂತೆ. ರಾಜ್ ಕುಟುಂಬದ ಕುಡಿಯಾದರೂ ಸಹ ಕಿಂಚಿತ್ತು ಅಹಂಕಾರವಿಲ್ಲದೆ ಅವರು ನಡೆದುಕೊಂಡ ರೀತಿಗೆ ಸತ್ಯ ಪ್ರಕಾಶ್ ಅವರಿಗೆ ಏನು ಹೇಳಬೇಕೆಂಬುದೇ ತೋಚಲಿಲ್ಲ. ಶಿವಣ್ಣ ಅವರು ದೊಡ್ಡ ಕುಟುಂಬದ ಮಗನಾದರೂ ಸಹ ಎಷ್ಟೇ ದೊಡ್ಡ ನಟನಾದರೂ ಸಹ ನಿಜ ಜೀವನದಲ್ಲಿ ಬಹಳ ಸರಳತೆಯ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಅದ್ದರಿಂದಲೇ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಹ ಶಿವಣ್ಣ ಎಂದರೆ ಎಲ್ಲರಿಗೂ ಸಹ ಅಚ್ಚು ಮೆಚ್ಚು…..