Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ ಆಸ್ಪತ್ರೆ ಇದೇ ನೋಡಿ..!! ನಿಜಕ್ಕೂ ಕಣ್ಣೀರು ಬರುತ್ತದೆ ಕಂಡ್ರಿ…

0

ನಮಸ್ಕಾರ ಸ್ನೇಹಿತರೇ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 1975 ಮಾರ್ಚ್ 17 ರಂದು 6: 07 ನಿಮಿಷಕ್ಕೆ ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರ ನಟ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಪುತ್ರನಾಗಿ ಜನಿಸಿದರು.

ಇವರ ಹಿರಿಯ ಸಹೋದರರಾದ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು ಕೊಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ನಟರು. ಪುನೀತ್ ಅವರು ರಾಜ್ ದಂಪತಿಗಳ ಕಿರಿಯ ಮಗನಾಗಿ ದ್ದರಿಂದ ಬಹಳ ಎಲ್ಲರೂ ಪ್ರೀತಿಯಿಂದ ಬೆಳೆದರು.

ಪುನೀತ್ ಮತ್ತು ಸಹೋದರಿ ಪೂರ್ಣಿಮಾ ಅವರನ್ನು ರಾಜ್ ಕುಮಾರ್ ಅವರು ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು. ಪುನೀತ್ ಅವರು ಆರು ತಿಂಗಳ ಮಗುವಾಗಿದ್ದಾಗ 1976 ರಲ್ಲಿ.

ತೆರೆಕಂಡ ಪ್ರೇಮದ ಕಾಣಿಕೆ ಚಿತ್ರದ ಮೂಲಕ ತೆರೆಮೇಲೆ ರಾರಾಜಿಸಿದರು. ನಂತರ ಬಂದ ಸನಾದಿ ಅಪ್ಪಣ್ಣ ,ತಾಯಿಗೆ ತಕ್ಕ ಮಗ , ವಸಂತಗೀತ, ಭೂಮಿಗೆ ಬಂದ ಭಗವಂತ , ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯವನ್ನು ಎಲ್ಲೆಡೆ ಚಾಚಿ ಬೆಳೆದರು.

ಭಾಗ್ಯವಂತ ಚಿತ್ರದ ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ಮತ್ತು ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನು ನಮ್ಮ ಶಿವ , ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಅಮ್ಮನು ತಾನೆ ಮುಂತಾದ ಹಾಡುಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿ ಸಹ ಪ್ರಶಂಸೆ.

ಪಡೆದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದುಕೊಂಡರು.1984 ರಲ್ಲಿ ತೆರೆಕಂಡ ಬೆಟ್ಟದ ಹೂವು ಚಲನಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ಕೊಡ.

ದೊರೆಯಿತು.2002 ರಲ್ಲಿ ತೆರೆಕಂಡ ಪೂರಿ ಜಗನ್ನಾಥ್ ನಿರ್ದೇಶನದ ಅಪ್ಪು ಚಿತ್ರದ ಮೂಲಕ ನಾಯಕ ನಟರಾಗಿ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಈ ಚಿತ್ರ ಅಪ್ಪು ಅವರಿಗೆ ಬಹಳ ಅದ್ದೂರಿ ಯಶಸ್ಸನ್ನು.

ತಂದುಕೊಟ್ಟಿತು. ನಂತರ ತೆರೆಗೆ ಬಂದ ಅಭಿ ,ವೀರ ಕನ್ನಡಿಗ , ಮೌರ್ಯ, ಆಕಾಶ್, ನಮ್ಮ ಬಸವ ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೇ ದಾಖಲೆ ಮಾಡಿ ಅದ್ದೂರಿ ಕಲೆಕ್ಷನ್ ಮಾಡಿದವು.

ಇವರು ನಾಯಕ ನಟನಾಗಿ ನಟಿಸಿದ ಮೊದಲ 10 ಚಿತ್ರಗಳು ಶತದಿನ ಪೂರೈಸಿತ್ತು ದಾಖಲೆ. ನಾಯಕನಾಗಿ ಎರಡು ರಾಜ್ಯಪ್ರಶಸ್ತಿ 4 ಫಿಲಂ ಫೇರ್,2 ಸೈನಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 29 2021ರಂದು ಲಘು ಹೃದಯಾಘಾತ ದಿಂದ.

ತಮ್ಮನ್ನೆಲ್ಲ ಅಗಲಿದರು. ಪುನೀತ್ ರಾಜಕುಮಾರ್ ಅವರು ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಬಹಳ ಅಪಾರ. ಮತ್ತು ಅವರು ಮಾಡಿರುವ ಸಮಾಜಮುಖಿ ಒಳ್ಳೆಯ ಕೆಲಸ ಕಾರ್ಯಗಳನ್ನು ನೋಡಿ ಮತ್ತು ಅವರ ಅಪಾರ ಜನಸೇವೆ ಜನಪ್ರೀತಿ ಎಲ್ಲವನ್ನೂ ನೋಡಿ ಗಮನಿಸಿ ಮೈಸೂರು ವಿಶ್ವವಿದ್ಯಾಲಯ 2022 ಮಾರ್ಚ್ 22 ರಂದು ಪುನೀತ್.

ರಾಜಕುಮಾರ್ ಅವರಿಗೆ ಮರಣೋತ್ತರ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಕನ್ನಡ ಚಿತ್ರರಂಗದ ಟಾಪ್ ನಟರೊಬ್ಬರು ತಮ್ಮ ಜೀವನ ಮತ್ತು ಸಿನಿಜೀವನ ಉತ್ತುಂಗದ ಕಾಲದಲ್ಲಿ ನಿದನವಾಗಿದ್ದು ಕನ್ನಡ ಚಿತ್ರರಂಗದ.

ಪಾಲಿಗೆ ದೊಡ್ಡ ನಷ್ಟ ತಂದುಕೊಟ್ಟಿದೆ ಮತ್ತು ಅವರ ಅಪಾರ ಅಭಿಮಾನಿಗಳ ಮನಸ್ಸಿಗೆ ಎಂದೆಂದೂ ವಾಸೆ ಮಾಡಲಾಗದ ಗಾಯವನ್ನುಂಟು ಮಾಡಿದೆ. ಇದು ದುರ್ದೈವವೇ ಸರಿ….

Leave A Reply