ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರ ಡಾನ್ಸ್ ನೋಡಿ ಸೂಪರ್ ಎಂದ ನೆಟ್ಟಿಗರು ವೈರಲ್ ವಿಡಿಯೋ ಇಲ್ಲಿದೆ ನೋಡಿ !!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ ಈಗಾಗಲೇ 9 ತಿಂಗಳು ಆಗಿದೆ. ಇನ್ನು ಪುನೀತ್ ಅವರು ಅಕ್ಟೋಬರ್ 29 2021 ರಂದು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದರು. ಇವರ ಮರಣದಿಂದ ಪುನೀತ್ ಕುಟುಂಬದವರು ಅಭಿಮಾನಿಗಳು ಇನ್ನೂ ಸಾಕಷ್ಟು ಜನರು ಈಗಲೂ ಸಹ ನೋವಿನಲ್ಲಿಯೇ ಕಾಲವನ್ನು ಕಳೆಯುತ್ತಿದ್ದಾರೆ.
ಇನ್ನು ಪುನೀತ್ ಅವರು ಬದುಕಿದ್ದಾಗ ಸಾಕಷ್ಟು ಬಡವರಿಗೆ ಅನಾಥರಿಗೆ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಆದರೆ ಈ ವಿಷಯದ ಬಗ್ಗೆ ಒಂದು ಕೂಡ ಆಗ ಗೊತ್ತಿರಲಿಲ್ಲ. ಆದರೆ ಇವರು ಹೋದ ಮೇಲೆ ಇವರು ಮಾಡಿರುವ ಅಪಾರ ಸಾಮಾಜಿಕ ಸೇವೆಗಳು ಬೆಳಕಿಗೆ ಬಂದವು. ಇದರಿಂದ ಎಲ್ಲರಿಗೂ ಪುನೀತ್ ಅವರ ಮೇಲೆ ಇನ್ನೂ ಹೆಚ್ಚು ಒಲವು ಮತ್ತು ಗೌರವ ಬಂದಿದೆ.
ಹಾಗೆಯೇ ಪುನೀತ್ ರಾಜ್ ಕುಮಾರ್ ಅವರು ಭೋಜನ ಪ್ರಿಯರು ಕೂಡ ಆಗಿದ್ದರು. ಇನ್ನು ಇವರು ಯಾವುದೇ ಹೋಟೆಲ್ ಅಥವಾ ರಸ್ತೆ ಬದಿಯಲ್ಲಿ ಆಗಿರಬಹುದು ಊಟ ಚೆನ್ನಾಗಿದ್ದರೆ ಅಲ್ಲಿ ಹಿಂದೆ ಮುಂದೆ ನೋಡದೆ ತಿನ್ನುತ್ತಿದ್ದರು. ಇನ್ನು ಪುನೀತ್ ಅವರನ್ನು ಇಷ್ಟ ಪಡದೇ ಇರುವವರು ಯಾರು ಇಲ್ಲ. ಇವರಿಗೆ ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ.
ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಕೂಡ ಪುನೀತ್ ಅವರ ಸಾವಿನ ಮರಣವನ್ನು ಕೇಳಿ ವಿದೇಶಿಗರು ಕಣ್ಣೀರನ್ನು ಹಾಕಿದ್ದಾರೆ. ಇನ್ನು ಪುನೀತ್ ಅವರ ಮನಸ್ಸು ಮಕ್ಕಳ ಮನಸ್ಸು ಎಂದು ಹೇಳಬಹುದು. ಪುನೀತ್ ಅವರು ಯಾರನ್ನು ಭೇದ ಭಾವ ಮಾಡದೆ ಎಲ್ಲರನ್ನೂ ತುಂಬಾ ನಗುನಗುತ್ತಾ ಮಾತನಾಡಿಸುತ್ತಿದ್ದರು. ಇವರದ್ದು ಯಾವಾಗಲೂ ನಗು ಮುಖ ಆಗಿರುತ್ತಿತ್ತು.
ಇನ್ನೂ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರು ಒಂದು ಕಾರ್ಯಕ್ರಮದ ವೇದಿಕೆಯ ಮೇಲೆ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಈ ಅಪರೂಪದ ಕ್ಷಣಗಳನ್ನು ಈಗ ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಡ್ಯಾನ್ಸ್ ವಿಡಿಯೋವನ್ನು ಇಲ್ಲಿ ನೀವು ನೋಡಬಹುದು…..